ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು: HMT ವಾಚ್ ಮತ್ತೆ ಟಿಕ್ ಟಿಕ್ ಎನ್ನುತ್ತಿದೆ!

By Srinath
|
Google Oneindia Kannada News

ಬೆಂಗಳೂರು, ಜೂನ್ 26: ಅದೊಂದು ಕಾಲದಲ್ಲಿ 'ಎಚ್ಎಂಟಿ ವಾಚ್' ಹೆಸರು ಎಷ್ಟೊಂದು ಆಪ್ಯಾಯಮಾನವಾಗಿತ್ತು. ಏನಿಲ್ಲ, ಇರೋದ್ರಲ್ಲೆ ಸ್ವಲ್ಪ ಹೆಚ್ಚು ಬೆಲೆಯ ಎಚ್ಎಂಟಿ ವಾಚ್ ಕೈಗೆ ಕಟ್ಟಿ, ಹೆಗಲ ಮೇಲೆ ಟವಲ್ ಹಾಕಿಕೊಂಡು ಬಿಟ್ಟರೆ ಸಾಕಿತ್ತು. ಸುಖಾಸುಮ್ಮನೆ ಜನ ನಿಮ್ಮನ್ನೇ ಹೆಮ್ಮೆಯಿಂದಲೋ, ಹೊಟ್ಟೆಕಿಚ್ಚಿನಿಂದಲೋ ನೋಡುವಂತಾಗುತ್ತಿತ್ತು. ಹಾಗಿತ್ತು HMT ವೈಭವ.

bangalore-hmt-watches-to-regain-lost-glory

ಅಷ್ಟೊಂದು ವೈಭವದಿಂದ ಮೆರೆಯುತ್ತಿದ್ದ 'ಎಚ್ಎಂಟಿ ವಾಚ್' 'ಕಾಲ'ಗರ್ಭದಲ್ಲಿ ನಿಶ್ಯಬ್ಧಗೊಂಡಿತು. ಆದರೆ ಎಚ್ಎಂಟಿ ವಾಚ್ ತಯಾರಿಕಾ ಕಂಪನಿಯು ಈಗ ಪುನಶ್ಚೇತನದ ಹಾದಿಗೆ ಹೊರಳಿದೆ. ಅದೀಗ ತನ್ನ ಭೂತಕಾಲದ ಘಳಿಗೆಗಳನ್ನು ಮತ್ತೆ ಮೆಲುಕು ಹಾಕಲು ಸದ್ದಿಲ್ಲದೆ ಸಜ್ಜಾಗುತ್ತಿದೆ. ಅದಕ್ಕೆಂದೇ ಮೇಖ್ರಿ ಸರ್ಕಲ್ಲಿನಲ್ಲಿರುವ 'ಎಚ್ಎಂಟಿ ಭವನ'ದಲ್ಲಿ ಕಂಪನಿಯು ತನ್ನ ಮಾರಾಟಗಾರರ ಸಭೆಯನ್ನು ಸೋಮವಾರ ನಡೆಸಿತು.

1953ರಲ್ಲಿ ಸರಕಾರಿ ಸ್ವಾಮ್ಯದ ಕಂಪನಿಯಾಗಿ ಅಸ್ತಿತ್ವಕ್ಕೆ ಬಂದ ಹಿಂದೂಸ್ತಾನ್ ಮಶೀನ್ ಟೂಲ್ಸ್ (HMT) ಮೊನ್ನೆ ಮೊನ್ನೆಯ ತನಕ ಅಂದರೆ ದೇಶವು ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಳ್ಳುವವರೆಗೂ (1991) ವಿಜೃಂಭಿಸಿತು. 1962ರಲ್ಲಿ ಆರಂಭವಾದ 'ಎಚ್ಎಂಟಿ ವಾಚಸ್ ಲಿಮಿಟೆಡ್' ಸಂಸ್ಥೆ ಉದ್ಯಮ ವಲಯದಲ್ಲಿ ಉಚ್ಛ್ರಾಯ ಕಾಲ ತಲುಪಿತ್ತು. ಆದರೆ 1991ರಲ್ಲಿ 'ಕಾಲದ' ಹೊಡೆತಕ್ಕೆ ಸಿಕ್ಕಿ ನರಳಿತು.

ಒಂದೆಡೆ ಸರಕಾರದ ಅವಗಣನೆ, ಹೊಸತನಕ್ಕೆ ತೆರೆದುಕೊಳ್ಳುವ ಹುಮ್ಮಸ್ಸು ಸಂಸ್ಥೆಗೆ ಇಲ್ಲವಾಯಿತು. ಇದರಿಂದ HMT ಕ್ಷಣಗಳು ಕ್ಷೀಣವಾಗಿ ಕೇಳಿಸತೊಡಗಿದವು. ಆದರೆ ಇದೀಗ ಮತ್ತೆ HMT ಕಂಪನಿಗೆ Over Oil ಆಗಿದೆ. HMT ಕ್ಷಣಗಳು ಮತ್ತೆ ಟಿಕ್ ಟಿಕ್ ಎಂದು ಸದ್ದು ಮಾಡತೊಡಗಿವೆ.

ಕಳೆದ ವರ್ಷವೇ ಮತ್ತೆ ಹೊಸ ಡೀಲರುಗಳನ್ನು ನೇಮಿಸಲಾಗಿದೆ. 60 ಮಾದರಿಯ ಹೊಚ್ಚ ಹೊಸ ವಾಚುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಅತ್ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದರಿಂದ ಸಂತಸಗೊಂಡಿರುವ ಸಂಸ್ಥೆಯು ಇನ್ನೂ ನೂರು ಮಾದರಿಯ ಹೊಸ ವಾಚುಗಳನ್ನು ಗ್ರಾಹಕರಿಗೆ ಪರಿಚಯಿಸಲು ಸನ್ನದ್ಧವಾಗಿದೆ ಎಂದು ಕಂಪನಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್ ಇ ನಾಯಕ್ ಹೇಳಿದ್ದಾರೆ. ಇದನ್ನು ಓದಿದ ಮೇಲೆ ನಿಮ್ಮ ಹಳೆಯ ಸುಮಧುರ HMT ಕ್ಷಣಗಳು ಮತ್ತೆ ಟಿಕ್ ಟಿಕ್ ಎನ್ನುತ್ತಿದೆಯಾ?

English summary
Bangalore HMT Watch Factory is all set to regain lost glory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X