• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

20ಕೋಟಿ ಆಸ್ತಿ ಸಿಎಂ ಹೆಸರಿಗೆ ಬರೆದು ಟೆಕ್ಕಿ ಆತ್ಮಹತ್ಯೆ

|
ಕೊಯಂಬುತ್ತೂರು, ಜೂ 20 : ಸುಮಾರು 12 ರಿಂದ 20 ಕೋಟಿ ರೂಪಾಯಿ ಆಸ್ತಿಯನ್ನು ಮುಖ್ಯಮಂತ್ರಿ ಜಯಲಲಿತಾ ಹೆಸರಿಗೆ ಬರೆದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ವಿಲಕ್ಷಣ ಘಟನೆ ಇಲ್ಲಿಂದ ವರದಿಯಾಗಿದೆ.

24 ವರ್ಷದ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸತ್ಯನಾರಾಯಣ ಎನ್ನುವ ಟೆಕ್ಕಿ ಜೀವನದಲ್ಲಿ ಏಕಾಂಗಿತನದಿಂದ ಮನನೊಂದು ಆತ್ಯಹತ್ಯೆ ಮಾಡಿಕೊಂಡಿದ್ದಾನೆ . ತನ್ನ ಹೆಸರಿನಲ್ಲಿರುವ ಚಿರಾಸ್ಥಿಯನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಹೆಸರಿಗೆ ಡೆತ್ ನೋಟ್ ನಲ್ಲಿ ಬರೆದು ಇಹಲೋಕ ತ್ಯಜಿಸಿದ್ದಾನೆ.

ಕಳೆದ ಭಾನುವಾರ (ಜೂ 17) ರಂದು ನಗರದ ಹೊರವಲಯದ ಪೀಲಮೇಡು ಎನ್ನುವಲ್ಲಿ ನೇಣು ಬಿಗಿದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೇರೆಯವರ ಜೊತೆ ಬೆರೆಯದೆ ತನ್ನ ಪಾಡಿಗೆ ತಾನು ಇರುತ್ತಿದ್ದ ಸಂಕೋಚ ಸ್ವಭಾದ ಸತ್ಯನಾರಾಯಣ ತನ್ನ ತಾಯಿಯನ್ನು ಎರಡು ತಿಂಗಳ ಹಿಂದೆ ಕಳೆದುಕೊಂಡಿದ್ದ. ಈತನ ತಾಯಿ ಹೃದಯಾಘಾತದಿಂದ ಮೃತ ಪಟ್ಟಿದ್ದರು. 2007ರಲ್ಲಿ ತಂದೆ ಬೇರೆ ಸಾವನ್ನಪ್ಪಿದ್ದರು.

ತಾಯಿಯ ಸಾವಿನಿಂದ ಬಹಳ ನೊಂದಿದ್ದ ಈತ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಜೀವನದ ಪಯಣವನ್ನು ಮುಗಿಸಿದ್ದಾನೆ.

ಚೆನ್ನೈ ನಲ್ಲಿ ಕೆಲಸ ಮಾಡುತ್ತಿದ್ದ ಈತ ತಾಯಿಯ ಜೊತೆಗಿರುವ ಸಲುವಾಗಿ ಕೊಯಂಬುತ್ತೂರು ನಗರಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದ. ತಾಯಿಯ ಸಾವಿನ ನಂತರ ಒಂದೆರಡು ಬಾರಿ ಮಾತ್ರ ತನ್ನ ತಾತನನ್ನು ಭೇಟಿ ಮಾಡಿದ್ದ. ಮೊದಲೇ ಸಂಕೋಚ ಸ್ವಭಾವದ ಈತ ತಾಯಿಯ ಸಾವಿನ ನಂತರ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ.

ನೀವು ಈ ಪತ್ರ ಓದುವಾಗ ನಾನು ಈ ಭೂಮಿಯಲ್ಲಿ ಇರುವುದಿಲ್ಲ. ಜೀವನದಲ್ಲಿ ನಾನು ಎಲ್ಲರನ್ನೂ ಕಳೆದುಕೊಂಡಿದ್ದೇನೆ. ನನಗೆ ಈ ಇನ್ನು ಪ್ರಪಂಚದಲ್ಲಿ ಯಾರೂ ಇಲ್ಲ. ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ಅಮ್ಮನ (ಜಯಲಲಿತಾ ) ಹೆಸರಿಗೆ ಬರೆದಿದ್ದೇನೆ ಎಂದು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಬರೆದ ಡೆತ್ ನೋಟ್ ನಲ್ಲಿ ಹೇಳಿದ್ದಾನೆ.

ಪೀಲಮೇಡು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 24-year-old software engineer employed with a major IT firm committed suicide by hanging at his residence in Thaneer Pandal near Peelamedu on Sunday. In his suicide note he states that loneliness drove him to kill himself. His note also reveals his substantial wealth, estimated to be worth anywhere between Rs 12 to Rs 20 crore, which he has surprisingly bequeathed to Tamilu Nadu Chief Minister
 J Jayalalithaa.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more