ಐಟಿ ಕಂಪನಿಗಳಿಗೆ ಅಲ್ ಖೈದಾ ದಾಳಿ ಭೀತಿ

ಹೈದರಾಬಾದ್‌, ಜೂನ್ 27: ರಾಜಕೀಯ ಅಸ್ಥಿರತೆಯೂ ಸೇರಿದಂತೆ ಈಗಾಗಲೇ ನಾನಾ ಕಾರಣಗಳಿಂದ ಬಸವಳಿದಿರುವ ಹೈದರಾಬಾದಿನ ಐಟಿ ಉದ್ಯಮಕ್ಕೆ ಈಗ ಮತ್ತೊಂದು ಕಂಟಕ ಎದುರಾಗಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯವೇ ಆಂಧ್ರ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ಕಳಿಸಿದೆ.

ತತ್ಪರಿಣಾಮವಾಗಿ ನಗರದಲ್ಲಿರುವ ಎಲ್ಲ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳಿಗೆ, ಅದರಲ್ಲೂ ಸೈಬರಾಬಾದಿನಲ್ಲಿರುವ ಅಮೆರಿಕದ ಕಂಪನಿಗಳಿಗೆ ಬಿಗಿ ಭದ್ರತೆ ಕಲ್ಪಿಸುವಂತೆ ಪೊಲೀಸರಿಗೆ ರಾಜ್ಯ ಸರಕಾರ ಆದೇಶಿಸಿದೆ.

ಹೈದರಾಬಾದ್ ಅಷ್ಟೇ ಅಲ್ಲದೆ ಐಟಿ ಸಾಂದ್ರತೆ ಹೆಚ್ಚಿರುವ ಬೆಂಗಳೂರಿನಂತಹ ನಗರಗಳಿಗೂ ಈ ಭಯ ಕಾಡುತ್ತಿದೆ. Microsoft, Google ಮತ್ತು Hewlett Packard ಅಂತಹ ವಿದೇಶಿ ಕಂಪನಿಗಳು ಸಾಫ್ಟ್ ಟಾರ್ಗೆಟ್ ಆಗಬಹುದು ಎಂದು ಗೃಹ ಸಚಿವಾಲಯ ತಿಳಿಸಿದೆ.

ಭಯೋತ್ಪಾದಕರಿಗೆ ಸಾಮಾನ್ಯವಾಗಿ ಸಾಫ್ಟ್ ವೇರ್ ಕಂಪನಿಗಳು ಸಾಫ್ಟ್ ಟಾರ್ಗೆಟ್ ಆಗುತ್ತವೆ. ಪ್ರಸ್ತುತ ಅಲ್ ಖೈದಾ ಭಯೋತ್ಪಾದಕ ಸಂಘಟನೆಯತ್ತ ಒಲವು ಹೊಂದಿರುವ ಉಗ್ರ ತಂಡಗಳಿಂದ ಇಂತಹ ಭೀತಿ ವಾದ ಕಾಣಿಸಿಕೊಂಡಿದೆ. ಗುಜರಾತಿನ ಕಛ್ ಗಡಿಯಿಂದ ಒಳನುಸುಳುಕೋರರು, ಶಂಕಿತ ಅಲ್ ಖೈದಾ ಭಯೋತ್ಪಾದಕರು ದೇಶದೊಳಕ್ಕೆ ನುಗ್ಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಸಿದೆ.

ಕೇಂದ್ರ ಗೃಹ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಪಂಕಜ್ ದ್ವಿವೇದಿ ಅವರೇ ಖುದ್ದಾಗಿ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ. ಇದರ ಜತೆಗೆ ಕಂಪನಿಗಳು ತನ್ನದೇ ಆಂತರಿಕ ಭದ್ರತೆಯನ್ನೂ ಬಿಗಿಗೊಳಿಸಿಕೊಳ್ಳಬೇಕು ಎಂದೂ ಅವರು ಕಿವಿಮಾತು ಹೇಳಿದ್ದಾರೆ.

ಭಾರತದ Silicon Valley ಬೆಂಗಳೂರು ಐಟಿಗೆ ಪೆಟ್ಟುಕೊಟ್ಟು ಸ್ವಲ್ಪ ಮುಂದೆ ಸಾಗಿದ್ದ ಹೈದರಾಬಾದ್ ಹಾಗೂ ಆಂಧ್ರದ ಇತರೆ ಭಾಗಗಳಾದ ವಿಜಯವಾಡ, ವಿಶಾಖಪಟ್ಟಣ ಮತ್ತಿತರ ಪ್ರಮುಖ ನಗರಗಳಲ್ಲಿ ಒಟ್ಟು 2.7 ಲಕ್ಷ ಮಂದಿ ಟೆಕ್ಕಿಗಳು ಉದ್ಯೋಗದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+