ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ:ಕುತೂಹಲಕ್ಕೆ ತೆರೆಯೆಳೆದ ದೇವೇಗೌಡ

|
Google Oneindia Kannada News

Deve gowda to support UPA candidate
ಬೆಂಗಳೂರು, ಜೂ 21: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮುಂಬರುವ ರಾಷ್ಟ್ರಪತಿ ಚುನಾವಣೆಗೆ ತಮ್ಮ ಪಕ್ಷದ ಸದಸ್ಯರು ಯಾರ ಪರವಾಗಿ ಮತ ಹಾಕಲಿದ್ದಾರೆ ಎನ್ನುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಯುಪಿಎ ಅಭ್ಯರ್ಥಿಯಾಗಿರುವ ಪ್ರಣಬ್ ಮುಖರ್ಜಿಗೆ ಮತ ಹಾಕಲು ಜಾತ್ಯಾತೀತ ಜನತಾದಳ ನಿರ್ಧರಿಸಿದೆ ಎಂದು ಪ್ರಕಟಿಸಿ ಕುತೂಹಲಕ್ಕೆ ತೆರೆಯೆಳೆದಿದ್ದಾರೆ.

ಪ್ರಣಬ್ ಮುಖರ್ಜಿ ಯುಪಿಎ ಅಭ್ಯರ್ಥಿಯೆಂದು ಕೋರ್ ಕಮಿಟಿ ಸಮಿತಿ ಸಭೆಯಲ್ಲಿ ಅಂತಿಮಗೊಂಡ ನಂತರ ಅವರು ನನಗೆ ದೂರವಾಣಿ ಕರೆಮಾಡಿ ನಮ್ಮ ಪಕ್ಷದ ಬೆಂಬಲ ಕೇಳಿದ್ದಾರೆ. ನಮ್ಮ ಪಕ್ಷ ಪ್ರಣಬ್ ಮುಖರ್ಜಿಗೆ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಹೇಳಿದ್ದೇನೆ. ಸಾರ್ವಜನಿಕವಾಗಿ ಪಕ್ಷದ ನಿರ್ಧಾರ ಪ್ರಕಟಿಸುವಂತೆ ಪ್ರಣಬ್ ಮುಖರ್ಜಿ ಕೇಳಿಕೊಂಡಿದ್ದಾರೆ ಹಾಗಾಗಿ ನಮ್ಮ ನಿರ್ಧಾರವನ್ನು ಪ್ರಕಟಿಸುತ್ತಿದ್ದೇವೆ ಎಂದು ದೇವೇಗೌಡ ಹೇಳಿದ್ದಾರೆ.

ನಮ್ಮದೊಂದು ಸಣ್ಣ ಪ್ರಾದೇಶಿಕ ಪಕ್ಷ. ನಮ್ಮ ಪಕ್ಷದ ನಿರ್ಧಾರದಿಂದ ಚುನಾವಣೆಯ ಫಲಿತಾಂಶದಲ್ಲಿ ಯಾವುದೇ ಏರುಪೇರು ಆಗುವುದಿಲ್ಲ. ನಾವು ಮೂರು ಜನ ಲೋಕಸಭಾ ಸದಸ್ಯರನ್ನು ಮತ್ತು 26 ಶಾಸಕರನ್ನು ಮಾತ್ರ ಹೊಂದಿದ್ದೇವೆ ಎಂದು ಹೇಳಲು ದೇವೇಗೌಡ ಮರೆಯಲಿಲ್ಲ.

ಪಿ ಎ ಸಂಗ್ಮಾ ಎನ್ ಡಿ ಎ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ರಾಷ್ಟ್ರಪತಿ ಗಾದಿಗಾಗಿ ಸಂಗ್ಮಾ ಮತ್ತು ಪ್ರಣಬ್ ಮುಖರ್ಜಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ತೃಣಮೂಲ ಕಾಂಗ್ರೆಸ್ ನಾಯಕಿ ದೀದಿ ಮಮತಾ ಬ್ಯಾನರ್ಜಿ ತಮ್ಮ ನಿಲುವನ್ನು ಇನ್ನೂ ಸ್ಪಷ್ಟಪಡಿಸಲಿಲ್ಲ. ಸಂಗ್ಮಾ ಪರವಾಗಿ ಮತ ಹಾಕಲಿದ್ದಾರೆಯೇ ಅಥವಾ ಚುನಾವಣೆ ಬಹಿಷ್ಕರಿಸಲಿದ್ದಾರೆಯೇ ಎನ್ನುವುದು ಕೂತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ತಮಿಳುನಾಡಿನಲ್ಲಿ ವಿಜಯಕಾಂತ್ ನೇತೃತ್ವದ ಡಿಎಂಡಿಕೆ ರಾಷ್ಟ್ರಪತಿ ಚುನಾವಣೆ ಬಹಿಸ್ಕರಿಸಲಿದ್ದಾರೆಂದು ವರದಿಯಾಗಿದೆ.

English summary
JDS supremo H D Deve Gowda announced his party's support to UPA's presidential candidate Pranab Mukherjee. Deve Gowda said that Prime Minister Manmohan Singh had sought his support after the Congress core committee cleared the name of Mukherjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X