• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊದಲು ನಿರ್ಮಲ್ ಬಾಬಾನನ್ನು ಬಂಧಿಸಿ: ಕೋರ್ಟ್

By Srinath
|
ಭೋಪಾಲ್, ಜೂನ್ 3: ಈಗಾಗಲೇ ಬಂಧನಕ್ಕೊಳಗಾಗುವುದನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡ ಟಿವಿ ಜ್ಯೋತಿಷಿ ನಿರ್ಮಲ್ ಬಾಬಾಗೆ ಮತ್ತೆ ಕಂಟಕ ಎದುರಾಗಿದೆ. ಇಲ್ಲಿನ ಮ್ಯಾಜಿಸ್ಟ್ರೇಟ್ ಜಡ್ಜ್ RK Devaliya ಹಿಗ್ಗಾಮುಗ್ಗ ನಿರ್ಮಲ್ ಬಾಬಾನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಮೊದಲು ಆ ನಿರ್ಮಲ್ ಬಾಬಾನನ್ನು ಒಳಗ್ಹಾಕಿ, ಆಮೇಲೆ ಆತನ ಚಾನೆಲ್ಲುಗಳ ಪ್ರಸಾರವನ್ನು ಸ್ಥಗಿತಗೊಳಿಸಿ' ಎಂದು ಮಧ್ಯಪ್ರದೇಶದ ಬೀನಾದಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಖಡಕ್ಕಾಗಿ ಹೇಳಿದೆ. 'ತಕ್ಷಣ ಬಾಬಾ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿ' ಎಂದು ಕೋರ್ಟ್ ಬೀನಾ ಪೊಲೀಸರಿಗೆ ಆದೇಶ ಹೊರಡಿಸಿದೆ. ಸುರೇಂದ್ರ ವಿಶ್ವಕರ್ಮ ಎಂಬುವವರು ಬಾಬಾ ವಿರುದ್ಧ ಖಾಸಗಿ ಸಲ್ಲಿಸಿದ್ದಾರೆ.

ನಿರ್ಮಲಜೀತ್ ಸಿಂಗ್ ನಾರುಲಾ ಮೂಲ ನಾಮದ ಟಿವಿ ಜ್ಯೋತಿಷಿ, ಧಾರ್ಮಿಕ ಗುರು ನಿರ್ಮಲ್ ಬಾಬಾ ವಿರುದ್ಧ ಈ ಫರ್ಮಾನು ಹೊರಡಿಸಿರುವ ಮ್ಯಾಜಿಸ್ಟ್ರೇಟ್ ಕೋರ್ಟ್, 'ನಿರ್ಮಲ್ ಧಾರಾ' ಎಂಬ ಟಿವಿ ಕಾರ್ಯಕ್ರಮವನ್ನು ತಕ್ಷಣ ಸ್ಥಗಿತಗೊಳಿಸಿ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಶನಿವಾರ ಕಟ್ಟುನಿಟ್ಟಿನ ಆದೇಶ ನೀಡಿದೆ.

ನಿರ್ಮಲ್ ಬಾಬಾ ವಿರುದ್ಧ arrest warrant ಹೊರಡಿಸಿರುವ ಕೋರ್ಟ್ ಕಟುಶಬ್ದಗಳಲ್ಲಿ ಬಾಬಾನನ್ನು ತರಾಟೆಗೆ ತೆಗೆದುಕೊಂಡಿದೆ. 'ಇಂತಹ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ಜನ ನಮ್ಮನ್ನು ಕೇಳತೊಡಗುತ್ತಾರೆ- ಏನು ಕಾನೂನು ಎಂಬುದು ಬಡವರು ಮತ್ತು ದುರ್ಬಲರಿಗೆ ಮಾತ್ರವೇನಾ ಇರೋದು - ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ನ್ಯಾಯಾಲಯದ ಆದ್ಯ ಕರ್ತವ್ಯ' ಎಂದು ಜಡ್ಜ್ ಹೇಳಿದ್ದಾರೆ.

ಈ ನಿರ್ಮಲ್ ಬಾಬಾನ ಶಕ್ತಿ ಅಷ್ಟೊಂದು ಪರಿಣಾಮಕಾರಿಯಾಗಿದ್ದರೆ ಈ ಭ್ರಷ್ಟಾಚಾರ, ಈ ಹಣದುಬ್ಬರದ ಪೆಡಂಭೂತಗಳನ್ನು ಓಡಿಸಲಿ. AC room ಕುಳಿತು ಈ ಬಾಬಾ ಮಾಡುವುದಾದರೂ ಏನು? ಅಮಾಯಕ ಜನರ ಕೋಟ್ಯಂತರ ರುಪಾಯಿಗಳನ್ನು ಕೊಳ್ಳೆ ಹೊಡೆಯುತ್ತಿದ್ದಾನೆ. ಇದೇ ವೇಳೆ ಕೋಟ್ಯಂತರ ಜನ ಹಸಿವಿನಿಂದ ಒದ್ಲಾಡುತ್ತಿದ್ದಾರೆ' ಎಂದು ಜಡ್ಜ್ ಆರ್ ಕೆ ದೇವಾಲಿಯಾ ಸಿಕ್ಕಾಪಟ್ಟೆ ಗರಂ ಆಗಿ ಕೋರ್ಟಿನಲ್ಲಿ ಹೇಳಿದ್ದಾರೆ. ನೋಡಬೇಕು ಪೊಲೀಸರು ಇನ್ನಾದರೂ ಬಾಬಾನನ್ನು ಬಂಧಿಸುತ್ತಾರೋ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ದೇವರು ಸುದ್ದಿಗಳುView All

English summary
A magistrate court in Bina, Madhya Pradesh, directed the information and broadcasting ministry to stop telecast of the godman Nirmal Baba’s programme ‘Nirmal Darbar’ till further orders. The court also issued an arrest warrant against Nirmal Baba on Saturday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more