• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒನ್ ಇಂಡಿಯಾ ಪರಿಸರ ಕಾಳಜಿಗೆ ಎಂಎಲ್ಎ ಖುಷಿ

By Mahesh
|

ಬೆಂಗಳೂರು, ಜೂ.5: ಪರಿಸರ ಕಾಳಜಿ, ಸಂರಕ್ಷಣೆಗಾಗಿ 'Go Green' ಅಭಿಯಾನದ ಅಡಿಯಲ್ಲಿ ಜನಪ್ರಿಯ ವೆಬ್ ತಾಣ ಒನ್ ಇಂಡಿಯಾ ತಂಡ ಆಯೋಜಿಸಿದ್ದ ಕಾಲ್ನಡಿಗೆ (walk-a-thon) ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಶಾಸಕ ಬಿಎನ್ ವಿಜಯ್ ಕುಮಾರ್ ಅವರು ಮುಕ್ತ ಕಂಠದಿಂದ ಹೊಗಳಿದರು.

ವಿಶ್ವ ಪರಿಸರ ದಿನಾಚರಣೆಯನ್ನು ಜೂ.5, 2012ರಂದು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಕಾಲ್ನಡಿಗೆ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಲಾಯಿತು.

ಕಾಲ್ನಡಿಗೆ ಜಾಥಾ: ಒನ್ ಇಂಡಿಯಾ (ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜಿಸ್ ಪ್ರೈ ಲಿ) ಬೆಂಗಳೂರಿನ ಜಯನಗರದಲ್ಲಿರುವ ಕಚೇರಿಯಿಂದ ಬೆಳಗ್ಗೆ 9 ಗಂಟೆಗೆ ಆರಂಭವಾದ ಕಾಲ್ನಡಿಗೆ ಜಾಥಾ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ(ಮಾಧವನ್ ಪಾರ್ಕ್), ಕಾಸ್ಮೋಪಾಲಿಟನ್ ಕ್ಲಬ್ ರಸ್ತೆ, ಜಯನಗರ ನಾಲ್ಕನೇ ಬ್ಲಾಕ್, ಮಯ್ಯಾಸ್ ಹೋಟೆಲ್ ದಾಟಿ ಬಾವಿ ಪಾರ್ಕ್ ಬಳಿ ಕೊನೆಗೊಂಡಿತು.

ಪಟ್ಟಾಭಿರಾಮನಗರ ವಾರ್ಡ್ -168ನ ಕಾರ್ಪೋರೇಟರ್ ಸಿಕೆ ರಾಮಮೂರ್ತಿ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ ಕಪ್ಪಣ್ಣ, ಒನ್ ಇಂಡಿಯಾ ಸಿಇಒ ಶ್ರೀರಾಮ್ ಹೆಬ್ಬಾರ್, ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜಿಸ್ ಪ್ರೈ ಲಿ ಸಂಸ್ಥೆ ಸಹ ಸ್ಥಾಪಕ, ಮುಖ್ಯಸ್ಥ ಬಿ.ಜಿ. ಮಹೇಶ್ ಹಾಗೂ ಶಾಸಕ ವಿಜಯ್ ಕುಮಾರ್ ಅವರು ಒನ್ ಇಂಡಿಯಾ ಹಸಿರು ಅಭಿಯಾನದಲ್ಲಿ ಪಾಲ್ಗೊಂಡು, ಪಾರ್ಕ್ ನಲ್ಲಿ ಅಲ್ಲಲ್ಲಿ ಸಸಿ ನೆಡವುದರ ಮೂಲಕ ಮುಂದಿನ ಪೀಳಿಗೆಗೆ ಹಸಿರು ಜಗತ್ತನ್ನು ಉಳಿಸುವ ಸಂಕಲ್ಪ ಕೈಗೊಂಡರು.

ವಿಜಯ್ ಕುಮಾರ್: ಪರಿಸರ ಸಂರಕ್ಷಣೆ ಕಾರ್ಯಕ್ರಮ ಎಂದರೆ 10 ರಿಂದ 20 ಜನ ಬಂದರೆ ಹೆಚ್ಚು. ಆದರೆ, ನಿಮ್ಮ ಕಂಪನಿಯ ಕಾಳಜಿ ಕಂಡು ಖುಷಿಯಾಗುತ್ತದೆ. ಮುಖ್ಯವಾಗಿ ಜಯನಗರದಲ್ಲಿ ಮೂರು ಪ್ರಮುಖ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

* ಮಳೆ ನೀರು ಕೊಯ್ಲು ಅಳವಡಿಕೆ

* ಸೈಕಲ್ ಟ್ರ್ಯಾಕ್, ಬಳಕೆ ಬಗ್ಗೆ ಪ್ರಚಾರ

* ಪ್ಲಾಸ್ಟಿಕ್ ನಿರ್ಮೂಲನೆ

ಮುಂಗಾರಿನಲ್ಲಿ ಸಸಿ ನೆಡುವ ಯೋಜನೆ : ಸಸಿ ನೆಡುವ ಜಾಗ ತೋರಿಸಿದರೆ ನಾವು ಉಚಿತವಾಗಿ ಬಂದು ಸಸಿ ನೆಟ್ಟು ಸೂಕ್ತ ಮಾರ್ಗದರ್ಶನ ನೀಡುತ್ತೇವೆ. ಬೆಂಗಳೂರು ಸೈಕಲ್ ಪಥ ಯೋಜನೆಯ ಮೊದಲ ಹಂತವು ಶೀಘ್ರದಲ್ಲಿ ಜಯನಗರದಿಂದಲೇ ಆರಂಭವಾಗಲಿದೆ ಇದಕ್ಕೆ ಒನ್ ಇಂಡಿಯಾ ಸಂಸ್ಥೆ ಸಹಕಾರ ಬೇಕು ಎಂದು ಶಾಸಕ ವಿಜಯ್ ಕುಮಾರ್ ಕೇಳಿಕೊಂಡರು.

ಶ್ರೀನಿವಾಸ ಕಪ್ಪಣ್ಣ: ಸಸಿ ನೆಟ್ಟು ಮರೆತುಬಿಡಬಾರದು. ಗಿಡ ಮರ ಬೆಳಸುವುದು ನಮ್ಮ ಸಂಸ್ಕೃತಿಯನ್ನು ಉಳಿಸಿದಂತೆ. ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಂತೆ ಪರಿಸರ ಸಂರಕ್ಷಣೆಯೂ ಮುಖ್ಯ. ಮರಗಳನ್ನು ಬೆಳೆಸುವುದರ ಜೊತೆಗೆ ನಮ್ಮ ಸಂಸ್ಕೃತಿ ಬೆಳೆಯುತ್ತದೆ ಎಂದರು.

ಒನ್ ಇಂಡಿಯಾ.ಇನ್ ಬಗ್ಗೆ: ಒನ್ ಇಂಡಿಯಾ ಭಾರತದ ಆನ್ ಲೈನ್ ವೆಬ್ ಪೋರ್ಟಲ್ ಆಗಿದೆ. ನೆಟ್ ಕೋರ್ ಇಂಡಿಯಾ ಪ್ರೈ.ಲಿ ಸ್ವಾಮ್ಯದ ಸಂಸ್ಥೆ ಒಡೆತನದಲ್ಲಿರುವ ಈ ವೆಬ್ ಪೋರ್ಟಲ್ ಸುದ್ದಿ ವಿಶ್ಲೇಷಣೆ, ಕ್ರೀಡೆ, ಮನರಂಜನೆ, ವಿಡಿಯೋ ಹಾಗೂ ವರ್ಗೀಕೃತ ಜಾಹೀರಾತು ನೀಡುತ್ತದೆ.

Comscore ಜೂನ್ 2011ರ ವರದಿ ಪ್ರಕಾರ ಭಾರತದ ಸುದ್ದಿ ವಿಭಾಗದಲ್ಲಿ ಒನ್ ಇಂಡಿಯಾ 4ನೇ ಸ್ಥಾನದಲ್ಲಿದೆ. ಎನ್ನಾರೈಗಳಿಗೆ ಒನ್ ಇಂಡಿಯಾ ಎರಡನೇ ಅತಿ ಹೆಚ್ಚು ಇಷ್ಟವಾಗುವ ವೆಬ್ ತಾಣ ಎನಿಸಿದೆ. ಪ್ರತಿದಿನ 500ಕ್ಕೂ ಹೆಚ್ಚು ಲೇಖನಗಳು 70 ಮಿಲಿಯನ್ ಜನರನ್ನು ಜಾಗತಿಕವಾಗಿ ಪ್ರತಿ ತಿಂಗಳು ತಲುಪುವ ಜನಪ್ರಿಯ ತಾಣವಾಗಿದೆ.

ಒನ್ ಇಂಡಿಯಾ ಭಾರತದ ಹಲವು ಭಾಷೆಗಳಲ್ಲಿ ವೆಬ್ ತಾಣಗಳನ್ನು ಹೊಂದಿದೆ. ಅವುಗಳಲ್ಲಿ ಒನ್ ಇಂಡಿಯಾ ಹಿಂದಿ, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ, ಒನ್ ಇಂಡಿಯಾ ತಮಿಳು,ಒನ್ ಇಂಡಿಯಾ ಕನ್ನಡ,ಒನ್ ಇಂಡಿಯಾ ತೆಲುಗು,ಒನ್ ಇಂಡಿಯಾ ಮಲೆಯಾಳಂ,

ಒನ್ ಇಂಡಿಯಾ.ಇನ್ ಸಮೂಹದಲ್ಲಿ ಆನ್ ಲೈನ್ ಜಾಹೀರಾತು ಪೋರ್ಟಲ್ ಕ್ಲಿಕ್.ಇನ್ ಪ್ರಮುಖವಾಗಿದೆ. ಸಮುದಾಯ ಆಧಾರಿತ ಕ್ಲಿಕ್.ಇನ್ ವೆಬ್ ತಾಣದಲ್ಲಿ ಆನ್ ಲೈನ್ ವರ್ಗೀಕೃತ ಜಾಹೀರಾತುಗಳು, ಉದ್ಯೋಗ, ಮಾರಾಟ, ಸೇವೆಗಳು, ಸ್ಥಳೀಯ ಸಮುದಾಯ, ಕಾರ್ಯಕ್ರಮಗಳ ವಿವರಗಳು ಲಭ್ಯವಿರುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Popular online portal, OneIndia has taken upon itself to take up the cause and ‘lead by example’ in a ‘Go Green’ initiative by organizing a walk-a-thon. What better way to take up this endeavour than on June 5, 2012 that is regarded as World Environment Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more