ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಮುಂಗಾರುಮಳೆಯ ಹನಿಗಳ ಲೀಲೆ ಆರಂಭ

By Prasad
|
Google Oneindia Kannada News

Monsoon arrives to Kerala and Karnataka
ಬೆಂಗಳೂರು, ಜೂ. 5 : ಪ್ರಸಕ್ತ ವರ್ಷದ ಮುಂಗಾರಿನ ಮಳೆಯ ಹನಿಗಳ ಲೀಲೆ ಆರಂಭವಾಗಿದೆ. ಕೇರಳದಲ್ಲಿ ಜೂನ್ 5ರಂದು ಮಂಗಳವಾರ ಮುಂಗಾರಿನ ಮಳೆ ಆರಂಭವಾಗಿದ್ದು, ಕರ್ನಾಟಕದ ಕರಾವಳಿಗುಂಟ ಮಳೆ ತನ್ನ ಆರ್ಭಟವನ್ನು ಆರಂಭಿಸಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ 11 ಸೆಂ.ಮೀ. ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಗರಿಷ್ಠ 10 ಸೆಂ.ಮೀ. ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮಂಗಳವಾರ 'ವಿಶ್ವ ಪರಿಸರ ದಿನಾಚರಣೆ' ದಿನ ಆರಂಭವಾಗಿರುವ ಮುಂಗಾರಿನ ವರ್ಷಧಾರೆ ಇಡೀ ಕೇರಳವನ್ನು ಆವರಿಸಿಕೊಂಡಿದ್ದು, ಕರ್ನಾಟಕದ ಕರಾವಳಿ, ಗೋವಾ, ತಮಿಳುನಾಡಿನ ದಕ್ಷಿಣ ಪ್ರಾಂತ್ಯ, ಬಂಗಾಳ ಕೊಲ್ಲಿಯ ಪೂರ್ವ ಭಾಗ, ಮಾಲ್ಡೀವ್ಸ್ ದ್ವೀಪಗಳಲ್ಲಿ ಸುರಿಯುತ್ತಿದ್ದು, ಮುಂಗಾರು ಮಳೆ ಕರುನಾಡಿನ ರೈತ ಬಾಂಧವರಲ್ಲಿ ಹರ್ಷದ ಹೊನಲು ಹರಿಸಿದೆ. ಈ ವರ್ಷ ಮುಂಗಾರು ಜೂನ್ 1ರಂದು ಆಗಮಿಸಬೇಕಿತ್ತು. ಮುಂಗಾರು ಈ ಬಾರಿ ನಾಲ್ಕು ದಿನ ತಡವಾಗಿ ಬಂದರೂ, ಮಳೆ ಕೊರತೆ ಕಾಣುವ ಲಕ್ಷಣಗಳಿಲ್ಲ ಎಂದು ಆಶಾವಾದವನ್ನು ಇಲಾಖೆಯ ತಜ್ಞರು ವ್ಯಕ್ತಪಡಿಸಿದ್ದಾರೆ.

ಹವಾಮಾನ ಇಲಾಖೆ ಎಚ್ಚರಿಕೆ : ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ, ಪಶ್ಚಿಮ ಘಟ್ಟಗಳಲ್ಲಿ ಮತ್ತು ನಾಡಿನ ಕೆಲ ಒಳ ಪ್ರದೇಶಗಳಲ್ಲಿ ಸಾಧಾರಣ ಮತ್ತು ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆಯ ಇನ್-ಚಾರ್ಜ್ ನಿರ್ದೇಶಕ ಬಿ. ಪುಟ್ಟಣ್ಣ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾಜ್ಯದ ಕರಾವಳಿಗುಂಟ ಮುಂದಿನ 24 ಗಂಟೆಗಳಲ್ಲಿ 50ರಿಂದ 60 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯುವ ಸಾಹಸ ಮಾಡಬಾರದು ಪುಟ್ಟಣ್ಣ ಎಚ್ಚರಿಕೆ ನೀಡಿದ್ದಾರೆ.

ಮಳೆಯ ಪ್ರಮಾಣ : ಪಣಂಬೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಕಾರವಾರದಲ್ಲಿ 6 ಸೆಂ.ಮೀ., ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬೆಳ್ತಂಗಡಿ, ಉತ್ತರ ಕನ್ನಡ ಜಿಲ್ಲೆಯ ನಿಲಕುಂದ್, ಬಾಗಲಕೋಟೆ ಜಿಲ್ಲೆಯ ಕಲಡಗಿಯಲ್ಲಿ 5 ಸೆಂ.ಮೀ., ಉಡುಪಿ ಜಿಲ್ಲೆಯ ಕೋಟ, ಕಾರ್ಕಳ, ಕೊಲ್ಲೂರು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಮಂಕಿ, ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 4 ಸೆಂ.ಮೀ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಬಂಟ್ವಾಳ, ಮಣಿ, ಧರ್ಮಸ್ಥಳದಲ್ಲಿ 3 ಸೆಂ.ಮೀ. ಮಳೆಯಾಗಿದೆ.

ಗರಿಷ್ಠ ತಾಪಮಾನ : ಬಾಗಲಕೋಟೆ, ಗದಗ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ, ಬಿಜಾಪುರ, ಧಾರವಾಡ, ಗುಲಬರ್ಗ, ಯಾದಗಿರಿ, ಹಾಸನ, ಮೈಸೂರು, ಕೋಲಾರ ಜಿಲ್ಲೆಗಳಲ್ಲಿಯೂ ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆ ಬಿದ್ದಿದೆ. ಮುಂದಿನ 48 ಗಂಟೆಗಳಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದರೆ, ಬೀದರ ಜಿಲ್ಲೆ ಮಾತ್ರ ನಿಗಿನಿಗಿ ಕುದಿಯುತ್ತಿದೆ. ರಾಜ್ಯದ ಗರಿಷ್ಠ ತಾಪಮಾನ ಬೀದರದಲ್ಲಿ 41.1 ಡಿಗ್ರಿ ಸೆಲ್ಶಿಯಸ್‌ನಷ್ಟು ದಾಖಲಾಗಿದೆ.

English summary
Karnataka Weather report : South-west Monsoon has arrived to Kerala and many parts of Karnatka. It is raining heavily in many parts of coastal and interior Karnataka, including Western ghats. Bangalore Meteorological department director B. Puttanna has warned that coastal Karnataka can expect heavy rain in next 48 hrs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X