ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲ್ಸ ಸಿಗಲಿಲ್ಲವೆಂದು ಎಂಬಿಎ ಪದವೀಧರೆ ಆತ್ಮಹತ್ಯೆ

By Srinath
|
Google Oneindia Kannada News

unemployment-bangalore-mba-swetha-suicide
ಬೆಂಗಳೂರು, ಮೇ 30: ಎ.ಸಿ. ಇಲ್ಲ ಅಂದಿದ್ದಕ್ಕೆ ನೇಣಿಗೆ ಕೊರಳೊಡ್ಡಿದ ಪತ್ನಿ (ಜಾರ್ಖಂಡ್), ಪಾಶ್ಚಿಮಾತ್ಯ ಬಟ್ಟೆಯುಟ್ಟ ಗರ್ಭಿಣಿ ಪತ್ನಿ ಹತ್ಯೆ (ರೋಮ್ ಎನ್ನಾರೈ) ಇದೇ ರೀತಿಯ ಕ್ರೌರ್ಯ, ಹಿಂಸೆಯ ಸಾಲಿಗೆ ಮತ್ತೊಂದು ತಾಜಾ ಸೇರ್ಪಡೆ ಬೆಂಗಳೂರಿನಲ್ಲೇ ನಡೆದಿರುವ ಘಟನೆ.

ಶ್ವೇತಾ ಎಂಬ 23 ವರ್ಷ ಶಿಕ್ಷಿತ ಯುವತಿ ಕೆಲಸ ಸಿಗಲಿಲ್ಲವೆಂದು ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಗರದ ಚನ್ನಮ್ಮನ ಅಚ್ಚುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಮೂರು ದಿನಗಳ ಹಿಂದೆ ಭಾನುವಾರ ನಡೆದಿದೆ. ಈ ಬಡಾವಣೆಯ 3ನೇ ಮುಖ್ಯ ರಸ್ತೆಯ ನಿವಾಸಿ ಶ್ವೇತಾ ಹೀಗೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಇತ್ತೀಚೆಗಷ್ಟೇ ಎಂಬಿಎ ಮುಗಿಸಿದ್ದ 23 ವರ್ಷದ ಶ್ವೇತಾ, ಉದ್ಯೋಗಕ್ಕಾಗಿ ತೀವ್ರ ತಲಾಶೆ ನಡೆಸಿದ್ದರು. ಆದರೆ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಉದ್ಯೋಗ ಮಾತ್ರ ಸಿಕ್ಕಿರಲಿಲ್ಲ. ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಶ್ವೇತಾ ಮೂಲತಃ ಆಂಧ್ರಪ್ರದೇಶದವರು. ಬೆಂಗಳೂರಿನ ಭುವನೇಶ್ವರಿ ನಗರದಲ್ಲಿ ತಾಯಿಯ ಜತೆ ನೆಲೆಸಿದ್ದರು. ಶ್ವೇತಾರ ತಂದೆ ಮುರಳಿ ಪ್ರಸಾದ್ ಅವರು ಕರ್ನಾಟಕದ ಗಡಿಭಾಗವಾದ ಹಿಂದೂಪುರದಲ್ಲಿ BSNL ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ತಂದೆಯ ಭೇಟಿಗೆ ಹೋಗಿದ್ದ ಶ್ವೇತಾ ಭಾನುವಾರ ಸಂಜೆ ನಗರಕ್ಕೆ ವಾಪಸಾಗಿದ್ದರು.

ಮೃತ ಶ್ವೇತಾ ಅವರ ಕೊಠಡಿಯಲ್ಲಿ ಮರಣ ಪತ್ರ ಮತ್ತೆಯಾಗಿದೆ. ಅದರಲ್ಲಿ 'ನನ್ನ ಸಾವಿಗೆ ನಾನೇ ಕಾರಣ. ನನ್ನ ತಮ್ಮನನ್ನು ಚೆನ್ನಾಗಿ ನೊಡಿಕೊಳ್ಳಿ' ಎಂದು ಶ್ವೇತಾ ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

English summary
In a bizarre case of a suicide in Bangalore an unemployed Bangalore MBA graduate Swetha hangs-self on May 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X