Get Updates
Get notified of breaking news, exclusive insights, and must-see stories!

ಮಾಲ್, ಮಲ್ಟಿಪ್ಲೆಕ್ಸ್ ಗಳಿಂದ 140 ಕೋಟಿ ತೆರಿಗೆ ಬಾಕಿ

BBMP Budget 2012-13
ಬೆಂಗಳೂರು, ಜೂ.27: ನಗರದ 8 ವಲಯಗಳಲ್ಲಿರುವ 107 ಮಾಲ್ ಮತ್ತು 6 ಮಲ್ಟಿಪೆಕ್ಸ್ ಕಟ್ಟಡಗಳಿಂದ 140 ಕೋಟಿ ರು,ಗಳಿಗೂ ಅಧಿಕ ತೆರಿಗೆ ಬಾಕಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಹಿರಿಯ ಸದಸ್ಯ ಎನ್ ಆರ್ ರಮೇಶ್ ಅವರು ಮೇಯರ್ ವೆಂಕಟೇಶ್ ಮೂರ್ತಿ ಅವರನ್ನು ಆಗ್ರಹಿಸಿದ್ದಾರೆ.

ಬುಧವಾರ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ರಮೇಶ್, ನಗರದಲ್ಲಿ ಒಟ್ಟು 107 ಮಾಲ್ ಗಳು ಮತ್ತು ಮಲ್ಟಿಪ್ಲೆಕ್ಸ್ ಗಳಿದ್ದರೂ ಕೇವಲ 37 ಮಾಲ್ ಗಳು, 6 ಮಲ್ಟಿ ಪೆಕ್ಸ್ ಗಳಿಂದ ಸಂಗ್ರಹವಾಗುತ್ತಿರುವ ತೆರಿಗೆ ಮೊತ್ತ 11 ಕೋಟಿ ರು ದಾಟುತ್ತಿಲ್ಲ. ಉಳಿದ ಬಾಕಿ ಮೊತ್ತ ಸಂಗ್ರಹಿಸಿ, ತೆರಿಗೆ ವಂಚನೆಯನ್ನು ತಪ್ಪಿಸಬೇಕಿದೆ ಎಂದು ಮೇಯರ್ ಗಮನಕ್ಕೆ ವಿಷಯ ತಂದರು.

8 ವಲಯಗಳಲ್ಲಿರುವ 107 ಮಾಲ್ ಗಳು ಸುಮಾರು 14 ಕೋಟಿ ಚದರ ಅಡಿಗಳ ವಿಸ್ತೀರ್ಣದ ಭೂಮಿ ಹೊಂದಿದೆ. ಆದರೆ, ಮಾಲ್ ಮಾಲೀಕರು ತೆರಿಗೆ ವಂಚಿಸುತ್ತಿದ್ದಾರೆ. ದೇಶದಲ್ಲಿ ಅತಿ ದೊಡ್ಡ 10 ಶಾಪಿಂಗ್ ಮಾಲ್ ಗಳಲ್ಲಿ 6 ಶಾಪಿಂಗ್ ಮಾಲುಗಳು ನಗರದಲ್ಲಿದೆ. ಈ ಪೈಕಿ ..

* 1 ಮಿಲಿಯನ್ ಚದರ ಅಡಿಗಳಿಗೂ ವಿಸ್ತೀರ್ಣವಿರುವ ಮಾಲ್ ಗಳು ಮತ್ತು ಮಲ್ಟಿಪೆಕ್ಸ್ ಗಳ ಸಂಖ್ಯೆ 21
* ಐದು ಲಕ್ಷ ಚದರ ಅಡಿ ವಿಸ್ತೀರ್ಣವಿರುವ ಕಟ್ಟಡಗಳ ಸಂಖ್ಯೆ 39
* 2 ಲಕ್ಷ ಚದರ ಅಡಿ ವಿಸ್ತೀರ್ಣವಿರುವ ಕಟ್ಟಡಗಳ ಸಂಖ್ಯೆ 26,
* 50 ಸಾವಿರ ಚದರ ಅಡಿಗಳಷ್ಟು ವಿಸ್ತೀರ್ಣವಿರುವ ಕಟ್ಟಡಗಳ ಸಂಖ್ಯೆ 21

ರಮೇಶ್ ಅವರ ಸಲಹೆಗೆ ಪ್ರತಿಕ್ರಿಯಿಸಿದ ಮೇಯರ್ ಡಿ ವೆಂಕಟೇಶ್ ಮೂರ್ತಿ ಅವರು ಮುಂದಿನ ದಿನಗಳಲಿ 107 ಮಾಲ್ ಗಳಿಂದ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬಿಬಿಎಂಪಿ ಬಜೆಟ್ ಕುತೂಹಲ : ಜೂ. 28 ರಂದು 2012-13ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆಎ ಮುನೀಂದ್ರ ಕುಮಾರ್ ಅವರು ಬಜೆಟ್ ಮಂಡಿಸಲಿದ್ದಾರೆ. ಚುನಾವಣಾ ದೃಷ್ಟಿಯಿಂದ ಹೆಚ್ಚು ತೆರಿಗೆ ಇಲ್ಲದ ಜನಪರ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಬಜೆಟ್ ಗಾತ್ರ 10,500 ಕೋಟಿ ರು.ಗೂ ಅಧಿಕ ಗಾತ್ರದ ಬಜೆಟ್ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಿದೆ.

ಮಲ್ಟಿಪ್ಲೆಕ್ಸ್ ಗಳು, ವಾಣಿಜ್ಯ ಸಂಕೀರ್ಣಗಳನ್ನು ನಗರದ ಹೊರವಲಯದಲ್ಲಿ ಮಾತ್ರ ಸ್ಥಾಪಿಸಲು ಅನುಮತಿ ನೀಡಲಾಗುವುದು. ಸ್ಯಾಂಕಿ ರಸ್ತೆ ವಿಸ್ತರಣೆ ಕಾಮಗಾರಿ ಇನ್ನು 15 ದಿನಗಳಲ್ಲಿ ಆರಂಭವಾಗಲಿದೆ ಎಂದು ಮೇಯರ್ ವೆಂಕಟೇಶ್ ಮೂರ್ತಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+