ಅರ್ಧ ರಾತ್ರಿಯಲ್ಲಿ ಕಾರಿನಲ್ಲಿ ಟೆಕ್ಕಿಗಳ ರಾಸಲೀಲೆ

techies-with-call-girl-found-nude-in-car-hyderabad
ಹೈದರಾಬಾದ್, ಜೂನ್ 20: ನಟ್ಟನಡು ರಸ್ತೆಯಲ್ಲಿ, ನಟ್ಟ ನಡುರಾತ್ರಿ, ನಡುವಿನ ಮೇಲೆ ಒಂದು ನೂಲಿನ ಎಳೆಯೂ ಇಲ್ಲದಂತೆ ಬಟ್ಟೆ ಬಿಚ್ಹಾಕಿ, ಕಾರಿನಲ್ಲಿ ರಾಸಲೀಲೆಯಲ್ಲಿ ನಗ್ನರಾಗಿದ್ದ ಇಬ್ಬರು ಟೆಕ್ಕಿಗಳು ಮತ್ತು ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಮುತ್ತಿನ ನಗರಿ ಹೈದರಾಬಾದಿನ ಹುಮಾಯೂನ್ ನಗರದಲ್ಲಿರುವ ಮೆಹದಿಪಟ್ಟಣಂನಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಕಂಠಮಟ್ಟ ಕುಡಿದು ಚಿತ್ತಾಗಿದ್ದ ಟೆಕ್ಕಿಗಳು ಯದ್ವಾತದ್ವಾ ಇದ್ದುದನ್ನು ರಾತ್ರಿ ಪಾಳಿಯ ಪೊಲೀಸರು ತಡೆದು ಪ್ರಶ್ನಿಸಿದಾಗ ಯುವಕರು ಅವರ ಮೇಲೆ ಜಬರದಸ್ತು ಮಾಡಿದ್ದಾರೆ. ಆಗ ಪೊಲೀಸರು ಇಬ್ಬರು ಟೆಕ್ಕಿಗಳ, ಒಬ್ಬ ಮಹಿಳಾ ಸಾಫ್ಟ್ ವೇರ್ ಇಂಜಿನಿಯರ್ ಮತ್ತು ಒಬ್ಬ ಕಾಲ್ ಗರ್ಲ್ ಅನ್ನು ಬಂಧಿಸಿದ್ದಾರೆ.

ಸಾಫ್ಟ್ ವೇರ್ ಇಂಜಿನಿಯರುಗಳ ಭವಿಷ್ಯದ ದೃಷ್ಟಿಯಿಂದ ಪೊಲೀಸರು ಅವರ ವಿವರಗಳನ್ನು ಗೌಪ್ಯವಾಗಿಟ್ಟಿದ್ದಾರೆ. ನಡುರಾತ್ರಿ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಶವರ್ಲೆಟ್ ಕಾರೊಂದನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನೊಳಗಿನ ದೃಶ್ಯಗಳನ್ನು ಕಂಡಾಗ ಯುವ ಟೆಕ್ಕಿಗಳ ಕಾಮಕೇಳಿ ಬಹಿರಂಗವಾಗಿದೆ.

ಪೊಲೀಸರು ಹೆಚ್ಚಿನ ತನಿಖೆ ನಡೆಸಲು ಮುಂದಾದಾಗ ಕಾರಿನಲ್ಲಿದ್ದ ಕಾಲ್ ಗರ್ಲ್, ಪೊಲೀಸರನ್ನು ಕಂಡು ಚೀರಾಡಿದ್ದಾಳೆ. ಪೊಲೀಸರನ್ನು ಬಾಯಿಗೆ ಬಂದಂತೆ ಬಯ್ದಿದ್ದಾಳೆ. ಕಾರ್ಯಾಚರಣೆಗಿಳಿಸಿದ ಪೊಲೀಸರು ನಾಲ್ಕೂ ಮಂದಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+