• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಂಬಲ್ಡನ್ ಶುರು, ಮೊದಲ ದಿನವೇ ವೀನಸ್ ಔಟ್

By Mahesh
|
ಲಂಡನ್, ಜೂ.26: ಹುಲ್ಲಿನ ಅಂಕಣದಲ್ಲಿ ಆಡುವ ಏಕೈಕ ಗ್ರಾಂಡ್ ಸ್ಲಾಮ್ ವಿಂಬಲ್ಡನ್ 2012 ಜೂ.25ರಂದು ಆರಂಭವಾಗಿದೆ. ಮೊದಲ ದಿನವೇ ಸ್ಟಾರ್ ಆಟಗಾರ್ತಿ ವೀನಸ್ ವಿಲಿಯಮ್ಸ್ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ. ಉಳಿದಂತೆ ಅಗ್ರ ಶ್ರೇಯಾಂಕದ ಸೆರ್ಬಿಯಾದ ನೊವಾಕ್ ಜೊಕೋವಿಕ್ ಹಾಗೂ ಮೂರನೇ ಶ್ರೇಯಾಂಕದ ರೋಜರ್ ಫೆಡರರ್ ಮೊದಲ ಸುತ್ತಿನಲ್ಲಿ ಸುಲಭ ಜಯ ದಾಖಲಿಸಿದ್ದಾರೆ.

ಐದು ಬಾರಿ ವಿಂಬಲ್ಡನ್ ಚಾಂಪಿಯನ್ ಜಯಿಸಿರುವ ವೀನಸ್ ವಿಲಿಯಮ್ಸ್ 79ನೆ ಶ್ರೇಯಾಂಕಿತೆ ರಷ್ಯಾದ ಎಲೆನಾ ವೆಸ್ನಿನಾ ವಿರುದ್ಧ 6-1, 6-3 ಅಂತರದಿಂದ ಸೋತು ಹೊರ ನಡೆದು ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಟ್ ಫೆವರೀಟ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿನೊಂದಿಗೆ ಪ್ರಶಸ್ತಿ ಎತ್ತುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ.

ಸತತ ಮೂರು ಗ್ರಾನ್ ಸ್ಲಾಮ್ ಗೆದ್ದಿರುವ ಜೊಕೋವಿಕ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ಜೂಹಾನ್ ಕಾರ್ಲೊಸ್ ಫೆರ್ರೆರೊ ವಿರುದ್ಧ 6-3, 6-3, 6-1 ಸೆಟ್‌ಗಳಿಂದ ಗೆಲುವು ಸಾಧಿಸಿದರು. ದಾಖಲೆ ಗ್ರಾನ್ ಸ್ಲಾಮ್‌ಗಳ ರಾಜ ಸ್ವಿಜ್ಜರ್ಲೆಂಡ್ ರೋಜರ್ ಫೆಡರರ್ ಸ್ಪೇನ್‌ನ ಅಲ್ಬೆರ್ಟ್ ರಾಮೊಸ್ ವಿರುದ್ಧ 6-1, 6-1, 6-1 ಸೆಟ್‌ಗಳಿಂದ ಗೆಲುವಿನ ನಗೆ ಬೀರಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಕಳೆದ ತಿಂಗಳು ಫ್ರೆಂಚ್ ಓಪನ್ ಸೇರಿದಂತೆ ನಾಲ್ಕು ಗ್ರಾನ್ ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ವಿಶ್ವದ ನಂ. 10 ಆಟಗಾರ್ತಿ ಮರಿಯಾ ಶರ ಪೋವಾ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯದ ಅನಾ ಸ್ತೇಸಿಯ ರೊಡಿನೋವಾ ವಿರುದ್ಧ 6-2, 6-3 ಅಂತರದ ಸುಲಭ ಗೆಲುವು ದಾಖಲಿಸಿದರು.

ರೋಜರ್ ಫೆಡರರ್, ನೊವಾಕ್ ಜೊಕೋವಿಕ್, ರಾಫೆಲ್ ನಡಾಲ್, ವಿಕ್ಟೋರಿಯಾ ಅಜರೆಂಕಾ, ಮರಿಯಾ ಶೆರಪೋವಾ, ಸೆರಿನಾ ಮಿಲಿಯಮ್ಸ್ ಆಟವನ್ನು ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

ಭಾರತದ ಸವಾಲು : ಸೋಮವಾರದಿಂದ ಆರಂಭಗೊಂಡಿರುವ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಪ್ರಸಕ್ತ ವಿಂಬಲ್ಡನ್ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಭೂಪತಿ-ಬೋಪಣ್ಣ ಜೋಡಿ ಮೊದಲ ಪಂದ್ಯದಲ್ಲಿ ಶ್ರೇಯಾಂಕ ರಹಿತ ಜೋಡಿ ಉರುಗ್ವೆಯ ಮಾರ್ಸೆಲ್ ಫೆಲ್ಡರ್ ಹಾಗೂ ತುನೀಶ್ಯದ ಮಾಲೆಕ್ ಜಾಜಿರಿ ಜೋಡಿಯನ್ನು ಎದುರಿಸಲಿದೆ.

ಈ ಬಾರಿ ರಾಡೆಕ್ ಸ್ಟೆಪಾನಿಕ್ ಅವರೊಂದಿಗೆ ಜತೆಯಾಗಿ ಸ್ಪರ್ಧಿಸಲಿರುವ ಪೇಸ್, ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಪರಿಪೂರ್ಣ ಗ್ರ್ಯಾನ್‌ಸ್ಲಾಮ್ ಗೆದ್ದು ಈ ಬಾರಿಯ ಟೆನಿಸ್ ಋತು ಆರಂಭಿಸಿದ್ದರು. ಜೆಕ್ ಗಣರಾಜ್ಯದ ಜೊತೆಗಾರನೊಂದಿಗೆ ಪೇಸ್ ಇತರ ಎರಡು ಪ್ರಶಸ್ತಿಗಳನ್ನೂ ಗೆದ್ದಿದ್ದರು.

ಫ್ರೆಂಚ್ ಓಪನ್ ಟೆನಿಸ್‌ನ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದ ನಂತರ ಸಾನಿಯಾ ಮಿರ್ಜಾ ಹಾಗೂ ಮಹೇಶ್ ಭೂಪತಿ ಯಾವ ರೀತಿಯಲ್ಲಿ ಪ್ರದರ್ಶನ ತೋರುತ್ತಾರೆಂಬುದು ಕುತೂಹಲದ ಸಂಗತಿಯಾಗಿದೆ.

ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಅಮೆರಿಕದ ಪೆಥಾನಿ ಮಾಟೆಕ್-ಸಾಂಡ್ಸ್ ಅವರೊಂದಿಗೆ ಸ್ಪರ್ಧಿಸಲಿದ್ದಾರೆ. 13ನೇ ಶ್ರೇಯಾಂಕ ಹೊಂದಿರುವ ಇಂಡೊ-ಅಮೆರಿಕನ್ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಅಲ್ಲಾ ಕುದ್ರೆತ್ಸೇವಾ ಮತ್ತು ಅಮೆರಿಕದ ಸೊನೆ ಸ್ಟೆಪಾನ್ಸ್ ವಿರುದ್ಧ ಸೆಣಸಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ವಿಂಬಲ್ಡನ್ ಸುದ್ದಿಗಳುView All

English summary
Wimbledon 2012 kicks off on June 25 with a early exit of star player Venus Williams in the first round. Novak Djokovic, Rafael Nadal and Roger Federer aim to clinch Grand Slam Title. Maria Sharapova will have to battle out with Na lee of China to earn second Grand slam of the year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more