ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆಯಲ್ಲಿ kiss:ಬಂಧಿಸುವುದೋ,ಪ್ರೋತ್ಸಾಹಿಸುವುದೋ!?

By Srinath
|
Google Oneindia Kannada News

kissing-in-public-to-be-jailed-or-not
ನವದೆಹಲಿ, ಜೂನ್ 23: ಸಾರ್ವಜನಿಕ ಸ್ಥಳಗಳಲ್ಲಿ ಚುಂಬಕ ಚುಂಬನದಲ್ಲಿ ತಲ್ಲೀನರಾಗಿದ್ದ ದೆಹಲಿಯ ಮೂವರು ತರುಣ/ತರುಣಿಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲಿಂದ ಮುಂದೆ ಮೂವರೂ ಚುಂಬನ ಮಿತ್ರರನ್ನು ಜೈಲಿಗೆ ಬಿಟ್ಟುಬಂದಿದ್ದಾರೆ. ಅವರಿಗೀಗ 3 ತಿಂಗಳ ಜೈಲುವಾಸ ವಿಧಿಸಲಾಗಿದೆ.

ಮೊನ್ನೆ ಗುರುವಾರ ಏನಾಯಿತಪಾ ಅಂದರೆ ಇಬ್ಬರು ಯುವತಿಯರು ಮತ್ತು ಒಬ್ಬ ತರುಣ ರಸ್ತೆ ಮೇಲೆಯೇ ಚುಂಬನಗಳ ವಿನಿಮಯದಲ್ಲಿ ತೊಡಗಿದ್ದರು. ಜತೆಗೆ ಆ ಮೂವರೂ ಕುಡಿದಿದ್ದರು. ಆದ್ದರಿಂದ IPC Section 294 ಅನುಸಾರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

IPC Section 294 ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯದಲ್ಲಿ ತೊಡಗುವುದಾಗಲಿ, ಹಾಡುವುದಾಗಲಿ, ಘೋಷಣೆ ಕೂಗುಬವುದಾಗಲಿ, ಬಯ್ಗುಳ ಪ್ರಯೋಗಿಸುವುದಾಗಲಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.

ವಾಣಿಜ್ಯ ಸಂಕೀರ್ಣಗಳು ಸದಾ ಸಾರ್ವಜನಿಕರಿಂದ ತುಂಬಿದ್ದು ಇಂತಹ ಕಡೆ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಇಂತಹ ವಾಣಿಜ್ಯ ಸಂಕೀರ್ಣಗಳ ಮುಂದೆ ಕುಡಿಯುತ್ತಾ, ಕುಣಿಯುತ್ತಾ ಕಾಲಕಳೆದರೆ ಯಾರನ್ನೇ ಆಗಲಿ ವಶಕ್ಕೆ ತೆಗೆದುಕೊಳ್ಳುತ್ತೇವೆ. ಅದರಲ್ಲೂ ಈ ಯುವಜನತೆ ಸಖತ್ ಹಾದಿ ತಪ್ಪುತ್ತಿದ್ದಾರೆ.

ಅವರ ಮೇಲೆ ನಾವು ಸದಾ ಕಣ್ಣಿಟ್ಟಿರುತ್ತೇವೆ. ಈ ಪ್ರಕರಣದಲ್ಲೂ ಹಾಗೇ ಆಗಿದೆ. ವಾಣಿಜ್ಯ ಸಂಕೀರ್ಣವೊಂದರಿಂದ ಹೊರಬಂದ ಇಬ್ಬರು ಹುಡುಗಿಯರು ಮತ್ತು ಒಬ್ಬ ಯುವಕ ಪರಸ್ಪರ ಚುಂಬನದಲ್ಲಿ ತೊಡಗಿದರು. ತಕ್ಷಣ ನಾವು ಅವರನ್ನು ಬಂಧಿಸಿ, ಜೈಲಿಗಟ್ಟಿದೆವು ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಆದರೆ ರಾಜಧಾನಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಕಿ ಸ್ಥಳಗಳಲ್ಲಿ ಅಶ್ಲೀಲವಾಗಿ ನಡೆದುಕೊಂಡರೆ, ಚುಂಬನಗಳನ್ನು ಕೊಟ್ಟುಕೊಂಡರೆ ಕಾನೂನು ಪ್ರಕಾರ ಖಂಡಿತ ದಂಡಿಸಬಹುದು. ಆದರೆ ನನ್ನ ವ್ಯಾಪ್ತಿಯಲ್ಲಿ ಇದನ್ನು ಕಾರ್ಯರೂಪಕ್ಕೆ ತರುವುದಿಲ್ಲ. ಯಾರನ್ನೂ ಬಂಧಿಸುವುದಿಲ್ಲ. ಏಕೆಂದರೆ kiss ಕೊಡೂದು ಈಗ ಸಾಮಾನ್ಯವಾಗಿಬಿಟ್ಟಿದೆ. ಆದ್ದರಿಂದ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು Delhi Police PRO ರಾಜನ್ ಭಗತ್ ಹೇಳಿದ್ದಾರೆ.

English summary
Kissing in public to be jailed or not is the question that is bothering NewDelhi police these days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X