• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿಯಲ್ಲಿ ವಾಜಪೇಯಿ ಹುಡುಕುತ್ತಿರುವ ಆರೆಸ್ಸೆಸ್

By Mahesh
|
RSS sees another Atal Bihari Vajpayee in Narendra Modi
ನವದೆಹಲಿ, ಜೂ 6: ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಲಾಗಿದೆ. ಸಮರ್ಥ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿ ಅವರ ನಡುವೆ ಸಾಮ್ಯತೆಯನ್ನು ಪರಾಮರ್ಶಿಸಲಾಗಿದ್ದು, ಮೋದಿಯಲ್ಲಿ ವಾಜಪೇಯಿ ಹುಡುಕುವ ಕಾರ್ಯದಲ್ಲಿ ಆರೆಸ್ಸೆಸ್ ನಿರತವಾಗಿದೆ.

ಸಂಘ್ ಪರಿವಾರ ಪ್ರಕಟಣೆಯಲ್ಲಿ ಮೋದಿಯನ್ನು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ಗೆಲ್ಲಿಸಬಲ್ಲ ಸಮರ್ಥ ಅಭ್ಯರ್ಥಿ ಎಂದು ಹೇಳಲಾಗಿದೆ.

90 ದಶಕದಲ್ಲಿ ವಾಜಪೇಯಿ ಕೈಗೊಂಡ ಕಾರ್ಯಗಳು ಹಾಗೂ ಇಂದಿನ ಕಾಲದಲ್ಲಿ ಮೋದಿಯ ಜನಪ್ರಿಯ ಕಾರ್ಯಕ್ರಮಗಳ ತುಲನೆ ಮಾಡಲಾಗಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲು ಆರೆಸ್ಸೆಸ್ ಹರ್ಷಪಡುತ್ತದೆ ಎಂದು ಪ್ರಕಟಿಸಲಾಗಿದೆ.
ಆರೆಸ್ಸೆಸ್ ನ ಹಿಂದಿ ವಾರ ಪತ್ರಿಕೆ ಪಾಂಚಜನ್ಯದಲ್ಲೂ ಮೋದಿಯನ್ನು ಹಾಡಿ ಹೊಗಳಲಾಗಿದೆ.

ಮೋದಿ ಬದಲಿಗೆ ಬಿಹಾರ್ ಸಿಎಂ ನಿತೀಶ್ ಅವರನ್ನು ಪ್ರಧಾನಿ ಹುದ್ದಿಗೆ ಸೂಚಿಸಲು ಎನ್ ಡಿಎಯ ಕೆಲ ಮಿತ್ರಪಕ್ಷಗಳು ಹಾಕಿಕೊಂಡ ಯೋಜನೆಗೆ ಕಲ್ಲು ಬಿದ್ದಿದೆ.

ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಎಲ್ ಕೆ ಅಡ್ವಾಣಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಹೆಸರು ಕೂಡಾ ಚರ್ಚೆಗೆ ಬಂದಿದೆ.

ಆದರೆ, ಸಂಘ ಪರಿವಾರ ಮಾತ್ರ ಸದ್ಯಕ್ಕೆ ಮೋದಿ ಪರವಾಗಿ ನಿಂತಿದೆ. ಅಟಲ್ ಬಿಹಾರಿ ವಾಜಪೇಯಿ ಅಧಿಕಾರದ ಸಮಯದಲ್ಲಿ ಇದ್ದ ಗೌರವವನ್ನು ಮತ್ತೆ ಪಕ್ಷಕ್ಕೆ ತಂದುಕೊಡಬಲ್ಲ ಸಾಮರ್ಥ್ಯ ಮೋದಿಗೆ ಮಾತ್ರ ಇದೆ ಎಂದು ಆರೆಸ್ಸೆಸ್ ಬಲವಾಗಿ ಪ್ರತಿಪಾದಿಸಿದೆ.

ಮೋದಿ ಅತ್ಯಂತ ಜನಪ್ರಿಯ ನಾಯಕ: ABP News-Nielsen ಸಮೀಕ್ಷೆಯ ಪ್ರಕಾರ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ತರದಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದರು. ಈ ಸುದ್ದಿಯನ್ನು ವಿಪಕ್ಷಗಳು ಅರಗಿಸಿಕೊಳ್ಳುವ ಮೊದಲೇ ಸಾಮಾಜಿಕ ಜಾಲ ತಾಣ ಟ್ವೀಟ್ಟರ್ ನಲ್ಲೂ ಮೋದಿ ಜನಪ್ರಿಯತೆ ಉತ್ತುಂಗಕ್ಕೇರಿದೆ.

ನರೇಂದ್ರ ಮೋದಿ ಪ್ರಧಾನಿಯಾಗಬೇಕು ಏಕೆ? ಎಂಬುದಕ್ಕೆ ಎಲ್ಲರೂ ಮೋದಿ ಅವರ ವೈವಿಧ್ಯಮಯ ವ್ಯಕ್ತಿತ್ವ, ಸರ್ವಾಂಗೀಣ ಅಭಿವೃದ್ಧಿ ಮಂತ್ರವೇ ಕಾರಣ ಎಂದಿದ್ದಾರೆ. ಗುಜರಾತಿನಲ್ಲಿ ಇಂಧನ, ಇ ಆಡಳಿತ, ಸೌರ ಶಕ್ತಿ, ಜಲ ಸಂರಕ್ಷಣೆ ಇವೆ ಮುಂತಾದ ಕ್ಷೇತ್ರಗಳಲ್ಲಿ ಮೋದಿ ಸರ್ಕಾರ ಕಂಡ ಪ್ರಗತಿ ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯುಎಸ್ ಎ ಕಾಂಗ್ರೆಸ್ಸಿಗರು ಮೋದಿಯನ್ನು 'King of Governance' ಹೊಗಳಿದ್ದರು. ವಿಕಿಲೀಕ್ಸ್ ಸಹ ಜನಾಭಿಪ್ರಾಯ ಮೋದಿ ಕಡೆ ಇದೆ ಎಂದು ಮಾಹಿತಿ ಹೊರ ಹಾಕಿತ್ತು.

ಟೈಮ್ಸ್ ಮ್ಯಾಗಜೀನ್ ನ ಮುಖಪುಟದಲ್ಲಿ ರಾರಾಜಿಸಿರುವ ಮೋದಿ ಮುಂದೊಮ್ಮೆ ಭಾರತದ ಮುಖಪುಟದಲ್ಲಿ ಪ್ರಕಾಶಮಾನವಾಗಿ ಬೆಳಗಲಿ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An article in the latest issue of Organiser (RSS' mouthpiece in English) hails Gujarat Chief Minister Narendra Modi and finds similarities between Modi and the former Prime Minister Atal Bihari Vajpayee.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more