• search

ನಿತ್ಯಾನಂದನಿಗೆ ಜಾಮೀನು : ಶಾಂತಿ ಕದಡಿದರೆ ಹುಷಾರ್

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ರಾಮನಗರ, ಜೂ. 15 : ಸಾರ್ವಜನಿಕ ಶಾಂತಿಗೆ ಭಂಗ ತರಬಹುದೆಂಬ ಕಾರಣದಿಂದ ರಾಮನಗರ ಪೊಲೀಸರಿಂದ ಬಂಧಿತನಾಗಿದ್ದ ವಿವಾದಾತ್ಮಕ ಸ್ವಾಮಿ ನಿತ್ಯಾನಂದನಿಗೆ ರಾಮನಗರ ಜಿಲ್ಲಾಧಿಕಾರಿ ಶ್ರೀರಾಮ ರೆಡ್ಡಿ ಅವರು ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದ್ದಾರೆ.

  Nithyananda granted bail by Ramnagar DC

  1 ವರ್ಷಗಳ ಕಾಲ ಸಾರ್ವಜನಿಕ ಶಾಂತಿಗೆ ಭಂಗ ತರಬಾರದು ಎಂಬ ಷರತ್ತನ್ನು ವಿಧಿಸಲಾಗಿದ್ದು, 1 ಲಕ್ಷ ರು. ಬಾಂಡ್ ನೀಡಬೇಕು ಹಾಗು ಇಬ್ಬರಿಂದ ತಲಾ 1 ಲಕ್ಷ ರು.ನ ಶ್ಯೂರಿಟಿ ನೀಡಬೇಕು ಎಂಬ ಷರತ್ತಿನ ಮೇಲೆ ಸ್ವಾಮಿ ನಿತ್ಯಾನಂದನಿಗೆ ಜಾಮೀನು ನೀಡಲಾಗಿದೆ. ಷರತ್ತು ಮೀರಿ ಶಾಂತಿ ಕದಡಿದರೆ ಮತ್ತೆ ಬಂಧಿಸಲಾಗುವುದು ಎಂಬ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.

  ಗುರುವಾರ ರಾಮನಗರ ಜೆಎಮ್ಎಫ್‌ಸಿ ನ್ಯಾಯಾಲಯದಿಂದ ಜಾಮೀನು ಸಿಕ್ಕ ಕೂಡಲೆ, ಅಪರಾಧಿ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 107 ಮತ್ತು 151ರ ಅಡಿಯಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರಬಹುದೆಂಬ ಕಾರಣದಿಂದ ನಿತ್ಯಾನಂದನನ್ನು ಪೊಲೀಸರು ಬಂಧಿಸಿ ಚನ್ನಪಟ್ಟಣದಲ್ಲಿ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ಆಗ ನಿತ್ಯಾನಂದನನ್ನು 1 ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

  ಪೊಲೀಸರು ಮತ್ತು ನಿತ್ಯಾನಂದನ ವಕೀಲರ ವಾದಗಳನ್ನು ಕೇಳಿದ ಜಿಲ್ಲಾಧಿಕಾರಿ ಶ್ರೀರಾಮ್ ಅವರು ಜಾಮೀನು ನೀಡಿದ್ದಾರೆ. ಒಟ್ಟು ಮೂರು ಲಕ್ಷ ರು. ಬಾಂಡ್ ನೀಡಬೇಕಾಗಿರುವುದರಿಂದ ನಿತ್ಯಾನಂದ ಶನಿವಾರ ಬೆಳಿಗ್ಗೆ 10 ಗಂಟೆಗೆ ಬಂಧಮುಕ್ತರಾಗಲಿದ್ದಾನೆ. ನಿತ್ಯಾನಂದನನ್ನು ಮೈಸೂರು ಜೈಲಿನಿಂದ ರಾಮನಗರ ಜೈಲಿಗೆ ಕರೆತರುವ ಸಿದ್ಧತೆಗಳು ನಡೆಯುತ್ತಿವೆ.

  ಇನ್ನು 1 ವರ್ಷಗಳ ಕಾಲ ನಿತ್ಯಾನಂದ ಬಿಡದಿ ಆಶ್ರಮದಲ್ಲಿ ಯಾವುದೇ ಪತ್ರಿಕಾಗೋಷ್ಠಿ ನಡೆಯಬೇಕಾಗಿದ್ದರೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕಾಗಿದೆ. ಹಾಗೆಯೆ, ಶಾಂತಿಗೆ ಭಂಗ ತರುವಂತಹ ಯಾವುದೇ ಕಾರ್ಯಕ್ರಮವನ್ನು ಬಿಡದಿಯಲ್ಲಿ ಅಥವಾ ರಾಜ್ಯದ ಯಾವುದೇ ಸ್ಥಳದಲ್ಲಿ ಹಮ್ಮಿಕೊಳ್ಳುವಂತಿಲ್ಲ.

  ಮೈಸೂರಿನಿಂದ ನಿತ್ಯಾನಂದನನ್ನು ಶುಕ್ರವಾರ ಒದಗಿಸಿದ್ದ ಬಿಗಿ ಭದ್ರತೆಯಲ್ಲಿ ರಾಮನಗರಕ್ಕೆ ಕರೆತರಲಾಗುತ್ತಿದೆ. ಹೀಗಾಗಿ, ಬೆಂಗಳೂರು ಮೈಸೂರು ರಸ್ತೆಯಲ್ಲಿ ಮತ್ತೆ ವಾಹನ ದಟ್ಟಣೆ ಸಂಭವಿಸಿದರೆ ಆಶ್ಚರ್ಯವಿಲ್ಲ. ರಾಮನಗರ ಜೈಲಿನಲ್ಲಿ ಇಟ್ಟರೆ ಕಾನೂನು ಸುವ್ಯವಸ್ಥೆಗೆ ಭಂಗ ಬರುತ್ತದೆ ಎಂಬ ಕಾರಣದಿಂದ ನಿತ್ಯಾನಂದನನ್ನು ಮೈಸೂರಿಗೆ ರವಾನಿಸಲಾಗಿತ್ತು. ಆಗ ಸಂಭವಿಸಿದ ವಾಹನ ದಟ್ಟಣೆಯಿಂದ ಸಾರ್ವಜನಿಕರು ಸಂಕಷ್ಟಕ್ಕೆ ಎದುರಾಗಿದ್ದರು.

  10 ಕೋಟಿ ರು. ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಯ ವಿರುದ್ಧ ರಿಟ್ ಅರ್ಜಿ ಸಲ್ಲಿಸಿರುವ ನಿತ್ಯಾನಂದ ವಿರುದ್ಧ ಸಿಡಿದಿರುವ ಸದಾನಂದ ಗೌಡ ಅವರು, ಜನರಿಗಾಗಿ ಮತ್ತು ಜನರ ರಕ್ಷಣೆಗಾಗಿ ಇಂತಹ ಸಾವಿರಾರು ಕೇಸುಗಳನ್ನು ಎದುರಿಸಲು ಸಿದ್ಧ. ಜನರ ಹಿತಾಸಕ್ತಿಗಾಗಿ ಜೈಲಿಗೆ ಕೂಡ ಹೋಗಲು ಸಿದ್ಧ ಎಂದು ಸದಾನಂದ ಗೌಡರು ಸೆಡ್ಡು ಹೊಡೆದಿದ್ದಾರೆ.

  ಈ ಸಂದರ್ಭದಲ್ಲಿ ಕೆಲ ಪ್ರಶ್ನೆಗಳು ಎದುರಾಗಿವೆ

  * ಎಲ್ಲ ಅನಾಚಾರಗಳಿಗೆ ಸಾಕ್ಷಿಯಾಗಿರುವ ಬಿಡದಿ ಧ್ಯಾನಪೀಠಂ ಆಶ್ರಮದ ಬೀಗವನ್ನು ಸರಕಾರ ನಿತ್ಯಾನಂದನಿಗೆ ಮತ್ತೆ ಒಪ್ಪಿಸಬೇಕಾ?

  * ಮುಖ್ಯಮಂತ್ರಿಯ ವಿರುದ್ಧ ಸೆಡ್ಡು ಹೊಡೆದಿರುವ ನಿತ್ಯಾನಂದನಿಗೆ ಕರ್ನಾಟಕದಲ್ಲಿ ಬೀಡುಬಿಡಲು ಅವಕಾಶ ಮಾಡಿಕೊಡಬೇಕಾ?

  * ಬಿಡದಿಯಲ್ಲಿ ಕಾಲಿಡಲು ನಿತ್ಯಾನಂದನಿಗೆ ಅವಕಾಶ ಮಾಡಿಕೊಟ್ಟರೂ, ಆತನ ಚಟುವಟಿಕೆಗಳ ಮೇಲೆ ರಾಜ್ಯದ ಪೊಲೀಸರು ಒಂದು ಕಣ್ಣಿಡಬೇಕಾ?

  * ಕರ್ನಾಟಕದ ಜನತೆ ಮತ್ತು ನಿತ್ಯಾನಂದನನ್ನು ಹಿಂಬಾಲಿಸುವ ಖ್ಯಾತ ನಾಮರು ಯಾವ ನಿಲುವು ತಳೆಯಬೇಕು?

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Swamy Nithyananda has been granted conditional bail by Ramnagar DC Sriram Reddy after he was asked to give Rs. 1 lakh bond and equal amount surety by two people. Now, should Karnataka govt allow Nithyananda to stay in Bidadi, Karnataka? ಶಾಂತಿ ಕದಡಿದರೆ ಎಚ್ಚರಿಕೆ, ನಿತ್ಯಾನಂದನಿಗೆ ಜಾಮೀನು.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more