• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಪಂಗಿ ಲಂಚ: ಹೈಕೋರ್ಟಿನಲ್ಲಿ ಮರಣೋತ್ತರ ಪರೀಕ್ಷೆ

By ಶಂಭೋ ಶಂಕರ
|
sampangi-bribery-conviction-dissection-in-high-court
ಬೆಂಗಳೂರು, ಜೂನ್ 6: ಮೊನ್ನೆ ಶನಿವಾರ ಕರ್ನಾಟಕದ ಅಷ್ಟೂ ಮಾಧ್ಯಮಗಳು 'ಬಿಜೆಪಿ ಶಾಸಕನೊಬ್ಬ ಲಂಚ ಸ್ವೀಕರಿಸುವುದು ಕೋರ್ಟಿನಲ್ಲಿ ಸಾಬೀತಾಗಿದ್ದು, ಆತನನ್ನು ಮೂರೂವರೆ ವರ್ಷ ಕಾಲ ಜೈಲಿಗಟ್ಟಲಾಗಿದೆ' ಎಂದು ಬೊಬ್ಬಿಟ್ಟವು. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂಧ್ರ ರಾವ್ ಅವರು ಆ ಮಹತ್ವದ ತೀರ್ಪನ್ನು ನೀಡಿದ್ದರು. ಆದರೆ ಪ್ರಕರಣಕ್ಕೆ ಕುತೂಹಲಕಾರಿ ತಿರುವು ನೀಡಿರುವ ರಾಜ್ಯ ಹೈಕೋರ್ಟು, ಲೋಕಾಯುಕ್ತ ಕೋರ್ಟಿನ ತೀರ್ಪನ್ನೇ ಅನೂರ್ಜಿತಗೊಳಿಸಿ ಮಧ್ಯಂತರ ತೀರ್ಪು ನೀಡಿದೆ. ಇದರಿಂದ ಒಬ್ಬ ಸಂಪಂಗಿ ಬಿಟ್ಟು ಉಳಿದೆಲ್ಲರೂ ಲೊಚಗುಟ್ಟಿದ್ದಾರೆ.

ಅದನ್ನೆಲ್ಲಾ ಪಕ್ಕಕ್ಕಿಟ್ಟು ಕೋರ್ಟುಗಳಲ್ಲಿನ ಕೆಲವು ಮೂಲವ್ಯಾದಿ ವಿಷಯಗಳನ್ನು ಕೆದಕೋಣ. ಅದಕ್ಕೂ ಮುನ್ನ ಒಂದು ವಿಷಯ ಸ್ಪಷ್ಟವಾಗಲಿ. ರೆಡ್ಡಿಯಿಂದ ಲಂಚ ತಿಂದು ಜಾಮೀನು ನೀಡಿದ್ದ ಜಡ್ಜ್ ಪಟ್ಟಾಭಿಯನ್ನು ಮನೆಗೆ ಕಳಿಸಲು ಹಿಂದೆಮುಂದೆ ನೋಡದ ಖಡಕ್ ಜಡ್ಜುಗಳು ಇನ್ನೂ ಇದ್ದಾರೆ. And ಅವರು ನಮ್ಮ ಕರ್ನಾಟಕದವರು ಎಂಬ ಹೆಮ್ಮೆ ನಮಗಿರಲಿ. ಆದರೆ ಇದೇ ಕರ್ನಾಟಕದ ಹೈಕೋರ್ಟು ಅಂಗಳಿಂದ ನಿನ್ನೆ ಹೊರಬಿದ್ದಿರುವ ತೀರ್ಪನ್ನು ನೋಡಿ... ಅಮಾಯಕ ಪ್ರಜೆ ಅಸಹಾಯಕತೆಯಿಂದ ಮೈಪರಿಚಿಕೊಳ್ಳುತ್ತಿದ್ದಾನೆ, ಅಷ್ಟೆ.

ವ್ಯವಸ್ಥೆ ಎಲ್ಲಿಗೆ ಬಂತು ನೋಡಿ ಎಂದು ಹಪಹಪಿಸಬೇಕೋ ಅಥವಾ ಹೊರಬಿದ್ದರುವ ತೀರ್ಪಿನ ಬಗ್ಗೆ ವಿಮರ್ಶೆ ಮಾಡುವ ಧಾರ್ಷ್ಯ ತೋರಬೇಕೋ ತಿಳಿಯದೆ ವಿಲವಿಲ ಅನ್ನುತ್ತಿದ್ದಾನೆ. ಈ ಸಂದರ್ಭದಲ್ಲಿ ಜೈಲುಶಿಕ್ಷೆಗೆ ಗುರಿಯಾಗಿಯೂ ಸ್ವತಂತ್ರಗೊಂಡ (ಇಂದು ಸಂಜೆಯ ವೇಳೆಗೆ) ಜನಪ್ರತಿನಿಧಿಯ ಅದೃಷ್ಟದ ಬಗ್ಗೆ ಮಾತನಾಡದೆ ಸ್ವಲ್ಪ ಹಿಂದಕ್ಕೆ ಹೋಗಿ ಮೂಲವ್ರಣವನ್ನು ಕೆದಕಿದಾಗ...

ಅಲ್ಲಾ ಸ್ವಾಮಿ, ಮಾಜಿ ಲೋಕಾಯುಕ್ತರೇ ಮತ್ತು ಲೋಕಾಯುಕ್ತ ಕೋರ್ಟಿನ ಹಾಲಿ ಜಡ್ಜ್ ಸಾಹೇಬರೇ ನಿಮಗೆ ಒಂಚೂರು ಕಾನೂನು ಜ್ಞಾನವಿಲ್ಲವಾ? ಅಮಾಯಕ ಜನರನ್ನು ಈ ಪಾಟಿ ಯಾಮಾರಿಸುವುದಾ ನೀವು? ಒಬ್ಬ ಜನಪ್ರತಿನಿಧಿಯನ್ನು ಜೈಲಿಗಟ್ಟುವ ಮೂಲಕ ಹೇಗೆ ನೀವು ನಾಡಿನ ಜನರನ್ನು ಯಾಮಾರಿಸಿದ್ದೀರಿ, ನೋಡಿ?

ನೀವುಗಳು ನೀಡಿದ ತೀರ್ಪನ್ನು ಕೇಳಿ ಹಾಲು ಕುಡಿದಷ್ಟು ಸಂತೋಷಪಟ್ಟಿವಿ. ಆದರೆ ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬುದನ್ನು ತಿಳಿಯಲು ಹೆಚ್ಚು ದಿನ ಬೇಕಾಗಲಿಲ್ಲ. ಕೇವಲ, ಯಸ್ ಕೇವಲ ಮೂರೇ ದಿನದಲ್ಲಿ ನಿಮ್ಮ ತೀರ್ಪಿನ ಹಕೀಕತ್ತು ಏನು ಎಂಬುದನ್ನು ನಮ್ಮ ಘನ ಹೈಕೋರ್ಟ್ ತಿಳಿಸಿಕೊಟ್ಟಿದೆ.

ಅಸಲಿಗೆ ಅದು (ಜನಪ್ರತಿನಿಧಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ) fit case ಅಲ್ವೇ ಅಲ್ಲ. ಸುಮ್ನೆ ಪಾಪ ನಮ್ಮ ಘನಂಧಾರಿ ಜನನಾಯಕನನ್ನು caseನಲ್ಲಿ fit ಮಾಡಿದ್ದಾರೆ ಅಷ್ಟೆ ಎಂದು high court order order ಎಂದಿದೆ.

ಅಲ್ಲ ಸ್ವಾಮಿ ಕೇಸಿನ ಸಾಧಕ-ಬಾಧಕಗಳು, ಸಾಧ್ಯಾಸಾಧ್ಯತೆಗಳ ಬಗ್ಗೆ ಮಾತನಾಡುವ ಮುನ್ನವೇ, ಮೂಲದಲ್ಲೆ ಅದನ್ನು ಚಿವುಟಿಹಾಕಿದೆಯಲ್ಲಾ ಮೇಲಿನ ಕೋರ್ಟು? ಈಗೇನು ಮಾಡ್ತೀರಿ. ನಾವು ನಿಮ್ಮ ಬಗ್ಗೆ ಎಷ್ಟೊಂದು ಆಶಾಭಾವ ಹೊಂದಿದ್ದಿವಿ. ಜನಪ್ರತಿನಿಧಿಗಳು ನಮ್ಮ ಕೈಬಿಟ್ಟು, ತಿನ್ನಬಾರದ್ದನೆಲ್ಲಾ ತಿನ್ನುತ್ತಿರುವಾಗ 'ಒಬ್ಬ ಮಾಜಿ ಲೋಕಾಯುಕ್ತ, ಒಬ್ಬ ಲೋಕಾಯುಕ್ತ ಕೋರ್ಟಿನ ಜಡ್ಜ್ ಸಾಹೇಬ ನಮ್ಮ ಕೈಹಿಡಿದಿದ್ದಾರಲ್ಲಾ, ಅಷ್ಟು ಸಾಕು. ನಮಗೂ ಭವಿಷ್ಯವಿದೆ' ಎಂದು ಅಮಾಯಕ ಪ್ರಜೆ ಐಶ್ವರ್ಯ ರೈನಂತೆ ಉಬ್ಬಿಹೋಗಿದ್ದ. ಆದರೆ ಹೈಕೋರ್ಟ್ ಸರಿಯಾಗಿಯೇ pin ಮಾಡಿದೆ ಬಿಡಿ.

ಇನ್ನು ಮೇಲೆ ನೀವು ನೀಡುವ ಯಾವುದೇ ತೀರ್ಪಿನ ಬಗ್ಗೆ ನಾವು ತಕ್ಷಣಕ್ಕೆ ವಿಶ್ವಾಸ ಹೊಂದುವುದಿಲ್ಲ ಬಿಡಿ. unles

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಶಂಭೋ ಶಂಕರ ಸುದ್ದಿಗಳುView All

English summary
The Special Lokayukta Court had pronounced the judgment in the case of BJP MLA of Kolar Gold Fields MLA Y Sampangi on Saturday. The Special Lokayukta Court uphelded the Sampangi bribe case. But it was quashed in the High Court.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more