• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಲೆ ಕೇಸ್ ತಪ್ಪಿಸಿಕೊಳ್ಳಲು ಸಕತ್ ಕತೆ ಕಟ್ಟಿದ

By Mahesh
|
ಚಿಂತಾಮಣಿ, ಜೂ. 14: ತಿಪ್ಪಣ್ಣ ತನ್ನ ಹೆಂಡತಿ ನಾಗಮ್ಮಳನ್ನು ಕೊಂದಿದ್ದು ಯಾಕೆ? ಕೊಲೆಯ ಹಿಂದಿನ ಮುಖ್ಯ ಉದ್ದೇಶವಾದರೂ ಏನು? ಎಂಬುದರ ಬಗ್ಗೆ ಮಾತನಾಡುವುದನ್ನು ಬಿಟ್ಟ ಜನತೆ, ಕೊಲೆ ನಂತರ ಎಸ್ಕೇಪ್ ಯೋಜನೆ ಹಾಕಿದ ತಿಪ್ಪಣ್ಣನ ಚಾಣಾಕ್ಷತನದ ಕತೆ ತಾಲೂಕಿನಲ್ಲಿ ಹಬ್ಬುತ್ತಿದೆ.

ಕ್ಷುಲ್ಲಕ ವಿಚಾರಕ್ಕೆ ಪತ್ನಿಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿ ತಿಪ್ಪಣ್ಣ, ಪತ್ನಿ ಸಾವನ್ನಪ್ಪಿದ ರೀತಿಯ ಬಗ್ಗೆ ಸೂಕ್ಷ್ಮವಾಗಿ ಕತೆ ಹೆಣೆದಿದ್ದ. ಚಿಂತಾಮಣಿ ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಗಾನಹಳ್ಳಿ ಗ್ರಾಮದ ನಿವಾಸಿ ತಿಪ್ಪಣ್ಣ ತನ್ನ ಪತ್ನಿ ನಾಗಮ್ಮಳೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಬಳಿಕ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದನು.

ಘಟನೆಯಿಂದ ಭಯಭೀತಗೊಂಡ ತಿಪ್ಪಣ್ಣ ತನ್ನ ಮಗ ಶ್ರೀನಿವಾಸ್‌ನನ್ನು ತಕ್ಷಣವೇ ಬಟ್ಲಹಳ್ಳಿ ಪೊಲೀಸ್ ಠಾಣೆಗೆ ಕಳಿಸಿದ್ದಾನೆ.

ಠಾಣೆಗೆ ಬಂದ ಶ್ರೀನಿವಾಸ್ ತನ್ನ ತಾಯಿ ಹೊಲದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಹಾವು ಕಚ್ಚಿ ಹೊಲದಲ್ಲಿಯೇ ಸಾವನ್ನಪ್ಪಿರುವುದಾಗಿ ವಿವರಿಸಿದ್ದಾನೆ. ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟಾಚಲಪತಿಗೆ ಅನುಮಾನ ಬಂದು, ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ತಿಪ್ಪಣ್ಣ ತನ್ನ ಬಣ್ಣ ಬಯಲಾಗುವ ಶಂಕೆ ವ್ಯಕ್ತವಾದ್ದರಿಂದ ಮಗನ ಹೇಳಿಕೆಯನ್ನು ತಿರುಚಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಂಡು ಬೆಚ್ಚಿಬಿದ್ದಿದ್ದಾಳೆ. ಭಯದಲ್ಲಿ ಹಿಂದೆ ಸರಿಯುತ್ತಿದ್ದಾಗ ಕಾಲು ಚಾರಿ ಕೆಳಗೆ ಬಿದ್ದಿದಾಳೆ. ತಲೆಯ ಹಿಂಭಾಗಕ್ಕೆ ಕಲ್ಲು ಬಡಿದ ಪರಿಣಾಮ ಸಾವನ್ನಪ್ಪಿದ್ದಾಲೆ ಎಂದಿದ್ದಾನೆ.

ಮರಣೋತ್ತರ ಪರೀಕ್ಷೆ ನಡೆಸಿದಾಗ ನಾಗಮ್ಮಳ ಹಿಂಭಾಗದ ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಬಗ್ಗೆ ವೈದ್ಯರು ಸ್ಪಷ್ಟಪಡಿಸಿ ವರದಿ ನೀಡಿದ್ದಾರೆ. ಪೊಲೀಸರು ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಂಡು ನಂತರ ಮಗ ಮತ್ತು ತಂದೆಯನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.

ಪೊಲೀಸರು ಬರುತ್ತಿರುವ ಸುದ್ದಿ ತಿಳಿದು ಬಂಧನ ಭೀತಿಯಿಂದ ತಿಪ್ಪಣ್ಣ ವಿಷ ಕುಡಿದು ಆತ್ನಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಜೀವ ಉಳಿಸಿದ್ದಾರೆ.

ಕೊನೆಗೆ ಆಸ್ಪತ್ರೆ ಬೆಡ್ ಮೇಲೆ ಕೂತು, ಪತ್ನಿಯನ್ನು ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಬಟ್ಲಹಳ್ಳಿ ಪಿಎಸ್‌ಐ ಸೂರ್ಯಪ್ರಕಾಶ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Husband kills his wife for some petty issue in Batlahalli and later mis guides Police and create scene as it Suicide case. But, Chikballapur district Chitamani Police nabbed the killer husbanad and booked a case against him.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more