Get Updates
Get notified of breaking news, exclusive insights, and must-see stories!

ಪಬ್ಬು ಬಾರಿಗೂ ಬಂತು ಸಿಸಿಟಿವಿ: ಬೀರಬಲ್ಲರಿಗೆ ಕಂಟಕ

ಬೆಂಗಳೂರು, ಜೂನ್ 4: ಮದ್ಯದ ಬಾರ್ ಗಳು, ವೈನ್ ಶಾಪುಗಳಲ್ಲಿ closed circuit cameraಗಳನ್ನು (CCTV) ಅಳವಡಿಸುವ ಸಂಬಂಧ ಬೆಂಗಳೂರು ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ರಾಜಧಾನಿಯಲ್ಲಿ ಪ್ರತಿಯೊಂದು ಪಬ್ಬು, ಬಾರುಗಳ ಮಾಲೀಕರು ತಕ್ಷಣದಿಂದಲೇ ಈ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಕಟ್ಟಾಜ್ಞೆ ಹೊರಡಿಸಿದ್ದಾರೆ.

ಬಹುತೇಕ ಅಪರಾಧಗಳು ಹುಟ್ಟುವುದೇ ಈ ತಾಣಗಳಲ್ಲಿ ಎಂಬುದು ಪೊಲೀಸರ ಅಚಲ ನಂಬಿಕೆ. ಪಬ್ಬುಗಳ ಮಬ್ಬಗತ್ತಲು ಸಮಾಜಘಾತುಕ ಶಕ್ತಿಗಳಿಗೆ ಆಶ್ರಯತಾಣ. ಆದ್ದರಿಂದ ನಗರದಲ್ಲಿ ಅಪರಾದಗಳು, ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಈ ಕಟ್ಟಾಜ್ಞೆ ಹೊರಡಿಸಿದ್ದಾರೆ.

bangalore-pubs-bars-under-cctv-lens
ರೆಸ್ಟೋರೆಂಟುಗಳು, ಲಕ್ಷುರಿ ಹೊಟೇಲುಗಳು, ಚಿನ್ನಾಭರಣ ಮಳಿಗೆಗಳು, ಬಿಗ ಬಜಾರುಗಳು ಮುಂತಾದ ಪ್ರಮುಖ ಸ್ಥಳಗಳು ಈಗಾಗಲೇ ಆಯಕಟ್ಟಿನ ಸ್ಥಳಗಳಲ್ಲಿ ಇಂತಹ ಕ್ಯಾಮರಾಗಳನ್ನು ಅಳವಡಿಸಿಕೊಂಡು ಅಪರಾಧಗಳನ್ನು ತಡೆಗಟ್ಟುವಲ್ಲಿ ಸಾಕಷ್ಟು ಯಶಸ್ಸು ಕಂಡಿವೆ. ಈಗ ಪೊಲೀಸರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಮದ್ಯದ ತಾಣಗಳಲ್ಲೂ CCTV ನೇತುಹಾಕಿ ಎಂದು ತಾಕೀತು ಮಾಡಿದ್ದಾರೆ.

ಪೊಲೀಸರ ಆಪದ್ಬಾಂಧವ: ಎಲ್ಲ ಪಬ್ಬು, ಬಾರುಗಳಲ್ಲಿ ಈ CCTV ನೇತುಹಾಕುವ ಜವಾಬ್ದಾರಿಯನ್ನು ಆಯಾ DCPಗಳಿಗೆ ವಹಿಸಲಾಗಿದೆ. ಉಪ್ಪಾರಪೇಟೆ, ವಿಲ್ಸನ್ ಗಾರ್ಡನ್, ಚಾಮರಾಜ ಪೇಟೆ, ಆಡುಗೋಡಿ ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ಈ CCTVಗಳು ಕಾಣಿಸಿಕೊಳ್ಳಲಿವೆ.

ಆದರೆ ಇದರ ಮೇಲೆ ಸೌಮ್ಯ (?) ಬೀರಬಲ್ಲರು ಕೆಂಗಣ್ಣು ಬೀರುತ್ತಿದ್ದಾರೆ. ಏನೋ ನಮ್ಮ ಪಾಡಿಗೆ ನಾವು ಹೋಗಿ ನಾಲ್ಕು ಹನಿ ದ್ರವ ಹಾಕಿಕೊಂಡು ಬರುತ್ತಿದ್ದೆವು. ಈಗ ಅದು ಕ್ಯಾಮರಾಗಳಲ್ಲಿ ದಾಖಲಾಗುತ್ತದೆ ಎಂಬುದು ಆತಂಕದ ವಿಷಯ. ನಮ್ಮ ಮಾನಮರ್ಯಾದೆ ಪ್ರಶ್ನೆ ಎಂದು ಹಕ್ಕು ಚಲಾಯಿಸಿದ್ದಾರೆ.

ಅಪರಾಧಿಗಳನ್ನು ಪತ್ತೆಹಚ್ಚಲು ಇದು ಪರಿಣಾಮಕಾರಿ ವ್ಯವಸ್ಥೆ ಎಂಬುದು ಪೊಲೀಸ್ ಇಲಾಖೆಯ ಅಪಾರ ನಂಬಿಕೆ. ಪೊಲೀಸರ ಈ ನಂಬಿಕೆಗೆ CCTVಗಳು ಚ್ಯುತಿ ತಂದಿಲ್ಲ ಎನ್ನಬಹುದು. ಏಕೆಂದರೆ ಇತ್ತೀಚಿಗೆ ಅನೇಕ ಪ್ರಕರಣಗಳನ್ನು ಪೊಲೀಸರು ಬೇಧಿಸಿರುವುದೇ CCTV ಎಂಬ ಈ ಬ್ರಹ್ಮಾಸ್ತ್ರಗಳಿಂದ. ಅಷ್ಟರಮಟ್ಟಿಗೆ ಪೊಲೀಸರ ಕೆಲಸವೂ ಸಲೀಸಾಗಿದೆ. ಆದ್ದರಿಂದಲೇ ಪೊಲೀಸರಿಗೆ ಇವು ಆಪದ್ಬಾಂಧವ ಮತ್ತು ಆಪ್ಯಾಯಮಾನ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+