ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕಿ ಹರ್ಷಿತಾ ಅತ್ಯಾಚಾರ,ವಾಮಾಚಾರಕ್ಕೆ ಬಲಿ ಅಲ್ಲ?

By Mahesh
|
Google Oneindia Kannada News

Baby Harshitha Murder Mystery
ಬೆಂಗಳೂರು, ಜೂ.29: ಹುಣಸಮಾರನಹಳ್ಳಿಯಲ್ಲಿ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಬಾಲಕಿ ಹರ್ಷಿತಾ ಚಿಕ್ಕಜಾಲ ಸಮೀಪದ ಕೋಡಗಲ್ಲಹಟ್ಟಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಹರ್ಷಿತಾ ಸಾವಿನ ಬಗ್ಗೆ ಅನೇಕ ಊಹಾಪೋಹಗಳು ಎದ್ದಿತ್ತು.

ಬಾಲಕಿಯನ್ನು ಅತ್ಯಾಚಾರ ಮಾಡಿ ವಾಮಾಚಾರಿಗಳು ಕೊಲೆಗೈದಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ, ಶುಕ್ರವಾರ(ಜೂ.29) ತನಿಖಾ ಪ್ರಗತಿ ಬಗ್ಗೆ ಮಾತನಾಡಿದ ಡಿಸಿಪಿ ಡಾ. ರಮೇಶ್, 'ವಾಮಾಚಾರಕ್ಕೆ ಹರ್ಷಿತಾ ಬಲಿಯಾಗಿಲ್ಲ' ಎಂದಿದ್ದಾರೆ.

ಮಗುವಿನ ತಲೆ ಹತ್ತಿರ ಮಣ್ಣಿನ ಹೆಂಟೆಗಳು, ಕಲ್ಲು ಬಿದ್ದಿದೆ. ಹೆಂಟೆಗಳಿಂದ ತಲೆಗೆ ಹೊಡೆದು ಸಾಯಿಸಲಾಗಿದೆ. ಮೇಲ್ನೋಟಕ್ಕೆ ಇದು ವಾಮಚಾರವಲ್ಲದೆ ಬೇರೆ ಕಾರಣಕ್ಕೆ ಕೊಲೆಯಾಗಿರಬಹುದು ಎಂದು ಕಂಡು ಬರುತ್ತದೆ ಎಂದು ಡಿಸಿಪಿ ರಮೇಶ್ ಹೇಳಿದ್ದಾರೆ.

ಹರ್ಷಿತಾಳ ಕೊಲೆ ನಡೆದಿರುವುದು ಒಂದು ಕಡೆಯಾದರೆ, ಶವವನ್ನು ಬಂದು ಹಾಕಿರುವುದು ಇನ್ನೊಂದು ಕಡೆ, ಸುಳಿವು ಸಿಗದಿರುವಂತೆ ಮಾಡಲು ದುಷ್ಕರ್ಮಿಗಳು ಈ ರೀತಿ ಮಾಡಿದ್ದಾರೆ. ಆದರೆ, ಹರ್ಷಿತಾ ಕೊಲೆ ಪ್ರಕರಣದ ತನಿಖೆಗೆ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಹುಣಸಮಾರನಹಳ್ಳಿಯಲ್ಲಿರುವ ಅಶ್ವಥರೆಡ್ಡಿ ಅವರ ಮೊದಲ ಪುತ್ರಿ ಅನಿತಾ ಎಂಬುವರ ಮೊದಲ ಮಗಳು ಹರ್ಷಿತಾ (4). ಅನಿತಾ ಅವರು ತವರಿಗೆ ಎರಡನೇ ಮಗು ಹೆರಿಗೆಗೆ ಬಂದಿದ್ದರು. ಜೂ.25ರ ಬೆಳಗ್ಗೆ ಮನೆಯ ಮುಂದೆ ಆಟವಾಡುತ್ತಿದ್ದ ಹರ್ಷಿತಾ ನಾಪತ್ತೆಯಾಗಿದ್ದಳು.

ಪೋಷಕರು ಯಲಹಂಕ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ದನ ಕಾಯುವ ಹುಡುಗರು ಸಮೀಪದ ಕೆರೆಯೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿದೆ ಎಂದು ಪೊಲೀಸರಿಗೆ ವಿಷಯ ತಿಳಿಸಿದರು. ಅನಿತಾ ಕುಟುಂಬದವರು ಬಾಲಕಿಯ ಶವವನ್ನು ಗುರುತಿಸಿದ್ದರು.

ಹರ್ಷಿತಾಳ ತಾಯಿ ಹೇಳಿಕೆ ಪ್ರಕಾರ ಬುಡುಬುಡಿಕೆ ದಾಸಯ್ಯನೇ ಬಾಲಕಿಯನ್ನು ಕೊಂದಿದ್ದಾನೆ ಎಂದು ದೂರಿದ್ದಾರೆ. ಸೋಮವಾರ ಮನೆ ಮುಂದೆ ಬಂದು ನಿಲ್ಲುತ್ತಿದ್ದ ಬುಡುಬುಡಿಕೆ ದಾಸಯ್ಯನದ್ದೇ ಕೃತ್ಯ. ಭಿಕ್ಷೆ ಬೇಡುವ ನೆಪದಲ್ಲಿ ಬಾಲಕಿಯ ಬಟ್ಟೆ ನೀಡುವಂತೆ ಪೀಡಿಸುತ್ತಿದ್ದ. ಬಾಲಕಿಯ ಹಳೆ ಬಟ್ಟೆ ಯಾವುದು ಇಲ್ಲ ಎಂದು ಹೇಳಿದೆ.

ಆತ ಮುಂದಕ್ಕೆ ಹೋಗಿ ಸ್ವಲ್ಪದರಲ್ಲೇ ಹರ್ಷಿತಾ ನಾಪತ್ತೆಯಾಗಿದ್ದಾಳೆ. ಆಲ್ಲದೆ ಶವವನ್ನು ಪರೀಕ್ಷಿಸಿದಾಗ ಆಕೆಯ ಹೆಬ್ಬರಳು ಕತ್ತರಿಸಿದೆ. ಹೀಗಾಗಿ ವಾಮಾಚಾರಕ್ಕಾಗಿ ಮಗುವನ್ನು ಬಲಿಕೊಡಲಾಗಿದೆ ಎಂದು ಅನಿತಾ ಹೇಳಿದ್ದಾರೆ.

ಇನ್ನೊಂದು ಅಂಶದ ಪ್ರಕಾರ ಮಗುವಿನ ದೇಹದ ಮೇಲೆ ಅನೇಕ ಕಡೆ ಗಾಯದ ಗುರುತುಗಳಿದೆ. ಅತ್ಯಾಚಾರ ಎಸೆಗಿದ ದುಷ್ಕರ್ಮಿಗಳು ನಂತರ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಅದರೆ, ಇನ್ನೂ ಹರ್ಷಿತಾ ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ.

English summary
A 4-year-old Harshitha, who had gone missing on Monday, Jun 25, was found dead on Thursday. Her body was found near Koodagalahatti graveyard, Bangalore. Many people suspected that it was a case of human sacrifice but DCP G Ramesh confirmed it was not balck magic or human sacrifice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X