ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಪಿಎ ಸಂಗ್ಮಾ ಪರಿಚಯ

By Mahesh
|
Google Oneindia Kannada News

PA Sangma profile
ಭಾರತದ ರಾಷ್ಟ್ರಪತಿ ಚುನಾವಣೆಗೆ ಪೂರ್ಣೊ ಅಗ್ನಿಟೋಕ್ ಸಂಗ್ಮಾ ಅವರು ಎನ್ ಡಿಎ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಪ್ರೊಫೆಸರ್, ವಕೀಲ, ಪತ್ರಕರ್ತ ಹೀಗೆ ವೈವಿಧ್ಯಮಯ ವ್ಯಕ್ತಿತ್ವ ಹೊಂದಿರುವ ಪಿಎ ಸಂಗ್ಮಾ ಅವರ ವೃತ್ತಿ ಜೀವನ ಹಾಗೂ ಕೌಟುಂಬಿಕ ಹಿನ್ನೆಲೆಯ ಸ್ಥೂಲ ಪರಿಚಯ ಇಲ್ಲಿದೆ:

ಜನನ: ಸೆಪ್ಟೆಂಬರ್ 1,1947, ಮೇಘಾಲಯ, ಭಾರತ
ತಂದೆ, ತಾಯಿ: ಡಿಪ್ಚೊನ್ ಮಾರಕ್ ಹಾಗೂ ಚಿಮ್ರಿ ಎ ಸಂಗ್ಮಾ
ಪತ್ನಿ: ಸರೋದಿನಿ ಕೆ ಸಂಗ್ಮಾ
ಧರ್ಮ: ರೋಮನ್ ಕ್ಯಾಥೋಲಿಕ್
ನಿವಾಸ: ವೆಸ್ಟ್ ಗರೋ ಹಿಲ್ಸ್,ಮೇಘಾಲಯ
ಕುಟುಂಬ: ಸಂಗ್ಮಾ ಅವರ ಪುತ್ರಿ ಅಗಾಥಾ ಸಂಗ್ಮಾ ಯುಪಿಎ ಸರ್ಕಾರದ ಅತಿ ಕಿರಿಯ ಸಚಿವೆಯಾಗಿದ್ದಾರೆ. ಪುತ್ರ ಕೊನಾರ್ಡ್ ಸಂಗ್ಮಾ ಮೇಘಾಲಯ ಅಂಸೆಬ್ಲಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ವಿದ್ಯಾಭ್ಯಾಸ: ಬಿಎ(ಹಾನರ್ಸ್) ಸೈಂಟ್ ಅಂಥೋಣಿ ಕಾಲೇಜು,ಶಿಲ್ಲಾಂಗ್
* ಅಂತಾರಾಷ್ಟ್ರೀಯ ವ್ಯವಹಾರ ವಿಷಯದ ಮೇಲೆ ಸ್ನಾತಕೋತ್ತರ ಪದವಿ, ಡಿಬ್ರುಗರ್ ವಿವಿ, ಅಸ್ಸಾಂ
* ಎಲ್ ಎಲ್ ಬಿ

ವೃತ್ತಿ:
ಪ್ರೊಫೆಸರ್, ವಕೀಲ, ಪತ್ರಕರ್ತ, ರಾಜಕಾರಣಿ

ಸಂಗ್ಮಾ ಅವರು ಅಲಂಕರಿಸಿದ ವಿವಿಧ ಕ್ಷೇತ್ರ, ಹುದ್ದೆಗಳು
* 1973-1976 : ಮೇಘಾಲಯ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷ
* 1974-75-80 : ಮೇಘಾಲಯ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
* 1977 : 6ನೇ ಲೋಕಸಭೆಗೆ ಆಯ್ಕೆ
* 1980 : 7ನೇ ಲೋಕಸಭೆಗೆ ಆಯ್ಕೆ ಹಾಗೂ ಎಐಸಿಸಿಯಲ್ಲಿ ಜಂಟಿ ಕಾರ್ಯದರ್ಶಿ ಹುದ್ದೆ
* 1980 - 1982 : ಕೇಂದ್ರ ಕೈಗಾರಿಕಾ ಖಾತೆ ಸಹಾಯಕ ಸಚಿವ
* 1982 - 1984 : ಕೇಂದ್ರ ವಾಣಿಜ್ಯ ಖಾತೆ ಸಹಾಯಕ ಸಚಿವ
* 1984 : 8ನೇ ಲೋಕಸಭೆಗೆ ಪುನರಾಯ್ಕೆ(3ನೇ ಬಾರಿ)
* 1984 ನವೆಂಬರ್-ಡಿಸೆಂಬರ್ : ಕೇಂದ್ರ ವಾಣಿಜ್ಯ ಖಾತೆ ಸಹಾಯಕ ಸಚಿವ
* 1985 ಜನವರಿ- ಸೆಪ್ಟೆಂಬರ್ : ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವ
* 1985 - 1986 : ಕೇಂದ್ರ ಗೃಹಖಾತೆ ರಾಜ್ಯ ಸಚಿವ
* 1986 - 1988 : ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ
* 1988 - 1991: ಮೇಘಾಲಯ ಅಸೆಂಬ್ಲಿ ಸದಸ್ಯರಾಗಿ ಆಯ್ಕೆ
* 1988 - 1990 : ಮೇಘಾಲಯ ಮುಖ್ಯಮಂತ್ರಿಯಾಗಿ ಪದಗ್ರಹಣ
* 1990 - 1991 : ಮೇಘಾಲಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ
* 1991 : 10ನೇ ಲೋಕಸಭೆಗೆ ಪುನಾರಾಯ್ಕೆ(4ನೇ ಬಾರಿ)
* 1991-1993: ಕೇಂದ್ರ ಕಲ್ಲಿದ್ದಲು ಖಾತೆ ರಾಜ್ಯ ಸಚಿವ
* 1993 - 1995 : ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ
* ಫೆಬ್ರವರಿ- ಸೆಪ್ಟೆಂಬರ್ 1995 : ಕೇಂದ್ರ ಕಾರ್ಮಿಕ ಸಚಿವ
* 1996 : 11ನೇ ಲೋಕಸಭೆಗೆ ಪುನರಾಯ್ಕೆ(5ನೇ ಬಾರಿ)
* 1996 - 1998: ಲೋಕಸಭೆ ಸಭಾಪತಿ
* 1998: 12ನೇ ಲೋಕಸಭೆಗೆ ಪುನರಾಯ್ಕೆ(6ನೇ ಬಾರಿ)
* 1998 - 1999 : ವಿದೇಶಾಂಗ ವ್ಯವಹಾರ ಹಾಗೂ ಅಖಿಲ ಭಾರತ ಶಿಯಾ ಕೌನ್ಸಿಲ್ ಉಪ ಸಮಿತಿ ಸದಸ್ಯ
* 1998 - 2004 : Indian Institute of Public Administration ಉಪಾಧ್ಯಕ್ಷ
* 1999 : 13ನೇ ಪುನಾರಾಯ್ಕೆ (7ನೇ ಬಾರಿ)
* 1999 - 2000 : ಕಾರ್ಮಿಕ ಮತ್ತು ಕಲ್ಯಾಣ ಸಮಿತಿ ಸದಸ್ಯ
* 2002- 2004 : ವಿದೇಶಾಂಗ ವ್ಯವಹಾರ ಸಮಿತಿ ಸದಸ್ಯ
* 2004 : 14ನೇ ಲೋಕಸಭೆಗೆ ಪುನರಾಯ್ಕೆ(8ನೇ ಬಾರಿ)
* 2005 : ತೃಣಮೂಲ ಕಾಂಗ್ರೆಸ್ ಸದಸ್ಯರಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ
* 2006 : 15ನೇ ಲೋಕಸಭೆ ಪುನಾರಾಯ್ಕೆ( ಎನ್ ಸಿಪಿ ಅಭ್ಯರ್ಥಿಯಾಗಿ)

'India in I.L.O ಹಾಗೂ Into the Third Millennium; A Speakers Perspectives ಎಂಬ ಎರಡು ಕೃತಿಗಳನ್ನು ಸಂಪಾದಿಸಿದ್ದಾರೆ.

ಲೋಕಸಭೆಯಲ್ಲಿ ಅಣ್ವಸ್ತ್ರ ಬಳಕೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಪಿಎ ಸಂಗ್ಮಾ ಅವರು ನೀಡಿದ ಹೇಳಿಕೆಗಳು ಉಲ್ಲೇಖನೀಯ Adventurism is easy, but restraint is far more difficult. "Do you want to kill the whole world nine times? Do you want to kill the whole world 13 times? And, how can you kill a person a second time?" ಎಂದು ಸಂಸತ್ತಿನಲ್ಲಿ ಪ್ರಶ್ನಿಸಿದ್ದರು.

English summary
Purno Agitok Sangma is the official candidate to Indian President election 2012 from NDA. He is a former Speaker of Lok Sabha and Chief Minister of Meghalaya. He was a co-founder of the Nationalist Congress Party (NCP) and remained a member of the Lok Sabha for eight terms
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X