ಸಲಿಂಗಕಾಮಿಯ ಅತ್ಯಾಚಾರ ಹತ್ಯೆ, 7 ಜನರ ಬಂಧನ

Man gangraped and killed, 7 held
ಬೆಂಗಳೂರು, ಜೂ. 19 : ಹತ್ತು ತಿಂಗಳ ಹಿಂದೆ ಸಲಿಂಗ ಕಾಮಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಬರ್ಬರವಾಗಿ ಹತ್ಯೆಗೈದಿದ್ದ ಏಳು ಆರೋಪಿಗಳನ್ನು ಬಂಧಿಸುವಲ್ಲಿ ಎಚ್ಎಸ್ಆರ್ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆ 2011ರ ಆಗಸ್ಟ್‌ನಲ್ಲಿ ನಡೆದಿತ್ತು.

28 ವರ್ಷದ ಸಲಿಂಗ ಕಾಮಿ ಲಾರಿ ಚಾಲಕ ಮೊಹಮ್ಮದ್ ಮೊಹಸಿನ್ ಮೇಲೆ ಏಳು ಜನ ಸಲಿಂಗ ಕಾಮಿಗಳು ಸಾಮೂಹಿಕವಾಗಿ ಅತ್ಯಾಚಾರಗೈದು, ತುಮಕೂರು ಜಿಲ್ಲೆಯ ಹರಳೂರು ಗ್ರಾಮದಲ್ಲಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆಗೈದಿದ್ದರು.

ತನಿಖೆ ಕೈಗೊಂಡ ಪೊಲೀಸರು ಹತ್ಯೆಯಾದ ಮೊಹಸಿನ್ ಸ್ನೇಹಿತರ ವಿಚಾರಣೆ ನಡೆಸುತ್ತಿದ್ದಾಗ ಮೊಹಸಿನ್ ಸಲಿಂಗ ಕಾಮಿಯಾಗಿದ್ದ ಎಂಬ ಸಂಗತಿ ಬಹಿರಂಗವಾಯಿತು. ಆತನಿಗೆ ನಂಜುಂಡ ಎಂಬುವವನೊಂದಿಗೆ ಲೈಂಗಿಕ ಸಂಬಂಧವಿತ್ತು ಎಂಬ ಸಂಗತಿಯೂ ತಿಳಿದುಬಂದಿತು.

ತೀವ್ರವಾಗಿ ವಿಚಾರಣೆ ನಡೆಸಿದಾಗ ಹತ್ಯೆಯಲ್ಲಿ ಭಾಗಿಯಾದ ವಿಷಯವನ್ನು ನಂಜುಂಡ ಪೊಲೀಸರಿಗೆ ಹೇಳಿಬಿಟ್ಟಿದ್ದಾನೆ. ಅಂದು ನಡೆದಿದ್ದೇನೆಂದರೆ, ಮೊಹಸಿನ್ ಹತ್ಯೆಯಾದ ದಿನ ಕೂಡ ನಂಜುಂಡ ಆತನೊಡನೆ ಲೈಂಗಿಕ ಸಂಬಂಧ ಬೆಳೆಸಿದ್ದಾನೆ ಮತ್ತು ತನ್ನ ಸ್ನೇಹಿತರನ್ನು ಕೂಡ ಕರೆದಿದ್ದ.

ಉಳಿದ ಸ್ನೇಹಿತರು ಕೂಡ ಸಲಿಂಗ ಕಾಮದ ರುಚಿ ಕಂಡಿದ್ದರಿಂದ ಅವರು ಮೊಹಸಿನ್ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಮುಂದಿನ ಪರಿಣಾಮದ ಬಗ್ಗೆ ಹೆದರಿದ ಆರೋಪಿಗಳು ಮೊಹಸಿನ್‌ನಲ್ಲಿ ಆ ಸ್ಥಳದಲ್ಲೇ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಬಿಟ್ಟಿದ್ದಾರೆ.

ಬಂಧಿತರನ್ನು ನಂಜುಂಡ, ಮೋಹನ್ ಕುಮಾರ್, ಅಂಬರೀಷ್, ಗಿರೀಶ್, ಸುಧಾಕರ್, ಪ್ರಭಾಕರ್ ಮತ್ತು ಸೋಮ ಅಲಿಯಾಸ್ ಸೋಮಶೇಖರ ಎಂದು ಗುರುತಿಸಲಾಗಿದೆ. ಇವರಲ್ಲಿ ಕೆಲವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಕೆಲವರ ವಿರುದ್ಧ ಈಗಾಗಲೆ ಕೆಲ ಕೇಸುಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+