ಭಾರತದ ಮಹಿಳೆಯರು ರಕ್ತದಾನ ಮಾಡುವುದು ಕಡಿಮೆ

blood-donation-indian-women-lack-spirits
ಬೆಂಗಳೂರು, ಜೂನ್ 13: ಹೌದು, ಯಾಕೋ ಏನೋ ನಮ್ಮ ಭಾರತದ ಮಹಿಳೆಯರು ರಕ್ತದಾನ ಮಾಡುವುದು ಕಮ್ಮಿಯೇ ಎನ್ನುತ್ತಿದೆ ಸಮೀಕ್ಷೆಯೊಂದು. ಸ್ವಯಂಪ್ರೇರಿತರಾಗಿ ನಮ್ಮ ಹೆಂಗೆಳೆಯರು ರಕ್ತದಾನ ಮಾಡುವುದು ವಿರಳಾತಿವಿರಳ. ಆದರೆ ಇದಕ್ಕೆ ಕಾರಣಗಳು ಹೇರಳ. ಬಹುಮುಖ್ಯವಾಗಿ, ರಕ್ತದಾನದ ಬಗ್ಗೆ ಮಹಿಳೆಯರಲ್ಲಿರುವ ತಪ್ಪು ಕಲ್ಪನೆ! ಗಮನಿಸಿ, ವಿಶ್ವದ ಹತ್ತಾರು ರಾಷ್ಟ್ರಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ರಕ್ತದಾನಿಗಳು.

ಆರೋಗ್ಯ ಸಂಬಂಧಿ ವಿಷಗಳಲ್ಲಿ ಹೆಚ್ಚು ಕಾಳಜಿವಹಿಸುವ ಮಹಿಳೆಯರು ಇನ್ನಾದರೂ ರಕ್ತದಾನಕ್ಕೆ ಮನಸು ಮಾಡಲಿ. 2011ರ ಜೂನ್ ಸಂಖ್ಯಾಶಾಸ್ತ್ರದ ಪ್ರಕಾರ ಭಾರತದಲ್ಲಿ ಒಟ್ಟು ರಕ್ತ ಸಂಗ್ರಹವು ಪುರುಷರಿಂದ ಶೇ. 94ರಷ್ಟು ಬಂದರೆ ಮಹಿಳೆಯರು ನಗಣ್ಯ ಎನಿಸುವಷ್ಟು ಪ್ರಮಾಣದಲ್ಲಿ ಅಂದರೆ ಶೇ. 6ರಷ್ಟು ರಕ್ತ ಕೊಡುತ್ತಾರೆ. ಅದೇ ಗರಿಷ್ಠ ಪ್ರಮಾಣದಲ್ಲಿ ಜಿಂಬಾಬ್ವೆಯಲ್ಲಿನ ಶೇ. 55ರಷ್ಟು ಮಹಿಳೆಯರು ರಕ್ತ ಕೊಡುತ್ತಾರೆ. ಅಂದಹಾಗೆ ನಾಳೆ ಜೂನ್ 14 ವಿಶ್ವ ರಕ್ತದಾನಿ ದಿನ.

ಇನ್ನು ಭಾರತದ ಯುವಜನತೆ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯನ್ನು ಚಾಚೂತಪ್ಪದೆ ಪಾಲಿಸುವುದರೊಂದಿಗೆ ಇತರಿಗೆ ಮಾದರಿಯಾಗಿದ್ದಾರೆ. ಭಾರತದಲ್ಲಿ ರಕ್ತದಾನ ಮಾಡುವವರ ಪೈಕಿ ಶೇ. 53 ಮಂದಿ 18 ರಿಂದ 24 ವರ್ಷದ ಪ್ರಾಯದವರು. 25ರಿಂದ 44 ವರ್ಷದವರ ಪೈಕಿ ಶೇ. 24 ಮಂದಿ ರಕ್ತದಾನ ಮಾಡುತ್ತಾರೆ. 45 ರಿಂದ 64 ಆಯುದವರ ಪೈಕಿ ಶೇ. 19ರಷ್ಟು ಮಂದಿ ರಕ್ತ ಕೊಡ್ತಾರೆ.

ಮಾನವನ ಬಹುತೇಕ ಅಂಗಗಳಿಗೆ ಬದಲಿ ವ್ಯವಸ್ಥೆ ಬಂದಿದೆ. ಆದರೆ ಅದೊಂದಕ್ಕೆ ಮಾತ್ರ ಅಂದರೆ ರಕ್ತಕ್ಕೆ ಬದಲಿ ವ್ಯವಸ್ಥೆಯಿಲ್ಲ. ಅಂದರೆ ಕೃತಕ ರಕ್ತ ಇನ್ನೂ ಬಳಕೆಗೆ ಬಂದಿಲ್ಲ. ಹಾಗಾಗಿ, ರಕ್ತದಾನಕ್ಕೆ ಎಲ್ಲಿಲ್ಲದ ಮಹತ್ವ ಇದೆ. ಅದರಲ್ಲೂ ಸ್ವಯಂಪ್ರೇರಿತ ರಕ್ತದಾನಕ್ಕೆ ಸಮ ಯಾವುದೂ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+