ಪ್ರೇಮಿಯ ಸಾಯಿಸಿದ ಪಾವಗಡ ಟೆಕ್ಕಿ ಪವನ್ ಆತ್ಮಹತ್ಯೆ

bangalore-techie-pawan-suicide-love-failure
ಬೆಂಗಳೂರು‌, ಜೂನ್ 27: ಪಾವಗಡ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಪವನ್‌ ಕುಮಾರ್ ಅಂಜಯ್ಯ (26) ಅಮೆರಿಕ ನ್ಯೂಜೆರ್ಸಿಯ ಡೆಲೆವರ್ ಹೋಟೆಲೊಂದರಲ್ಲಿ ಜೂನ್ 19ರಂದು ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ಪ್ರೇಮ ವೈಫಲ್ಯವಾ? ಏಕೆಂದರೆ 'ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿ ನಂತರ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಅಮೆರಿಕ ಪೊಲೀಸರು ಹೇಳಿದ್ದಾರೆ.

'ಪವನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅಮೆರಿಕದ ಡೆಲೆವರ್ ಕಡಲ ತೀರದ ಸಮೀಪ ಆ ಯುವತಿಯ ಶವ ಪತ್ತೆಯಾಗಿತ್ತು. ಇದರಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಕಂಪನಿಯ ಆಡಳಿತಾಧಿಕಾರಿಗಳು ಮಗುಮ್ಮಾಗಿ ಹೇಳಿರುವುದು ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಆದರೆ 'ಪವನ್, ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಮತ್ತು ಮದ್ಯ ಸೇವನೆ ಮಾಡಿ ಸಾವನ್ನಪ್ಪಿದ್ದಾರೆ' ಎಂದು ನ್ಯೂಜೆರ್ಸಿ ಬೆಲ್ಲೆವೆಲೆ ಪೊಲೀಸರು ಶಂಕಿಸಿದ್ದಾರೆ.

ಪವನ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಅಲ್ಲಿನ ಪೊಲೀಸರು ಹೆಚ್ಚಿನ ಬೆಳಕು ಚೆಲ್ಲಿದ್ದಾರೆ. ವಿವರ ಹೀಗಿದೆ: ಬೆಂಗಳೂರಿನ 26 ವರ್ಷದದ ಟೆಕ್ಕಿ ಪವನ್‌ಕುಮಾರ್, ಡೇನಿಯಲ್ ಮೆಹಲ್ಮನ್ ಎಂಬ ಶಿಕ್ಷಕಿಯನ್ನು ಪ್ರೀತಿಸುತ್ತಿದ್ದ. ಆದರೆ ಅದು ಏಕಮುಖ ಪ್ರೀತಿಯಾಗಿದ್ದು, ಮೆಹಲ್ಮನ್ ಪವನ್ ಪ್ರೀತಿಯನ್ನು ತಿರಸ್ಕರಿಸಿದ್ದಳು.

ಇದರಿಂದ ಬೇಸತ್ತ ಪವನ್, ನ್ಯೂಜೆರ್ಸಿಯಿಂದ 100 ಕಿ.ಮೀ. ದೂರದಲ್ಲಿರುವ ಡೆಲೆವರ್ ಬಳಿ ಹೋಟೆಲಿನಲ್ಲಿ ಚಾಕುವಿನಿಂದ ಆ ಯುವತಿಯನ್ನು ಭೀಕರವಾಗಿ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿದ್ದರು.

ಯುವತಿಯ ಹತ್ಯೆ ಆರೋಪದ ಮೇಲೆ ಪವನ್ ಬಂಧನಕ್ಕೆ ಅಮೆರಿಕ ನ್ಯಾಯಾಲಯವೊಂದು ಪವನ್ ಬಂಧನಕ್ಕೆ ವಾರೆಂಟ್ ಸಹ ಜಾರಿ ಮಾಡಿತ್ತು. ಇದರಿಂದ ಭೀತಿಗೊಳಗಾದ Cognizant ಟೆಕ್ಕಿ ಪವನ್‌ಕುಮಾರ್ ಜೂನ್ 19ರಂದು ಕಡಲತೀರದಲ್ಲಿ ಮದ್ಯ ಸೇವಿಸಿ, ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪವನ್, 2011ರ ಫೆಬ್ರವರಿಯಲ್ಲಿ ಅಮೆರಿಕಕ್ಕೆ ತೆರಳಿದ್ದ. ಪವನ್ ವಿರುದ್ಧ ಅಮೆರಿಕದ ಕಾನೂನುರೀತ್ಯ first-degree murder case ದಾಖಲಾಗಿದೆ. ಆದ್ದರಿಂದ ತನಿಖೆ ಪೂರ್ಣಗೊಳ್ಳದ ಹೊರತು, ಆತನ ಶವವನ್ನು ತಕ್ಷಣಕ್ಕೆ ಭಾರತಕ್ಕೆ ಕಳಿಸುವುದು ದೂರದ ಮಾತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರತಿಭಾವಂತ ಪವನ್ ಕಾಲೇಜಿನಲ್ಲಿ ಎಲ್ಲದರಲ್ಲೂ ಮುಂದಿದ್ದ. ಅವನು ಶಿಕ್ಷಕಿ ಮೆಹಲ್ಮನ್ ಳನ್ನು ಪ್ರೀತಿಸುತ್ತಿರುವುದಾಗಿ ನನಗೆ ಹೇಳಿದ್ದ ಎಂದು ಸ್ವತಃ ಶಿಕ್ಷಕಿಯಾದ ಪವನ್‌ಕುಮಾರನ ಸೋದರಿ ಗುಣಶೀಲಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+