• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಯ್ಡು ಆಸ್ತಿ 15,000 ಕೋಟಿ : ಯುರೋ ವಿಜೇತ

By Mahesh
|
Chandrababu Naidu
ಹೈದರಾಬಾದ್, ಜೂ.13: ಆಂಧ್ರಪ್ರದೇಶದ ಉಪ ಚುನಾವಣಾ ಸಮರದ ಮೇಲೆ ಟಿಡಿಪಿ ಅಭ್ಯರ್ಥಿಯೊಬ್ಬ ಪ್ರಕಟಿಸಿದ ಆಸ್ತಿ ಮೊತ್ತ ಕಂಡು ದೇಶವೇ ಬೆರಗಾಗಿತ್ತು. ನಂತರ ತೆಲುಗುದೇಶಂ ಪಕ್ಷದವರು ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಆಸ್ತಿ ಮೊತ್ತ ಪ್ರಕಟಿಸಿ ಇನ್ನಷ್ಟು ರೋಚಕತೆ ಹೆಚ್ಚಿಸಿದ್ದರು.

ಈಗ ತೆಲುಗುದೇಶಂ ಪಾರ್ಟಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರ ಅಕ್ರಮ ಸಕ್ರಮ ಆಸ್ತಿ ವಿವರವನ್ನು 1999ರ ಯುರೋ ಲಾಟರಿ ವಿಜೇತ(19.8 ಮಿಲಿಯನ್ ಡಾಲರ್) ಕೋಲ ಕೃಷ್ಣ ಮೋಹನ್ ಬಹಿರಂಗಪಡಿಸಿದ್ದಾರೆ.

ಜಗನ್ ಹಾಗೂ ನಾಯ್ಡು ಆಸ್ತಿ ಮೊತ್ತವನ್ನು ಒಟ್ಟುಗೂಡಿಸಿದರೆ ಇಡೀ ಆಂಧ್ರರಾಜ್ಯವನ್ನು ವೈಭೋಗದಲ್ಲಿ ಮುಳುಗಿಸಬಹುದು.

'ನನಗೆ ಯುರೋ ಲಾಟರಿ ಹೊಡೆದಿದೆ ಎಂದು ತಿಳಿದ ಮೇಲೆ ಚಂದ್ರಬಾಬು ನಾಯ್ಡು ನನ್ನನ್ನು ಒಂದು ದಿನ ಕರೆಸಿಕೊಂಡರು. ಕೆಲವು ಆರ್ಥಿಕ ವ್ಯವಹಾರಗಳಲ್ಲಿ ನನ್ನನು ಬಲವಂತವಾಗಿ ಭಾಗಿಯಾಗುವಂತೆ ಮಾಡಲಾಯಿತು. 2003ರಲ್ಲಿ ಚಂದ್ರಬಾಬು ನಾಯ್ಡು ಹಾಗೂ ಅವರ ಮಗ ಲೋಕೇಶ್ ನನ್ನ ಮೇಲೆ ಮೂರು ಬಾರಿ ಕೊಲೆ ಯತ್ನ ನಡೆಸಿದ್ದರು' ಎಂದು ಆರೋಪಿಸಿದ್ದಾರೆ.

'ಲೋಕೇಶ್ ನನ್ನಿಂದ 25 ಲಕ್ಷ ರೂ ಪಡೆದಿದ್ದ. ಅದರ ಜೊತೆಗೆ 35 ಲಕ್ಷ ರು ಒಟ್ಟುಗೂಡಿಸಿ ಯಾವುದೋ ಹುಡುಗಿ ಜೊತೆ ಎಲ್ಲಿಗೋ ಹೋಗಿ ಮಾಯವಾಗಿಬಿಟ್ಟ. ಚಂದ್ರಬಾಬು ನಾಯ್ಡು ಸಹವಾಸ ಮಾಡಿ ನನ್ನ ಹಣವೆಲ್ಲ ಪೋಲಾಯಿತು.

ಚಂದ್ರಬಾಬು ನಾಯ್ಡು ಆಸ್ತಿ ವಿವರ ಯಾವಾಗಲೂ ಗುಪ್ತವಾಗೇ ಉಳಿದಿದೆ. ಚುನಾವಣೆ ಸಂದರ್ಭದಲ್ಲಿ ಆಯೋಗಕ್ಕೆ ತಪ್ಪು ಮಾಹಿತಿ ನೀಡುತ್ತಾ ಬಂದಿದ್ದಾರೆ. ಆದರೆ, ಚಂದ್ರಬಾಬು ನಾಯ್ಡುಗೆ ವಿದೇಶಗಳಲ್ಲಿನ ಅನೇಕ ಬ್ಯಾಂಕ್ ಗಳಲ್ಲಿ ಅಧಿಕೃತ ಖಾತೆಗಳಿದೆ. ಬ್ಯಾಂಕ್ ಗಲ್ಲಿನ ಅವರ ಒಟ್ಟು ಮೊತ್ತವೇ 15,000 ಕೋಟಿ ರು ದಾಟುತ್ತದೆ' ಎಂದು ಕೃಷ್ಣ ಮೋಹನ್ ಹೇಳಿದ್ದಾರೆ.

* Deutsce Bank, ಸಿಂಗಪುರ(ಸಿ ನಾಯ್ಡು ನರ), ಖಾತೆ ಸಂಖ್ಯೆ: 0204049121100.
* ಬಾರ್ಕೆಲ್ಸ್ ಬ್ಯಾಂಕ್, ಸಿಂಗಪುರ ಹಾಗೂ ಕ್ರೆಡಿಟ್ ಸುಸ್ಸೆ ಬ್ಯಾಂಕ್ ಸ್ವಿಜರ್ಲೆಂಡ್ ನಲ್ಲೂ ನಾಯ್ಡು ಖಾತೆ ಹೊಂದಿದ್ದಾರೆ.

1999ರಲ್ಲಿ ಮೊದಲಿಗೆ ನನ್ನಿಂದ 5 ಕೋಟಿ ಪಾರ್ಟಿ ಫಂಡ್ ಕೊಡು ಎಂದು ನಾಯ್ಡು ಕೇಳಿ ಪಡೆದಿದ್ದರು. ಮೊದಲಿಗೆ 5 ಲಕ್ಷ ನಗದು ನೀಡಿದೆ. ನಂತರ 1 ಕೋಟಿ ನಗದು ಅವರ ಮನೆಗೆ ತಲುಪಿಸಿದೆ. ಉಳಿದ 4 ಕೋಟಿ ಹಣವನ್ನು ಲಂಡನ್ ನಿನ ಮಿಡ್ಲ್ಯಾಂಡ್ ಬ್ಯಾಂಕ್(Mid Lands Bank, London Account Number: 433846958001) ನಿಂದ ಚಂದ್ರಬಾಬು ನಾಯ್ಡು ಅವರ ಸಿಂಗಪುರದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಯಿತು.

ಚಂದ್ರಬಾಬು ನಾಯ್ಡು ವಿದೇಶಿ ಬ್ಯಾಂಕ್ ಖಾತೆ ವ್ಯವಹಾರದಲ್ಲಿ ತುಂಬಾ ನಿಪುಣ. ಯಾವಾಗ ಯಾವ ದೇಶದಲ್ಲಿ ಬ್ಯಾಂಕ್ ಖಾತೆಯನ್ನು ಓಪನ್ ಮಾಡಬೇಕು ಯಾವಾಗ ಮುಚ್ಚಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ ನಾಯ್ಡು ಅವರ ಅನೇಕ ಬ್ಯಾಂಕ್ ಖಾತೆಗಳು ಮುಚ್ಚಲ್ಪಟ್ಟಿದೆ. ಆದರೆ, ಕೆಲಕಾಲದ ನಂತರ ಮತ್ತೆ ಹೊಸ ಖಾತೆಗಳು ಆರಂಭವಾಗುತ್ತದೆ ಎಂದ ಕೃಷ್ಣಮೋಹನ್ ವಿವರಿಸಿದರು.

ಒಟ್ಟಿನಲ್ಲಿ ಆಂಧ್ರಪ್ರದೇಶದ ರಾಜಕೀಯ ನಾಯಕರಿಗೆ ದುಡ್ಡಿಗೇನೂ ಬರವಿಲ್ಲ. ಜಗನ್ ಮೋಹನ್ ರೆಡ್ಡಿ ಅಕ್ರಮ ಆಸ್ತಿ ಗಳಿಕೆ ಹಿಂದೆ ಬಿದ್ದು ಸಿಬಿಐ ತನಿಖೆಗೆ ಅನೇಕ ದಾಖಲೆ ಒದಗಿಸಿರುವ ತೆಲುಗುದೇಶಂ ಪಾರ್ಟಿ ಈಗ ಚಂದ್ರಬಾಬು ನಾಯ್ಡು ಅವರ ಅಕ್ರಮಗಳ ಲೆಕ್ಕ ಮುಚ್ಚುವುದು ಹೇಗೆ ಎಂಬ ಚಿಂತೆಯಲ್ಲಿದೆಯಂತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಚಂದ್ರಬಾಬು ನಾಯ್ಡು ಸುದ್ದಿಗಳುView All

English summary
Chandrababu has more than Rs 15,000 Cr in various international banks located abroad. Many of Naidu's international bank accounts were closed and the new ones were opened later alleges Euro lottery winner Kola Krishna Mohan.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more