ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ 25ರಷ್ಟು ತೆರಿಗೆ ಇಳಿಕೆಗೆ ಪ್ರಣಬ್ ಕರೆ

By Mahesh
|
Google Oneindia Kannada News

Pranab Mukherjee
ನವದೆಹಲಿ, ಜೂ.5: ಪೆಟ್ರೋಲ್ ಹಾಗೂ ಇತರೆ ಇಂಧನ ಬೆಲೆಯನ್ನು ಇಳಿಸಲು ಯುಪಿಎ ಸರ್ಕಾರ ಇಂದು ಮುಂದು ನೋಡುತ್ತಿದೆ. ಈ ನಡುವೆ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ತಗ್ಗಿಸುವ ಉಪಾಯವನ್ನು ಕೇಂದ್ರ ಆರ್ಥಿಕ ಸಚಿವ ಪ್ರಣಬ್ ಮುಖರ್ಜಿ ನೀಡಿದ್ದಾರೆ.

ಕೇರಳ, ಉತ್ತರಾಖಂಡ್, ಡೆಲ್ಲಿ, ಗೋವಾ ಮಾದರಿಯನ್ನು ಎಲ್ಲಾ ರಾಜ್ಯಗಳು ಅನುಸರಿಸುವಂತೆ ಪ್ರಣಬ್ ಕರೆ ನೀಡಿದ್ದಾರೆ.

ಶೇ 25 ರಷ್ಟು ತೆರಿಗೆ ಇಳಿಸುವ ಅಧಿಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೂ ಇದೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಬೆಲೆ ಇಳಿಕೆ ಸಾಧ್ಯ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಕಂಡ ಪರಿಣಾಮ, ಭಾರತದಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಮತ್ತೊಮ್ಮೆ ಯುಪಿಎ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಸಮರ್ಥಿಸಿಕೊಂಡರು.

ವ್ಯಾಟ್ ಇಳಿಕೆಯಿಂದ ಸಾಧ್ಯ: ಮಾರಾಟ ತೆರಿಗೆ ರೂಪದಲ್ಲಿ ಶೇ 25 ರಷ್ಟು ವ್ಯಾಟ್ ಹಾಗೂ ಶೇ 5 ರಷ್ಟು ಪ್ರವೇಶ ತೆರಿಗೆ ಹೊರೆಯನ್ನು ಗ್ರಾಹಕರ ಮೇಲೆ ಹೇರುವುದನ್ನು ತಪ್ಪಿಸುವ ಎಲ್ಲಾ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರುತ್ತದೆ.

ವ್ಯಾಟ್ ಹಿಂಪಡೆದರೆ ಬೆಲೆ ಪೆಟ್ರೋಲ್ ಬೆಲೆ ಅಂದಾಜು 58ರು/ಲೀ ಗೆ ಇಳಿದುಬಿಡುತ್ತದೆ ಎಂದು ಫೆಡೆರೇಷನ್ ಆಫ್ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಕೂಡಾ ಹೇಳುತ್ತದೆ.

ಗೋವಾ ಸರ್ಕಾರ ಪ್ರತಿ ಲೀಟರ್ ಗೆ 11 ರು ಇಳಿಸಿ, ಹಣದುಬ್ಬರದ ಹೊಡೆತದಿಂದ ತನ್ನ ಪ್ರಜೆಗಳನ್ನು ರಕ್ಷಿಸಿತ್ತು. ಕರ್ನಾಟಕ ಕೂಡಾ ಗೋವಾ ಮಾದರಿಯಂತೆ 10-15 ರು ಕಡಿಮೆ ಮಾಡಲು ಆಗದಿದ್ದರೆ, ಕೇರಳ, ಡೆಲ್ಲಿಯಂತೆ ಕೆಲವು ತೆರಿಗೆಗಳನ್ನು ಹಿಂಪಡೆದು 5 ರಿಂದ 10 ರು ತನಕ ಬೆಲೆ ಇಳಿಸಬಹುದು.

English summary
Finance Minister Pranab Mukherjee today made out a strong case for a 25 per reduction of taxes levied by states on petrol to bring down its price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X