• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಪಿಎಗೆ ಅನಂತ್ ಕುಮಾರ್ ಸೂಪರ್ ಸವಾಲ್

By Mahesh
|
Ananth Kumar
ನವದೆಹಲಿ, ಜು.25: ಪ್ರಣಬ್ ಮುಖರ್ಜಿ ಅವರನ್ನು ಕಣಕ್ಕಿಳಿಸಿ ರಾಷ್ಟ್ರಪತಿ ಚುನಾವಣೆಯನ್ನು ಗೆಲ್ಲುವ ಉತ್ಸಾಹದಲ್ಲಿರುವ ಯುಪಿಎ ಮೈತ್ರಿಕೂಟಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಸವಾಲು ಹಾಕಿದ್ದಾರೆ. ಆದರೆ, ಅನಂತ್ ಸವಾಲು ಎಸೆದಿರುವುದು ಮುಂಬರುವ ರಾಷ್ಟ್ರಪತಿ ಚುನಾವಣೆ ಬಗ್ಗೆ ಅಲ್ಲ ಬದಲಿಗೆ ಮುಂಬರುವ ಲೋಕಸಭೆ ಚುನಾವಣೆ ವಿಷಯದಲ್ಲಿ ಅನಂತ್ ಚಾಲೆಂಜ್ ಮಾಡಿದ್ದಾರೆ.

ನರೇಂದ್ರ ಮೋದಿ ಅವರನ್ನು ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಎನ್ ಡಿಎ ಸಂಪೂರ್ಣವಾಗಿ ಒಪ್ಪಿಕೊಳ್ಳಲಾಗಿದೆಯೇ? ಎಂದು ಪತ್ರಕರ್ತರು ಎಸೆದ ಪ್ರಶ್ನೆಗೆ ಉತ್ತರಿಸಿದ ಅನಂತ್ ಕುಮಾರ್, ಬಿಜೆಪಿಯನ್ನು ಪ್ರಧಾನಮಂತ್ರಿ ಪಟ್ಟಕ್ಕೇರಬಲ್ಲ ಸಮರ್ಥ ನಾಯಕರು ಅನೇಕರಿದ್ದಾರೆ, ಆದರೆ, ಕಾಂಗ್ರೆಸ್ ಬಳಿ ಯಾರಿದ್ದಾರೆ? ಇದ್ದ ಒಬ್ಬ ಪ್ರಣಬ್ ರನ್ನು ರಾಷ್ಟ್ರಪತಿ ಮಾಡಲು ಹೊರಟಿದ್ದಾರೆ.

ಕಾಂಗ್ರೆಸ್ ಬಳಿ ಹೆಸರುಗಳಿಲ್ಲ. ತಾಕತ್ತಿದ್ದರೆ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಯುಪಿಎ ಘೋಷಿಸಲಿ. ಬಿಜೆಪಿ ಕೂಡಾ ಸ್ಪರ್ಧೆಗೆ ಸಿದ್ಧವಿದೆ ಎಂದು ಅನಂತ್ ಹೇಳಿದ್ದಾರೆ.

ದೇಶ ಸಂಕಷ್ಟದಲ್ಲಿದ್ದಾಗ ಆರ್ಥಿಕತೆ ಸುಧಾರಣೆಗೆ ಶ್ರಮಿಸದೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ವಿದೇಶಿ ಪ್ರವಾಸದಲ್ಲಿ ನಿರತರಾಗಿರುವುದು ಎಷ್ಟರಮಟ್ಟಿಗೆ ಸರಿ. ಪ್ರಧಾನಿಗಳ ಬಳಿಗೆ ಏನಾದರೂ ಮನವಿ ಸಲ್ಲಿಸಲು ಹೋಗೋಣ ಎಂದು ಅವರ ಸಚಿವಾಲಯಕ್ಕೆ ತೆರಳಿದರೆ ಅವರು 'invisible' ಮೋಡ್ ನಲ್ಲಿರುತ್ತಾರೆ ಆದರೆ, ವಿದೇಶಗಳಲ್ಲಿ ಮಾತ್ರ visible ಆಗಿರುತ್ತಾರೆ.

ಖ್ಯಾತ ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್, ಪಿ ಚಿದಂಬರಂ, ಪ್ರಣಬ್ ಮುಖರ್ಜಿ ಹಾಗೂ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ದೇಶದ ಆರ್ಥಿಕತೆಗಳನ್ನು ನಾಶ ಮಾಡಿಬಿಟ್ಟರು. ರಫ್ತು ಸ್ಥಗಿತವಾಗಿ, ಆಮದು ಹೆಚ್ಚಳವಾಗುವಂತೆ ನೋಡಿಕೊಂಡರು. ಆಹಾರ ದುಬ್ಬರ, ಹಣ ದುಬ್ಬರ ಏರಿಳಿತ, ಶ್ರೀಸಾಮಾನ್ಯನ ದೈನಂದಿನ ಬದುಕಿನ ಖುಷಿಯನ್ನು ಈ ನಾಲ್ವರು ಕಿತ್ತುಕೊಂಡಿದ್ದಾರೆ.

ಕಳೆದ ಏಳು ವರ್ಷಗಳಲ್ಲಿ ಭಾರತದ ಆರ್ಥಿಕತೆ ಅಧಃ ಪತನಕ್ಕೆ ತಂದಿಟ್ಟು ಈಗ ಪರಿಹಾರ ಹುಡುಕುವುದು ಮೂರ್ಖತನದ ಮಾತಾಗಿದೆ. ದೇಶದಲ್ಲಿ ಅಭಿವೃದ್ಧಿಶೀಲ ರಾಜ್ಯ ಎನಿಸಿರುವ ಗುಜರಾತ್ ಕೂಡಾ ಅನ್ಯಾಯ ಬಗೆದಿರುವ ಯುಪಿಎ ಸರ್ಕಾರ, ಸಿಎನ್ ಜಿ ಮೀಸಲಾತಿ ವಿಷಯದಲ್ಲಿ ಮಾಡಿದ ದ್ರೋಹ ಮರೆಯಲು ಸಾಧ್ಯವಿಲ್ಲ ಎಂದು ಅನಂತ್ ಸಿಟ್ಟಾದರು.

ಮೋದಿ ಅವರ ವೈವಿಧ್ಯಮಯ ವ್ಯಕ್ತಿತ್ವ, ಸರ್ವಾಂಗೀಣ ಅಭಿವೃದ್ಧಿ ಮಂತ್ರವೇ ಕಾರಣ. ಗುಜರಾತಿನಲ್ಲಿ ಇಂಧನ, ಇ ಆಡಳಿತ, ಸೌರ ಶಕ್ತಿ, ಜಲ ಸಂರಕ್ಷಣೆ ಇವೆ ಮುಂತಾದ ಕ್ಷೇತ್ರಗಳಲ್ಲಿ ಮೋದಿ ಸರ್ಕಾರ ಕಂಡ ಪ್ರಗತಿ ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದೆ.

ಮಹಾತ್ಮಾ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸು ಮಾಡುವ ತಾಕತ್ತು ಮೋದಿ ಒಬ್ಬರಿಗೆ ಇರುವುದು. ಸ್ವಾಮಿ ವಿವೇಕಾನಂದ ಅವರ ಜಾಣ್ಮೆ, ಸರ್ದಾರ್ ಪಟೇಲ್ ಅವರ ಧೈರ್ಯ ಮೋದಿಗಿದೆ ಎಂದು ಅನೇಕ ಸಮೀಕ್ಷೆಗಳು ನರೇಂದ್ರ ಮೋದಿ ಅವರ ಪರ ನಿಂತಿದೆ.

ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿ ಎಂದೇ ಬಿಂಬಿಸುತ್ತಿರುವ ಯುಪಿಎ ಕೂಡಾ ಕಳೆದ ಹಲವು ಅಸೆಂಬ್ಲಿ ಚುನಾವಣೆಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದ ಮೇಲೆ ರಾಹುಲ್ ನಾಯಕತ್ವದ ಮೇಲೆ ಚಿಂತೆ ಈಡಾಗಿದೆ. ಆದರೆ, ಪ್ರಣಬ್ ಅವರು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿರುವುದರಿಂದ ರಾಹುಲ್ ದಾರಿ ಸುಗಮವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP general secretary Ananth Kumar urged UPA to announce its Prime Ministerial candidate ahead of the next general elections. Ananth said, "BJP has several persons who can become PM. What does Congress have? Congress has no name. It should first announce its candidate. BJP will announce its candidate later.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more