ಮೊಬೈಲ್ ಗಾಗಿ ಜಗಳ ಸಾವಿನಲ್ಲಿ ಅಂತ್ಯ

Youth kills friend for Mobile phone
ಬೆಂಗಳೂರು, ಜೂ.6: ಇಬ್ಬರು ಗೆಳೆಯರ ನಡುವೆ ಮೊಬೈಲ್ ಫೋನ್ ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಷರೀಫ್ ನಗರ ನಿವಾಸಿ ಖಾದರ್ ಬಾಷಾ ಸಾವನ್ನಪ್ಪಿರುವ ದುರ್ದೈವಿ.

48 ವರ್ಷದ ಖಾದರ್ ಬಾಷಾ ಹಾಗೂ ಮಂಜು ಇಬ್ಬರು ಕೂಲಿ ಕೆಲಸಗಾರರಾಗಿದ್ದಾರೆ. ಬಂಬೂ ಬಜಾರ್ ನಲ್ಲಿ ಬಂಬೂಗಳನ್ನು ಲೋಡ್- ಅನ್ ಲೋಡ್ ಮಾಡುವುದು ಇವರ ನಿತ್ಯ ಕಾಯಕ.

ಮಂಗಳವಾರ ರಾತ್ರಿ 10.30 ರ ಸುಮಾರಿಗೆ ಖಾದರ್ ಬಾಷಾ ಮನೆ ಹತ್ತಿರ 30 ವರ್ಷದ ಮಂಜು ಬಂದಿದ್ದಾನೆ. ಮೃತ್ಯು ರೂಪದ ಗೆಳೆಯನನ್ನು ಬರಮಾಡಿಕೊಂಡ ಖಾದರ್, ಆತ್ಮೀಯವಾಗಿ ಮಾತಾನಾಡಿಸಿದ್ದಾನೆ.

ಆದರೆ, ಮಂಜು ಯಾಕೋ ಅಗತ್ಯಕ್ಕಿಂತ ಹೆಚ್ಚು ಮೌನವಾಗಿರುವುದು ಖಾದರ್ ಗೆ ಅನುಮಾನ ಹುಟ್ಟಿಸಿದೆ. ಈ ಸಂದರ್ಭದಲ್ಲಿ ಖಾದರ್ ಮೊಬೈಲ್ ಫೋನ್ ಅನ್ನು ಮಂಜು ಕಿತ್ತುಕೊಂಡಿದ್ದಾನೆ.

ಮೊಬೈಲ್ ವಾಪಸ್ ಕೊಡುವಂತೆ ಖಾದರ್ ಕೇಳಿದ್ದಾನೆ. ಆದರೆ, ಮಂಜು ಸತಾಯಿಸಿದ್ದಾನೆ. ಈ ಸಮಯದಲ್ಲಿ ಮಾತಿಗೆ ಮಾತು ಬೆಳೆದು ಜಗಳ ಜೋರಾಗಿದೆ. ಖಾದರ್ ತನ್ನ ಬಳಿ ಇದ್ದ ಚಾಕುವನ್ನು ತಂದು ಇರಿಯಲು ಯತ್ನಿಸಿದ್ದಾನೆ. ಆದರೆ, ಮಂಜು ಅದೇ ಚಾಕುವಿನಿಂದ ಖಾದರ್ ಹೊಟ್ಟೆಗೆ ಬಲವಾಗಿ ತಿವಿದು ಪರಾರಿಯಾಗಿದ್ದಾನೆ,

ರಕ್ತದ ಮಡುವಿನಲ್ಲಿ ಮಲಗಿದ್ದ ಖಾದರ್ ನನ್ನು ಕೆಸಿ ಜನರಲ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಖಾದರ್ ಶವವನ್ನು ಎಂಎಸ್ ರಾಮಯ್ಯ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.

ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ವಿವರಗಳು ತಿಳಿಯಲಿದೆ. ಆರೋಪಿ ಮಂಜು ಪರಾರಿಯಾಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಠಾಣೆ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+