• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋಮಾರಿ ಮತದಾರರು ಹಾಗೂ ಸಮರ್ಥ ಅಭ್ಯರ್ಥಿ ಸೋಲು

By Mahesh
|
ಬೆಂಗಳೂರು, ಜೂ.15: ಭಾರಿ ಕುತೂಹಲ ಕೆರಳಿಸಿದ್ದ ಬೆಂಗಳೂರು ಪದವೀಧರ ಕ್ಷೇತ್ರ ಫಲಿತಾಂಶ ಗುರುವಾರ (ಜೂ.14) ಬೆಳಗ್ಗೆ ಅಧಿಕೃತವಾಗಿ ಪ್ರಕಟವಾಗಿದೆ. ಬಿಜೆಪಿಯ ರಾಮಚಂದ್ರಗೌಡರಿಗೆ ಭರ್ಜರಿ ಪೈಪೋಟಿ ನೀಡಿದ ಜೆಡಿಎಸ್ ನ ಎ ದೇವೇಗೌಡ ಅವರು ಕೇವಲ 242 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದೆ. ಆದರೆ, 15 ಸಾವಿರಕ್ಕೂ ಅಧಿಕ ಮತದಾರರನ್ನು ಜಾಗೃತಗೊಳಿಸಿ, ಮತದಾರರ ಪಟ್ಟಿಗೆ ನೋಂದಾಯಿಸಿದ್ದ ಸಮರ್ಥ ಅಭ್ಯರ್ಥಿಗೆ ಅಶ್ವಿನ್ ಮಹೇಶ್ ಅವರಿಗೆ ಪ್ರಜ್ಞಾವಂತ ಮತದಾರರು ಸೋಲುಣಿಸಿದ್ದಾರೆ.

ಬೆಂಗಳೂರು ಪದವೀಧರ ಕ್ಷೇತ್ರದ 15,000 ಮತದಾರರನ್ನು ಜಾಗೃತಗೊಳಿಸಿದ್ದ ಅಶ್ವಿನ್ ಅವರಿಗೆ ಕೇವಲ 4,349 ಮತಗಳು ಲಭಿಸಿದೆ. ಇದರಲ್ಲಿ 4,088 ಮೊದಲ ಪ್ರಾಶಸ್ತ್ಯ ಮತಗಳು ಸೇರಿದೆ. ವಿಜೇತ ಅಭ್ಯರ್ಥಿ ರಾಮಚಂದ್ರಗೌಡ ಅವರಿಗೆ 6,521 ಮೊದಲ ಪ್ರಾಶಸ್ತ್ಯ ಮತಗಳು ಲಭಿಸಿದ್ದು ಗಮನಾರ್ಹ.

ಮಹೇಶ್ ಅವರು ನೋಂದಾಯಿಸಿದ್ದ 15,000 ಪದವೀಧರರಲ್ಲಿ ಕೇವಲ 4 ಸಾವಿರ ಜನ ಬಂದು ಮತ ಚಲಾಯಿಸಿದ್ದು ಅಶ್ವಿನ್ ಗೆ ಮುಳುವಾಗಿದೆ.
ಎರಡನೇ ಸ್ಥಾನ ಪಡೆದ ಅಭ್ಯರ್ಥಿ ಎ ದೇವೇಗೌಡ ಅವರು 242 ಮತಗಳ ಅಂತರದಿಂದ ಸೋಲುಂಡಿದ್ದು ಗಮನಿಸಿದರೆ, ಮಹೇಶ್ ಅವರು ನೀಡಿದ ಪೈಪೋಟಿ ಅರ್ಥ ಮಾಡಿಕೊಳ್ಳಬಹುದು.

ಬೆಂಗಳೂರಿಗರದ್ದು ಹುಸಿ ಹೋರಾಟವೇ? : ಭ್ರಷ್ಟಾಚಾರ ವಿರುದ್ಧ ಅಣ್ಣಾ ಹಜಾರೆ ಅವರು ಬೆಂಗಳೂರಿನಲ್ಲಿ ಆಂದೋಲನ ಕೈಗೊಂಡಾಗ, ವಾರಾಂತ್ಯದಲ್ಲಿ ಮುಗಿಬಿದ್ದು ಬೆಂಗಳೂರಿಗರು ಜಮಾವಣೆಗೊಳ್ಳುತ್ತಿದ್ದರು. ಆದರೆ, ಟೀಂ ಅಣ್ಣಾ ಬೆಂಬಲಿತ ಅಭ್ಯರ್ಥಿ ಚುನಾವಣೆಗೆ ನಿಂತರೆ ಬೆಂಬಲಿಸುವ ಬದಲು ವಾರಾಂತ್ಯದ ಸುಖ ಕಾಣುತ್ತಾ ಪದವೀಧರ ಮತದಾರರು ಮತಗಟ್ಟೆಯಿಂದ ದೂರ ಉಳಿದಿದ್ದು ದುರ್ದೈವ.

ನಾಗರೀಕ ಸಮಸ್ಯೆಗಳು ಬಂದಾಗ ಒಕ್ಕೊರಲ ದನಿ ಏರಿಸುವ ಬೆಂಗಳೂರಿಗರು ಸಮಸ್ಯೆ ಪರ ಹೋರಾಟ ನಡೆಸುವ ಸಮರ್ಥ ಅಭ್ಯರ್ಥಿಯನ್ನು ಬೆಂಬಲಿಸುವ ಅವಕಾಶ ತಪ್ಪಿಸಿಕೊಂಡಿದ್ದಾರೆ. ಬದಲಾವಣೆ ಬೇಕು ಎನ್ನುವ ಜನರು ಬೆಂಬಲ ನೀಡುವುದನ್ನು ಕಲಿತರೆ ಒಳ್ಳೆಯದು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ.

ಅಶ್ವಿನ್ ಮಹೇಶ್ ಯಾರು?: ಖಗೋಳ ಹಾಗೂ ವಾಯುಮಂಡಲ ವಿಜ್ಞಾನಿಯಾಗಿ ತರಬೇತಿ ಪಡೆದಿರುವ ಡಾ. ಅಶ್ವಿನ್ ಮಹೇಶ್ ಅಮೆರಿಕದ ಪ್ರತಿಷ್ಠಿತ ನಾಸಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಮಹೇಶ್ ತಮ್ಮ ವೃತ್ತಿ ಜೀವನವನ್ನು ನಕ್ಷತ್ರಗಳ ರಚನೆ, ಜಾಗತಿಕ ಹವಾಮಾನ ಬದಲಾವಣೆ, ನಗರೀಕರಣ ಹಾಗೂ ಸಾರ್ವಜನಿಕ ಸಾರಿಗೆ ಮುಂತಾದ ವಿಷಯಗಳ ಕುರಿತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಅವರು ಸಂಶೋಧನಕಾರರಾಗಿ Centre of Excellence in Urban Governance, IIMB, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ABIDE ಸದಸ್ಯರಾಗಿ ಡಾ. ಅಶ್ವಿನ್ ಮಹೇಶ್ ಅವರು ಬೆಂಗಳೂರಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಪ್ರಮುಖವಾಗಿ ನಗರ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಇವರು ಪರಿಚಯಿಸಿದ ಬಿಗ್10/ಬಿಗ್‌ಸರ್ಕಲ್ ಬಸ್ಸುಗಳು ಜನಪ್ರಿಯವಾಗಿವೆ.

ಬೆಂಗಳೂರು ಸಂಚಾರ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಡೆಸಲು ದೇಶದಲ್ಲೇ ಪ್ರಥಮ ಬಾರಿಗೆ ಉತ್ಕೃಷ್ಟ ಸಂಚಾರ ನಿರ್ವಹಣಾ ಕೊಠಡಿಯನ್ನು ಸ್ಥಾಪಿಸುವಲ್ಲಿ ನೆರವಾಗಿದ್ದಾರೆ ಮತ್ತು ತಮ್ಮ ಮ್ಯಾಪಯುನಿಟಿ ಕಂಪನಿಯಿಂದ ಮಾಹಿತಿ ತಂತ್ರಜ್ಞಾನದ ನೆರವನ್ನು ನೀಡಿದ್ದಾರೆ. ಇವರ ಸಾಮಾಜಿಕ ಕೊಡುಗೆಯನ್ನು ಗುರುತಿಸಿ 2009ರಲ್ಲಿ ಸಾಮಾಜಿಕ ಉದ್ಯಮಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅಶೋಕಾ ಫೇಲೊ ಗೌರವ ದೊರೆತಿದೆ.

ಡಾ. ಅಶ್ವಿನ್ ಅವರು ಭ್ರಷ್ಟಾಚಾರದ ವಿರುದ್ಧ ಭಾರತ (India Against Corruption)ದಲ್ಲಿ ಕರ್ನಾಟಕದ ಧ್ವನಿಯಾಗಿ ಹೋರಾಟ ಮಾಡಿದ್ದಾರೆ ಮತ್ತು ಕರ್ನಾಟಕದಲ್ಲಿ 'ಭ್ರಷ್ಟಾಚಾರ ಸಾಕು' ಚಳವಳಿಯನ್ನು ಪ್ರಾರಂಭಿಸಿದವರಲ್ಲಿ ಒಬ್ಬರಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಚುನಾವಣೆ ಸುದ್ದಿಗಳುView All

English summary
Loksatta Party candidate Dr. Ashwin Mahesh enrolled more than 15,000 voters in Bangalore Graduates’ Constituency of the Karnataka Legislative Council. But, Ashwin got only 4,000 odds and Ramachandre Gowda of BJP secured Victory

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more