ನಿತ್ಯಾನಂದನಿಗೆ 1 ದಿನ ಜೈಲು ವಾಸ : ಕೋರ್ಟ್

ತಮ್ಮ ಇಬ್ಬರು ಶಿಷ್ಯರು ಮತ್ತು ವಕೀಲರ ಜೊತೆ ನಿತ್ಯಾನಂದ ಹಾಜರಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಗುರುವಾರ ಮಧ್ಯಾಹ್ನ ನಿತ್ಯಾನಂದನ ಜಾಮೀನು ಅರ್ಜಿ ರಾಮನಗರ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ. ಪೊಲೀಸರು ಇದೀಗ ಅವರನ್ನು ಬಂಧಿಸಿ ರಾಮನಗರ ಜೈಲಿಗೆ ಕರೆದೊಯ್ಯುತ್ತಿದ್ದಾರೆ.
ರಾಜ್ಯ ಸರಕಾರದ ಆದೇಶದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಎಷ್ಟೇ ಹುಡುಕಿದ್ದರೂ ನಿತ್ಯಾನಂದ ಪತ್ತೆಯಾಗಿರಲಿಲ್ಲ. ಬಿಡದಿ ಧ್ಯಾನಪೀಠಂ ಆಶ್ರಮದಲ್ಲಿಯೂ ಸಿಕ್ಕಿರಲಿಲ್ಲ ಮತ್ತು ಮಧುರೈನ ಅಧೀನಂ ಮಠದಲ್ಲಿಯೂ ನಿತ್ಯಾನಂದ ಪತ್ತೆಯಾಗಿರಲಿಲ್ಲ. ನಿತ್ಯಾನಂದ ಎಲ್ಲೂ ಹೋಗಿಲ್ಲ, ರಾಮನಗರದ ಸುತ್ತಮುತ್ತ ಇರುವ ರೆಸಾರ್ಟಿನಲ್ಲಿ ಅಥವಾ ಆಶ್ರಮದಲ್ಲಿಯೇ ಎಲ್ಲೋ ಬಚ್ಚಿಟ್ಟುಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಬುಧವಾರ ನೀಡಿದ್ದ ಪತ್ರಿಕಾ ಹೇಳಿಕೆಯಲ್ಲಿ ಗುರುವಾರ ಆಶ್ರಮದಲ್ಲಿ ಪ್ರತ್ಯಕ್ಷವಾಗುವುದಾಗಿ ನಿತ್ಯಾನಂದ ಹೇಳಿದ್ದರು. ಆದರೆ, ಆಶ್ಚರ್ಯವೆನ್ನುವಂತೆ ಬುಧವಾರವೇ ನಿತ್ಯಾನಂದ ನ್ಯಾಯಾಧೀಶೆ ಕೋಮಲಾ ಅವರು ಎದುರು ಹಾಜರಾಗಿದ್ದಾರೆ. ಕೇರಳ ರಿಜಿಸ್ಟ್ರೇಷನ್ ಇರುವ ಕೆಎಲ್ 11, ಎಎ, 9669 ನಂಬರ್ ಇರುವ ಸ್ಕೋಡಾ ಕಾರಿನಲ್ಲಿ ನಿತ್ಯಾನಂದ ಕೋರ್ಟಿಗೆ ಬಂದರು. ಆಶ್ರಮದಲ್ಲಿ ಆದ ಗಲಾಟೆಗೆ ಸಂಬಂಧಿಸಿದಂತೆ ಹೂಡಲಾಗಿರುವ ಕೇಸಿಗೆ ಸಂಬಂಧಿಸಿದಂತೆ ನಿತ್ಯಾನಂದ ನ್ಯಾಯಾಲಯದೆದಿರು ಹಾಜರಾಗಿದ್ದಾರೆ.











Click it and Unblock the Notifications