ವಂಚಕರ ಕೈಕಕಟ್ಟಲು ಬಿಬಿಎಂಪಿ ಹೈಟೆಕ್ ತಂತ್ರ

ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸುವ ಯೋಜನೆಯನ್ನು ವಿಸ್ತರಿಸಲು ಬಿಬಿಎಂಪಿ ನಿರ್ಧರಿಸಿದೆ. ಐಡಿಬಿಐ ಬ್ಯಾಂಕ್ ಮಾತ್ರವಲ್ಲದೇ ಕಾರ್ಪೊರೇಷನ್ ಬ್ಯಾಂಕಿನಲ್ಲೂ ಆಸ್ತಿ ತೆರಿಗೆ ಪಾವತಿಸಲು ಅವಕಾಶ ನೀಡಿದೆ.
ನಕಲಿ ಖಾತೆ ಮತ್ತು ದಾಖಲೆಗಳ ಜಾಲವನ್ನು ತಡೆಗಟ್ಟಲು ಮಾಹಿತಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಇದಕ್ಕಾಗಿ ಬಯೋಮೆಟ್ರಿಕ್ ದಾಖಲೆಯನ್ನು ಪ್ರಸಕ್ತ ವರ್ಷ ಆರಂಭಿಸಲು ನಿರ್ಧರಿಸಲಾಗಿದೆ. ಫಿಂಗರ್ ಪ್ರಿಂಟ್ ಹೊಂದಾಣಿಕೆಯಾದರೆ ಮಾತ್ರ ಖಾತೆ ತೆರೆಯಲು ಸಾಧ್ಯವಾಗುವಂತಹ ವ್ಯವಸ್ಥೆ ಇದಾಗಿದೆ.
ಜಾಗತಿಕ ಮಾಹಿತಿ ವ್ಯವಸ್ಥೆ ಮೂಲಕ ಪರಿಣಾಮಕಾರಿಯಾಗಿ ಮಾಹಿತಿ ಸಂಗ್ರಹಿಸಲು ಮಲ್ಲೇಶ್ವರಂನಲ್ಲಿ ಡೇಟಾ ಕೇಂದ್ರವನ್ನು ತೆರೆಯಲು ಬಿಬಿಎಂಪಿ ನಿರ್ಧರಿಸಿದೆ. ಈ ವ್ಯವಸ್ಥೆ ಮೂಲಕ ಬೆಂಗಳೂರಿನ ಪ್ರತಿಯೊಂದು ರಸ್ತೆಗೆ ಶಾಶ್ವತ ರಸ್ತೆ ಸಂಖ್ಯೆ ನೀಡಲು ಉದ್ದೇಶಿಸಲಾಗಿದೆ. ಟಿಡಿಆರ್ ಪ್ರಕ್ರಿಯೆಗೆ ಮೊದಲು ಆಸ್ತಿ ಸಂಖ್ಯೆ ಮತ್ತು ರಸ್ತೆ ಸಂಖ್ಯೆಗಳನ್ನು ಒಳಗೊಂಡಂತೆ ವಿವರಗಳನ್ನು ದಾಖಲಿಸಲು ನಿರ್ಧರಿಸಲಾಗಿದೆ.
ಉದ್ಯೋಗಾವಕಾಶ: ಆರೋಗ್ಯ ಇಲಾಖೆಯಲ್ಲಿ ಮಾನವ ಸಂಪನ್ಮೂಲ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 134 ವಿವಿಧ ಹುದ್ದೆಗಳಿಗೆ ನೇಮಕ ಮಾಡಲಿದೆ. ಈಗಾಗಲೇ 89 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, 45 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವಂತೆ ಲೋಕಸೇವಾ ಆಯೋಗಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ.
ರಸ್ತೆಗಳಿಗೆ ಶಾಶ್ವತ ಸಂಖ್ಯೆ, ಆನ್ ಲೈನ್ ತೆರಿಗೆ ಪಾವತಿ, ಎಲ್ಲಾ ಆಸ್ತಿಪಾಸ್ತಿಗಳನ್ನು ತೆರಿಗೆ ವ್ಯಾಪ್ತಿಗೊಳಿಸಲು ತಂತ್ರಾಂಶ ಅಭಿವೃದ್ಧಿ, ಬಯೋಮೆಟ್ರಿಕ್ ಮೂಲಕ ಖಾತೆ ನೀಡುವುದು, ಪಾಲಿಕೆಯ ಎಲ್ಲಾ ಸದಸ್ಯರಿಗೂ ಪಾಲಿಕೆಯ ಸಂಪೂರ್ಣ ಮಾಹಿತಿಯಿರುವ ಕಾರ್ಪೋರೆಟ್ ಕಿಟ್ ನೀಡುವುದು ಸೇರಿದಂತೆ ಹಲವು ವಿನೂತನ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.












Click it and Unblock the Notifications