• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಮ್ 2012ನಿಂದ 5 ಲಕ್ಷ ಕೋಟಿ ರು. ನಿರೀಕ್ಷೆ

By Mahesh
|
ಬೆಂಗಳೂರು, ಮೇ 30: ಜೂನ್‌ನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆ ದಾರರ ಸಮಾವೇಶಕ್ಕೆ ಬಿಜೆಪಿ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಜೂ.6 ರಿಂದ ಎರಡು ದಿನಗಳ ಈ ಸಮಾವೇಶದಿಂದ ಸುಮಾರು ಸುಮಾರು 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ನಿರೀಕ್ಷೆ ಇದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಿದ್ಧತೆ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಎಂ ನಿರಾಣಿ ಅವರು ಮಾತನಾಡಿದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ-2012ಕ್ಕೆ ಪೂರ್ವಭಾವಿಯಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು 'ಅರ್ನೆಸ್ಟ್' ಸಂಸ್ಥೆ Knowledge Partner ಆಗಿದ್ದು ಎಂಎಂ ಆಕ್ಟಿವ್ Event Manager ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಚಿವ ನಿರಾಣಿ ಹೇಳಿದರು.

ಏರೋಸ್ಪೇಸ್, ಜವಳಿ, ಕೈಗಾರಿಕೆ, ಸಾರಿಗೆ, ಇಂಜಿನಿಯರಿಂಗ್, ಮೂಲಭೂತ ಸೌಲಭ್ಯ, ವಸತಿ, ನಗರಾಭಿವೃದ್ಧಿ, ಪ್ರವಾಸೋಧ್ಯಮ, ಇಂಧನ, ಬಯೋಟೆಕ್, ಫಾರ್ಮಸ್ಯೂಟಿಕಲ್ ಮುಂತಾದ ಪ್ರಮುಖ ಕ್ಷೇತ್ರಗಳ ಬಗ್ಗೆ 12 ತಾಂತ್ರಿಕ ಗೋಷ್ಠಿಗಳು ಆಯೋಜನೆಗೊಂಡಿದೆ.

ಜಿಮ್ 2011ನಿಂದ 3.98 ಲಕ್ಷ ಕೋಟಿ ರುಪಾಯಿ ಬಂದವಾಳ ಹೂಡಿಕೆಗೆ ಒಪ್ಪಂದವಾಗಿದೆ. ಶೇ.60ರಷ್ಟು ಪ್ರಗತಿಯಾಗಿದೆ.1200 ಕೋಟಿಯ ಭೂಮಿ ಕೋರಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಪಾವತಿಸಲಾಗಿದೆ ಎಂದು ನಿರಾಣಿ ಹೇಳಿದರು.

ದೇಶದಲ್ಲೆ ಪ್ರಥಮವಾಗಿ 18 ರಾಷ್ಟ್ರೀಕೃತ ಬ್ಯಾಂಕುಗಳು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದೆ. 40 ವಿವಿಧ ಯೋಜನೆಗಳಡಿ 2 ಲಕ್ಷ ಕೋಟಿ ರೂ.ಮೊತ್ತವನ್ನು ಹೂಡಿಕೆ ಸಾಧ್ಯತೆಯಿದೆ.

ಮೆಕ್ಸಿಕೋ, ಇಟಲಿ, ಜರ್ಮನಿ ಮುಂತಾದ ಹಲವಾರು ಹೊರ ದೇಶಗಳು ಜೂ.6 ರಂದು ಜರುಗುವ ಜಿಮ್-2012 ಎಕ್ಸ್‌ಪೋದಲ್ಲಿ ಪಾಲ್ಗೊಳ್ಳಲಿವೆ. ಸುಮಾರು 50 ಸಭಾ ಕೊಠಡಿ ಗಳನ್ನು ಈ ಸಮಾವೇಶಕ್ಕಾಗಿ ಸಿದ್ದಪಡಿಸಲಾಗಿದೆ. FKCCI, IIC ಈ ಕಾರ್ಯಕ್ರಮದ ವ್ಯವಸ್ಥಾಪಕರಾಗಿರುವುದು ಇನ್ನಷ್ಟು ಬಲ ತಂದಿದೆ ಎಂದು ಸಚಿವ ನಿರಾಣಿ ಹರ್ಷ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಜಾಗತಿಕ ಬಂಡವಾಳ ಹೂಡಿಕೆ ಸುದ್ದಿಗಳುView All

English summary
Karnataka is fully geared and all set to host the Global Investors Meet 2012 and hopes to Mop up Rs 5 Lac Cr at the event. GIM 2012, the second mega event of ruling BJP government to attract investors in Large and Medium Industries said Minister Murugesh R Nirani

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more