ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಫಲಿತಾಂಶ : 18 ರಲ್ಲಿ 15 ಕ್ಷೇತ್ರ YSR ವಶ

By Mahesh
|
Google Oneindia Kannada News

ಆಂಧ್ರಪ್ರದೇಶ, ಜೂ.15: ಆಂಧ್ರಪ್ರದೇಶದ 18 ವಿಧಾನಸಭಾ ಕ್ಷೇತ್ರ ಹಾಗೂ 1 ಲೋಕಸಭಾ ಚುನಾವಣಾ ಫಲಿತಾಂಶ ಜೂ.15ರಂದು ಬಹಿರಂಗಗೊಂಡಿದೆ. ತೆಲಂಗಾಣದ ಒಂದು ಕ್ಷೇತ್ರ ಸೇರಿದಂತೆ ಒಟ್ಟು ಮೂರು ಕ್ಷೇತ್ರಗಳನ್ನು ಮಾತ್ರ ವೈಎಸ್ ಆರ್ ಕಾಂಗ್ರೆಸ್ ಕಳೆದುಕೊಂಡಿದೆ. 18 ರಲ್ಲಿ 15 ವಿಧಾನಸಭಾ ಕ್ಷೇತ್ರ ಜಗನ್ ಪಾಲಾಗಿದೆ.

* 2 ವಿಧಾನಸಭಾ ಕ್ಷೇತ್ರ ರಾಮಚಂದ್ರಾಪುರಂ (11,919) ಹಾಗೂ ನರ್ಸಾಪುರಂ(4,826) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ದಾಖಲಿಸಿದೆ.
* ತೆಲಂಗಾಣದಲ್ಲಿ ತೀವ್ರ ಪೈಪೋಟಿ ನೀಡಿದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಪರ್ಕಲ್ ಕ್ಷೇತ್ರದಲ್ಲಿ ಟಿಆರ್ ಎಸ್ ಪಕ್ಷಕ್ಕೆ 1,517 ಮತಗಳ ಅಂತರದಿಂದ ಸೋತಿದೆ.

ಸಮಯ 2.50 : ರಾಯಲಸೀಮೆ ವಶಪಡಿಸಿಕೊಂಡ ಮೇಲೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಈಗ ತೆಲಂಗಾಣದಲ್ಲಿ ಒಂದು ಸ್ಥಾನಕ್ಕಾಗಿ ಟಿಆರ್ ಎಸ್ ಪಕ್ಷದ ಜೊತೆ ಹೋರಾಟ ನಡೆಸುತ್ತಿದೆ.

ಸಮಯ 2:40: ನೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ 2,91,745 ಮತಗಳ ಅಂತರದಿಂದ ವೈಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಜಯ.

ಸಮಯ 1:45: ರಾಜಂಪೇಟೆಯಲ್ಲಿ (38,219)ರಲ್ಲಿ ಜಯ ಸಾಧಿಸುವ ಮೂಲಕ ವೈಎಸ್ ಆರ್ ಕಾಂಗ್ರೆಸ್ ಪಕ್ಷ ರಾಯಲಸೀಮೆಯಲ್ಲಿ 7ನೇ ಗೆಲುವು ಸಾಧಿಸಿದೆ. ಬಾಕಿ ಉಳಿದಿರುವ ತಿರುಪತಿ ಕ್ಷೇತ್ರದಲ್ಲಿ 9,800 ಮತಗಳಿಂದ ಮುನ್ನಡೆ ಪಡೆದಿದೆ.

ಸಮಯ 1:30: ಚಂಚಲಗುಡ ಜೈಲಿನಲ್ಲಿ ಹಬ್ಬದ ವಾತಾವರಣ, ಜಗನ್ ಅವರ ತಾಯಿ ವಿಜಯಮ್ಮ, ಪತ್ನಿ ಭಾರತಿ, ತಂಗಿ ಶರ್ಮಿಳಾ ಹಾಗೂ ಇನ್ನಿತರ ಕುಟುಂಬ ವರ್ಗದವರು ಜಗನ್ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ಸಮಯ 1:10 : ರಾಯಲಸೀಮೆಯಲ್ಲಿ ಜಗನ್ ಪಕ್ಷ ದಿಗ್ವಿಜಯ. 8 ಕ್ಷೇತ್ರಗಳಲ್ಲಿ 6ರಲ್ಲಿ ಗೆಲುವು ಉಳಿದೆರಡರಲ್ಲಿ ಭಾರಿ ಮುನ್ನಡೆ.

ಸಮಯ 1:00: ರಾಯಚೊಟಿ (56,658 ಮತಗಳು), ಅಲ್ಲಗಡ್ಡ (36,798), ಎಮ್ಮಿಗನೂರು (20,103), ರಾಯದುರ್ಗಂ (32,472), ಅನಂತಪುರಂ (24,701), ರೈಲ್ವೆ ಕೊಡುರು (19,429) ಹಾಗೂ ತಿರುಪತಿ 7,100 ಮತಗಳಿಂದ ಮುನ್ನಡೆ, ರಾಜಂಪೇಟ್ ನಲ್ಲಿ 22,746 ಮತಗಳಿಂದ ವೈಎಸ್ ಆರ್ ಕಾಂಗ್ರೆಸ್ ಮುನ್ನಡೆ

ಸಮಯ 12.45: ವೈಎಸ್ ಆರ್ ಕಾಂಗ್ರೆಸ್ ಪಕ್ಷ 14 ಕ್ಷೇತ್ರಗಳ ಘೋಷಿತ ಫಲಿತಾಂಶದಲ್ಲಿ 13 ರಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
* ನೆಲ್ಲೂರು ಲೋಕಸಭಾ ಕ್ಷೇತ್ರವನ್ನು ವಶಪಡಿಸಿಕೊಂದ ವೈಎಸ್ ಆರ್ ಕಾಂಗ್ರೆಸ್.

ಸಮಯ 12.40: ವೈಎಸ್ ಆರ್ ಕಾಂಗ್ರೆಸ್ ಪಕ್ಷದ ತೆಲ್ಲಂ ಬಲಿರೆಡ್ಡಿಗೆ ಪೊಲಾವರಂ ಕ್ಷೇತ್ರದಲ್ಲಿ ಗೆಲುವು
* ವೈಎಸ್ ಆರ್ ಕಾಂಗ್ರೆಸ್ ಶೋಭಾ ನಾಗಿ ರೆಡ್ಡಿಗೆ ಅಲ್ಲಗಡ್ಡ ಕ್ಷೇತ್ರದಲ್ಲಿ ಗೆಲುವು
* ವೈಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿ ಮೆಕಪತಿ 84,000 ಮತಗಳ ಮುನ್ನಡೆ ನೆಲ್ಲೂರು ಲೋಕಸಭಾ ಕ್ಷೇತ್ರ.

* ಪರಕಲಾ ಕ್ಷೇತ್ರದಲ್ಲಿ ಟಿಆರ್ ಎಸ್ ಅಭ್ಯರ್ಥಿ 6408 ಮತಗಳ ಮುನ್ನಡೆ

ಸಮಯ 12.25: ಕಾಂಗ್ರೆಸ್ ಪಾಲಿಗೆ ಮೊದಲ ಜಯ ನರಸಾಪುರಂನಲ್ಲಿ ಲಭಿಸಿದ. ವೈಎಸ್ ಆರ್ ಕಾಂಗ್ರೆಸ್ 5 ರಲ್ಲಿ 4 ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದೆ.

* ಪೊಲಾವರಂ, ಮಾಚೆರ್ಲಾ, ಎಮ್ಮಿಗನೂರು ಹಾಗೂ ಪ್ರಥಿಪಾಡು ಕ್ಷೇತ್ರದಲ್ಲಿ ವೈಎಸ್ ಆರ್ ಕಾಂಗ್ರೆಸ್ ಜಯ ದಾಖಲಿಸಿದೆ.

ಸಮಯ 12.01 : ವೈಎಸ್ ಜಗನ್ ಮೋಹನ್ ರೆಡ್ಡಿ ಪಕ್ಷದ ಕಚೇರಿ ಹೊರಗೆ ಶಾಸಕ ರೆಹಮಾನ್ 5 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ವಿಜಯೋತ್ಸವ ಆಚರಿಸಿದರು.

ಸಮಯ 11.45: ವೈಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ರೆಡ್ಡಿಗೆ ಮಾಚೆರ್ಲಾ ಕ್ಷೇತ್ರದಲ್ಲಿ 15,468 ಮತಗಳ ಅಂತರದಿಂದ ಜಯ.

* ನೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ವೈಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿ 50,000 ಮತಗಳ ಭರ್ಜರಿ ಮುನ್ನಡೆ ಪಡೆದಿದ್ದಾರೆ.

* ಪ್ರತಿಪಾಡು ಕ್ಷೇತ್ರದ ವೈಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಅವರು 15000 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ.

ಸಮಯ 11.30: ನರಸಾಪುರಂ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ 3600 ಮತಗಳಿಂದ ಮುನ್ನಡೆ
* ವೈಎಎಸ್ ಆರ್ ಕಾಂಗ್ರೆಸ್ ಪಕ್ಷ ತಿರುಪತಿಯಲ್ಲಿ 5870 ಮತಗಳಿಂದ ಮುನ್ನಡೆ
* ಓನ್ ಗೋಲೆಯಲ್ಲಿ ವೈಎಎಸ್ ಆರ್ ಕಾಂಗ್ರೆಸ್ ಪಕ್ಷ 7600 ಮತಗಳಿಂದ ಮುನ್ನಡೆ

ಸಮಯ 11:00: ಈ ಕ್ಷಣದ ಟ್ರೆಂಡ್
ವೈಎಸ್ ಆರ್ ಕಾಂಗ್ರೆಸ್ :15
ಕಾಂಗ್ರೆಸ್:2
ಟಿಆರ್ ಎಸ್ : 1
ಟಿಡಿಪಿ:0

ಸಮಯ 10:50 : ಚಂಚಲಗುಡ ಜೈಲಿನಲ್ಲಿ ಜಗನ್ ಮೋಹನ್ ರೆಡ್ಡಿ ತಮ್ಮ ಕುಟುಂಬ ಸದಸ್ಯರೊಂದಿಗೆ ಭೇಟಿ, ಮಾತುಕತೆ

ಸಮಯ 10.45 : ವೈಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿ ಎಮ್ಮಿಗನೂರು ಅಭ್ಯರ್ಥಿ ಎರಾಕೋಟ ಚೆನ್ನಕೇಶವ ರೆಡ್ಡಿಗೆ 20,103 ಮತಗಳ ಅಂತರದ ಜಯ.
ಸಮಯ 10.30 : ನರಸಾಪುರಂ, ರಾಮಚಂದ್ರಾಪುರಂ ನರಸಂಪೇಟ್ ನಲ್ಲಿ ಕಾಂಗ್ರೆಸ್ ಅಚ್ಚರಿ ಮುನ್ನಡೆ

"ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲು ಖಚಿತ. ಸರ್ಕಾರ ರಾಜೀನಾಮೆ ಕೊಟ್ಟು ಮಧ್ಯಂತರ ಚುನಾವಣೆ ನಡೆಸುವುದೊಂದೇ ಮಾರ್ಗ" ಎಂದು ವೈಎಸ್ ಆರ್ ಕಾಂಗ್ರೆಸ್ ವಕ್ತಾರ ಅಂಬಟಿ ರಾಮ್ ಬಾಬು ಹೇಳಿಕೆ.

ನೆಲ್ಲೂರು ಲೋಕಸಭಾ ಕ್ಷೇತ್ರದಲ್ಲೂ ವೈಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ

ಸಮಯ 10.20 : ವೈಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಒಂದು ಕ್ಷೇತ್ರದಲ್ಲಿ ಜಯ. ಎಮ್ಮಿಗನೂರು ವಿಧಾನಸಭಾ ಕ್ಷೇತ್ರದಲ್ಲಿ ಚನ್ನಕೇಶವರೆಡ್ಡಿಗೆ ಭರ್ಜರಿ ಜಯ

ಸಮಯ 10.15: ವೈಎಸ್ ಆರ್ ಕಾಂಗ್ರೆಸ್ ಮುನ್ನಡೆ ಉದಯಗಿರಿ, ತಿರುಪತಿ, ಪ್ರಕಾಲದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ

ಸಮಯ 10:00: ವೈಎಸ್ ಆರ್ :15 ರಲ್ಲಿ ಮುನ್ನಡೆ
ಕಾಂಗ್ರೆಸ್ :1
ಟಿಆರ್ ಎಸ್ :1
ಟಿಡಿಪಿ :1

ಸಮಯ 9.30: ವೈಎಸ್ ಆರ್ ಕಾಂಗ್ರೆಸ್ ಪಕ್ಷ 18 ಕ್ಷೇತ್ರಗಳಲ್ಲಿ 14 ರಲ್ಲಿ ಮುನ್ನಡೆ, ಪರ್ಕಾಲ್, ತೆಲಂಗಾಣ ಮತ್ತು ತಿರುಪತಿಯಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ.
ಆಂಧ್ರಪ್ರದೇಶದ ರಾಜಕೀಯ ಭವಿಷ್ಯ ನಿರ್ಧರಿಸುವ ದಿನ ಬಂದಾಗಿದೆ. 12ಜಿಲ್ಲೆಗಳ 18 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ವೈಎಸ್ ಆರ್ ಕಾಂಗ್ರೆಸ್ ಆರಂಭಿಕ ಮುನ್ನಡೆ ಪಡೆದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಶಾಕ್ ನೀಡಿದ್ದಾರೆ.

'ಇದು ಜಗನ್ ದಿನ' ಎಂದು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಪತ್ನಿ ಭಾರತಿ ಅವರು ಹೇಳಿದ ಮಾತು ನಿಜವಾಗುತ್ತಿದೆ.

English summary
Andhra Pradesh by-polls 2012 update : YSR Congress has won 13 out of 14 seats declared. Congress wins Narasapuram constituency.MLC Rehman fires his gun 5 times in the air in a celebratory mood outside YS Jaganmohan Reddy's party office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X