• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕಕ್ಕೆ ಮತ್ತೊಬ್ಬ ಸಾಂಗ್ಲಿಯಾನ ಆಗಿ ಪಚಾವೋ

By Mahesh
|
Lalrokhuma Pachuau IPS profile
ಬೆಂಗಳೂರು, ಜೂ.1: ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಲಾಲ್ ರುಖಮಾ ಪಚಾವೋ ಅವರು ಅಧಿಕಾರ ಸ್ವೀಕರಿಸಿದ್ದಾರೆ. ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಪ್ರಧಾನ ಕಚೇರಿಯಲ್ಲಿ ಹಂಗಾಮಿ ಡಿಜಿಯಾಗಿದ್ದ ಎಆರ್ ಇನ್ಫಾಂಟ್ ಅವರು ಅವರಿಂದ ದಂಡ ಪಡೆಯುವ ಮೂಲಕ ಗುರುವಾರ(ಮೇ.30) ಅಧಿಕಾರ ವಹಿಸಿಕೊಂಡರು.

'ನಾಲ್ಕು ವರ್ಷಗಳ ನಂತರ ಸಾರ್ವಜನಿಕ ಸೇವೆಗೆ ಮತ್ತೆ ತವರಿಗೆ ವಾಪಸ್ ಬಂದ ಹಾಗೆ ಅನ್ನಿಸುತ್ತಿದೆ. ನನ್ನ 30 ವರ್ಷಗಳ ಸೇವೆಯನ್ನು ಪರಿಗಣಿಸಿ ರಾಜ್ಯದ ಪೊಲೀಸ್ ಮಹಾನಿರ್ದೇಶಕನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ನಾನು ಅಭಾರಿಯಾಗಿರುತ್ತೇನೆ' ಎಂದು ಪಚಾವೋ ತಿಳಿಸಿದರು.

ದೇಶದಲ್ಲೇ ಕರ್ನಾಟಕ ಪೊಲೀಸ್ ವ್ಯವಸ್ಥೆಗೆ ಉತ್ತಮ ಹೆಸರಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪ್ರಥಮ ಆದ್ಯತೆ ನೀಡಲಿದ್ದು, ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುತ್ತೇನೆ. ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಲು ಕ್ರಮ ಹಾಗೂ ಇಲಾಖೆಗೆ ಅಗತ್ಯವಿರುವ ವಾಹನಗಳು ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಕ್ರಮ ಕೈಗೊಳ್ಳುತ್ತೇನೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹರಿಸಲು ನೂತನ ಯೋಜನೆಗಳನ್ನು ಹಮ್ಮಿಕೊಳ್ಳುವ ಆಲೋಚನೆಯಲ್ಲಿದ್ದು, ಇಲಾಖೆಯ ಎಲ್ಲಾ ವಿಭಾಗಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳ ಸಂಪೂರ್ಣ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತೇನೆ ಎಂದು ಪಚುವೋ ಹೇಳಿದರು.

ಸಾಂಗ್ಲಿಯಾನ ಊರಿನಿಂದ ಬಂದ ಪಾಚಾವೋ: ಜನಪ್ರಿಯ ಪೊಲೀಸ್ ಅಧಿಕಾರಿ ಎಚ್ ಟಿ ಸಾಂಗ್ಲಿಯಾನ ನಂತರ ಮಿಂಜೋರಾಂನಿಂದ ಕರ್ನಾಟಕದಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಎಲ್ ಆರ್ ಪಾಚಾವೋ ಎರಡನೇ ಅಧಿಕಾರಿಯಾಗಿದ್ದಾರೆ.

* 1955 ರ ಮಾ.1 ರಂದು ಮಿಜೋರಾಂನಲ್ಲಿ ಜನನ
* ಬಿಎ ಪದವೀಧರರು
* 1977ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಪಚಾವೋ 1980ರಲ್ಲಿ ಮಧುಗಿರಿಯಲ್ಲಿ ಸಹಾಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.
* 1983 ರಲ್ಲಿ ಕಾರಾವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ 2 ವರ್ಷ
* ಸಿಎಆರ್ ಘಟಕದಲ್ಲಿ ಎಸ್ ಪಿ ನಂತರ ಲೋಕಾಯುಕ್ತ ಸಂಸ್ಥೆಯಲ್ಲಿ ಎಸ್ ಪಿ.
* 1988 ರಿಂದ 1991ರವರೆಗೆ ಮಿಜೋರಾಂಗೆ ನಿಯೋಜನೆ ಮೇಲೆ ತೆರಳಿದ್ದರು.
* 1992 ರಲ್ಲಿ ಕರ್ನಾಟಕಕ್ಕೆ ಮರಳಿ, ಗೃಹರಕ್ಷಕದಳ ಕಮಾಂಡೆಂಟ್ ಆಗಿದ್ದರು.
* ಭಯೋತ್ಪಾದನಾ ನಿಗ್ರಹ ದಳ ಐಜಿಪಿ, ಗುಪ್ತದಳ, ಅರಣ್ಯ ವಿಭಾಗದಲ್ಲಿ ಡಿಐಜಿಯಾಗಿದ್ದರು
* 1996 ರಿಂದ 97 ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದರು.

* ಪೊಲೀಸ್ ಆಡಳಿತ, ತರಬೇತಿ ವಿಭಾಗದ ಐಜಿಪಿ, ಈಶಾನ್ಯ ವಿಭಾಗದ ಐಜಿಪಿ, ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
* 2007ರಿಂದ 2012ರ ವರೆಗೆ ಮಿಜೋರಾಂ ರಾಜ್ಯದ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.

* ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಹಾಗೂ ಮಿಜೋರಾಂ ಪೊಲೀಸ್ ವಿಶೇಷ ಕರ್ತವ್ಯ ಪದಕಗಳು ಇವರಿಗೆ ಸಂದಿದೆ. ಇದಲ್ಲದೆ ಮಿಜೋರಾಂ ಹಾಗೂ ಕರ್ನಾಟಕದ ಮಹಾ ನಿರ್ದೇಶಕ ಗಳಿಸಿ ಎರಡೂ ಕಡೆ ಡಿಜಿ ಐಜಿಪಿ ಆದ ಸಾಧನೆ ಮೆರೆದಿದ್ದಾರೆ.


ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಶಂಕರ್ ಬಿದರಿ ಸುದ್ದಿಗಳುView All

English summary
Lalrokhuma Pachau appointed as new interim DG IGP of Karnataka. He is the second Mizoram to lead Karnataka Police after former top cop-turned-politician Hmar Tlawmte Sangliana, who has a mass appeal with the people of Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more