• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಲಿಷ್ಠ ಜರ್ಮನ್ನರ ಕಾಲ್ತುಳಿತಕ್ಕೆ ಸಿಕ್ಕ ಗ್ರೀಸ್ ಜಜ್ಜಿ

By Mahesh
|
Germany
ಗ್ಯಾನ್ಸಕ್, ಜೂ.23: ಜೋಕಿಮ್ ಲೋವ್ ಅವರ ಜರ್ಮನಿ ತಂಡದ ಆರ್ಭಟಕ್ಕೆ ತತ್ತರಿಸಿದ ಗ್ರೀಕ್ ವೀರರು ಸೋತು ಸುಣ್ಣವಾಗಿದೆ. ಕ್ವಾಟರ್ ಫೈನಲ್ ಪಂದ್ಯದಲ್ಲಿ 4-2ರಿಂದ ಗ್ರೀಸ್ ನ್ನು ಸೋಲಿಸಿದ ಜರ್ಮನ್ನರು ಯುರೋ ಕಪ್ ನ ಸೆಮಿಫೈನಲಿಗೇರಿದ್ದು, ಅಂತಿಮ ನಾಲ್ಕರ ಘಟ್ಟದಲ್ಲಿ ಇಂಗ್ಲೆಂಡ್ ಅಥವಾ ಇಟಲಿಯನ್ನು ಎದುರಿಸಲಿದೆ.

ಈ ಗೆಲುವಿನೊಂದಿಗೆ ಜರ್ಮನ್ನರು ಕಳೆದ ವಿಶ್ವಕಪ್ ಹಾಗೂ ಯುರೋ 2008 ಸೆಮಿ ಫೈನಲ್ಸ್ ತಲುಪಿದ ತಂಡ ಎಂಬ ಸಾಧನೆ ಮಾಡಿದೆ. 1980ರಲ್ಲಿ ಚೆಕೋಸ್ಲೋವಾಕಿಯಾ ವಿರುದ್ಧ 3-1ರ ಅಂತರದಿಂದ ಸೋತಿದ್ದ ಮಾಜಿ ಯುರೋ ಚಾಂಪಿಯನ್ಸ್ ಗ್ರೀಕ್ ತಂಡಕ್ಕೆ ಇದು ದೊಡ್ಡ ಅಂತರದ ಸೋಲಾಗಿದೆ.

ರಾಜಕೀಯ ಹಾಗೂ ಆರ್ಥಿಕ ವಿಷಯದಲ್ಲಿ ವೈಮನಸ್ಯ ಬೆಳೆಸಿಕೊಂಡಿರುವ ಜರ್ಮನಿ ಹಾಗೂ ಗ್ರೀಸ್ ಕದನ ಭಾರಿ ಕುತೂಹಲ ಕೆರಳಿಸಿತ್ತು. ಆದರೆ, 2004 ಯುರೋ ಕಪ್ ಚಾಂಪಿಯನ್ ಗ್ರೀಸ್ ಕನಸನ್ನು ಜರ್ಮನ್ನರು ನುಚ್ಚುನೂರು ಮಾಡಿಬಿಟ್ಟರು.

ಆದರೆ ದ್ವಿತೀಯಾರ್ಧದಲ್ಲಿ ಹತ್ತು ನಿಮಿಷದ ಆಟ ಮುಗಿಯುತ್ತಿದ್ದಂತೆ ಜಾರ್ಜಿಯಸ್ ಸಮರಸ್ ಬಾರಿಸಿದ ಗೋಲಿನ ನೆರವಿನಿಂದ ಸಮಬಲ ಸಾಧಿಸಿ ಜರ್ಮನಿಗೆ ಆಘಾತ ನೀಡಿತು. 61ನೇ ನಿಮಿಷದಲ್ಲಿ ಸಾಮಿ ಖದಿರಾ ಬಾರಿಸಿದ ಗೋಲಿನಿಂದ ಮತ್ತೆ ಮುನ್ನಡೆಯನ್ನು ಕಾಯ್ದುಕೊಂಡಿತು. ಏಳು ನಿಮಿಷದ ಬಳಿಕ ಮಿರೊಸ್ಲಾವ್ ಕ್ಲೋಸ್ ಬಾರಿಸಿದ ಗೋಲಿನಿಂದ ಮುನ್ನಡೆಯನ್ನು ದ್ವಿಗುಣಗೊಳಿಸಿತು. ಮಾರ್ಕೊ ರೆಯುಸ್ ಪಂದ್ಯ ಕೊನೆಗೊಳ್ಳಲು 15 ನಿಮಿಷಗಳಿರುವ ಬಾರಿಸಿದ ಗೋಲಿನಿಂದ ಜರ್ಮನಿ ಗೆಲುವು ಸ್ಪಷ್ಟವಾಯಿತು.

ಪಂದ್ಯ ಕೊನೆಗೊಳ್ಳಲು ಕೇವಲ ಒಂದು ನಿಮಿಷ ಇರುವಾಗ ಸಿಕ್ಕಿದ ಪೆನಾಲ್ಟಿ ಸಲ್ಪಿಂಜಿಡಿಸ್ ಗೋಲು ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು. ಇದಕ್ಕೂ ಮುನ್ನ ಸಮರಾಸ್ ಗ್ರೀಸ್ ಗೆ ಆಧಾರವಾಗಿ ಒಂದು ಗೋಲು ಗಳಿಸಿದ್ದರು. ಆದರೆ, ಜರ್ಮನ್ನರ ದಾಳಿಗೆ ಗ್ರೀಸ್ ಬಳಿ ಉತ್ತರ ವಿರಲಿಲ್ಲ. ಆದರೆ ಜರ್ಮನಿ ಸತತ ನಾಲ್ಕನೇ ಸಲ ಯುರೋ ಕಪ್ ನ ಸೆಮಿಫೈನಲಿಗೇರಿದೆ.

ಮೊದಲಾರ್ಧದಲ್ಲಿ ಶೇ 70 ರಷ್ಟು ಚೆಂಡಿನ ಹಿಡಿತ ಹೊಂದಿದ್ದ ಜರ್ಮನ್ನರ ಪಾಲಿಗೆ ನಾಯಕ ಫಿಲಿಫ್ ಲಾಮ್ ಮೊದಲ ಯಶಸ್ಸು ತಂದು ಕೊಟ್ಟರು. ಪಂದ್ಯದ ಆರಂಭದಲ್ಲೇ ಯಶ ಸಿಕ್ಕರೂ ಆಫ್ ಸೈಡ್ ಆಗಿ ಬಿಟ್ಟಿತ್ತು. 39ನೇ ನಿಮಿಷದಲ್ಲಿ ಲಾಹ್ಮ್ ಗಳಿಸಿದ ಗೋಲಿನ ನಂತರ ಸಾಮಿ ಖದಿರಾ, ಮಿರೋಸ್ಲವ್ ಕ್ಲೋಸ್, ಮಾರ್ಕೋ ರಿಯೂಸ್ ಭರ್ಜರಿ ಗೋಲುಗಳನ್ನು ಬಾರಿಸಿ ಜರ್ಮನ್ನರ ಪ್ರಾಬಲ್ಯದ ಛಾಪು ಮೂಡಿಸಿದರು.

ಜರ್ಮನ್ನರ ಹೊಸ ತಂತ್ರ ಫಲಿಸಿತು: ಜೋಕಿಮ್ ಲೋಮ್ ಪಂದ್ಯದ ಆರಂಭದಲ್ಲಿ ಎದುರಾಳಿಗಳಿಗೆ ಸಣ್ಣ ಅಚ್ಚರಿ ಮೂಡಿಸಿದರು. ಉತ್ತಮ ಲಯದಲ್ಲಿದ್ದ ಲೂಕಾಸ್ ಪೊಡೊಲ್ ಸ್ಕಿ, ಥಾಮಸ್ ಮುಲ್ಲರ್, ಮರಿಯೋ ಗೊಮೆಜ್ ಕಣಕ್ಕಿಳಿಯದೆ ಬದಲಿ ಆಟಗಾರರಾಗಿ ಡಗ್ ಔಟ್ ನಲ್ಲಿ ಕೂತಿದ್ದರು. ಕ್ಲೋಸ್, ಓಜಿಲ್, ಖದಿರಾ, ಶ್ವೈಸ್ ಟೈಗರ್ ಸಮರ್ಥವಾಗಿ ತಂಡವನ್ನು ಮುನ್ನಡೆಸಿದರಲ್ಲದೆ ರಿಯೂಸ್, ಶ್ಕೂರ್ಲ್ ರಂಥ ಯುವ ಆಟಗಾರರಿಗೂ ಸ್ಥಾನ ಕಲ್ಪಿಸಲಾಯಿತು.

ಗ್ರೀಸ್ ತಂಡದಲ್ಲಿ ಗೋಲ್ ಕೀಪರ್ ಚಾಲಕಾಸ್ ಇಲ್ಲದೆ ಸಿಫಕಾಸ್ ಕೂಡಾ ಗಾಯಾಳು ಆಗಿ ಸಮಸ್ಯೆಯಾಯಿತು. ನಾಯಕ ಕರಗೋನಿಸ್ , ಗೆಕಾಸ್ ಹಾಗೂ ನಿನಿ ಕೂಡಾ ಅಷ್ಟು ಉತ್ತಮ ಪ್ರದರ್ಶನ ನೀಡಲಿಲ್ಲ. ಮಕೋಸ್, ಸಮರಾಸ್ ಉತ್ತಮ ಪ್ರದರ್ಶನ ನೀಡಿದರು. ಸಾಕ್ರಟೀಸ್ ಒರಟಾಟದಲ್ಲೇ ಕಾಲ ಕಳೆದಿದ್ದು ಬಿಟ್ಟರೆ, ಗೋಲು ಗಳಿಸುವ ಲಕ್ಷಣಗಳು ಕಂಡು ಬರಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಫುಟ್ಬಾಲ್ ಸುದ್ದಿಗಳುView All

English summary
Four-star Germans blast Greeks to reach Euro semis, Joachim Loew's side hammered Greece 4-2 on Friday as Germany booked their place in the Semi Finals of Euro 2012 Germans dominated quarterfinal.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more