• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

High profile ಸಿಬಿಐ ಲಕ್ಷ್ಮಿನಾರಾಯಣ ಮತ್ತೆ ಸುದ್ದಿಗೆ

By Srinath
|

ಹೈದರಾಬಾದ್, ಮೇ 28: ವಿವಿ ಲಕ್ಷ್ಮಿನಾರಾಯಣ ಹೆಸರು ನಮ್ಮ 'ದಟ್ಸ್ ಕನ್ನಡ' ಓದುಗರಿಗೆ ಸುರಪರಿಚಿತ ಹೆಸರು. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯನ್ನು ಸೆ. 5ರಂದು ಬೆಳಗ್ಗೆ ಎಬ್ಬಿಸಿಕೊಂಡು ಹೋಗುತ್ತಿದ್ದಂತೆ ವಿವಿ ಲಕ್ಷ್ಮಿನಾರಾಯಣ ಹೆಸರು ದಿಢೀರನೆ ಚಾಲ್ತಿಗೆ ಬಂತು. ಆಗ ಒಂದೇ ವಾರದಲ್ಲಿ ವಿವಿ ಲಕ್ಷ್ಮಿನಾರಾಯಣ ಎಂಬ ಖಡಕ್ ಅಧಿಕಾರಿಯನ್ನು ಓದುಗರಿಗೆ ಪರಿಚಯಿಸಲಾಯಿತು.

ಅಂದಿನಿಂದ ನಿರಂತರವಾಗಿ 'ದಟ್ಸ್ ಕನ್ನಡ' ಪುಟಗಳಲ್ಲಿ 'ಸಿಬಿಐ ಲಕ್ಷ್ಮಿನಾರಾಯಣ' ರಾರಾಜಿಸಿದ್ದಾರೆ. ಕುತೂಹಲದ ಸಂಗತಿಯೆಂದರೆ ಮೊನ್ನೆ ಯಡಿಯೂರಪ್ಪ ಮನೆಗಳ ಮೇಲೆ ಸಿಬಿಐ ರೇಡ್ ಆದಾಗ ಇದೇ ಲಕ್ಷ್ಮಿನಾರಾಯಣ ಸಿಬಿಐ ತಂಡದಲ್ಲಿದ್ದರು ಎಂದು ಬಿಂಬಿಸಲಾಗಿತ್ತು. ಆದರೆ ವಾಸ್ತವವಾಗಿ ಲಕ್ಷ್ಮಿನಾರಾಯಣ ಅಂದು ಬೆಂಗಳೂರಿನತ್ತ ತಲೆಯಿಟ್ಟೂ ಮಲಗಿರಲಿಲ್ಲ.

jagan-arrest-cbi-lakshminarayana-high-profile-cases

ಗಮನಾರ್ಹವೆಂದರೆ ಬೆಂಗಳೂರು ಸಿಬಿಐ ವಲಯವೂ ಇದೇ ಲಕ್ಷ್ಮಿನಾರಾಯಣ under ಬರುತ್ತದೆ. ಅಂದರೆ ಲಕ್ಷ್ಮಿನಾರಾಯಣ ಮುಖ್ಯಸ್ಥರಾಗಿರುವ ಹೈದರಾಬಾದ್ ಸಿಬಿಐ ವ್ಯಾಪ್ತಿಗೆ ವಿಶಾಖಪಟ್ಟಣ ಮತ್ತು ಬೆಂಗಳೂರು ವಲಯಗಳು ಬರುತ್ತವೆ. ಹಾಗಾಗಿ ಸದ್ಯಕ್ಕೆ ಜಗನ್ ಕೇಸ್ ಪಕ್ಕಕ್ಕಿಟ್ಟು ಯಾವಾಗ ಬೇಕಾದರೂ ಯಡಿಯೂರಪ್ಪ ಮೇಲೆ ಇದೇ ಲಕ್ಷ್ಮಿನಾರಾಯಣ ಮುಗಿಬೀಳಬಹುದು. ಅಲ್ಲಿಗೆ ಜನಾರ್ದನ ರೆಡ್ಡಿ, ಜಗನ್ ಮೋಹನ್ ರೆಡ್ಡಿ ಮತ್ತು ಯಡಿಯೂರಪ್ಪ ಒಂದೇ ದೋಣಿಯ ಪಯಣಿಗರಾಗುತ್ತಾರೆ.

ಇದೀಗ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ, 38 ವರ್ಷದ ಜಗನ್ ಮೋಹನ್ ರೆಡ್ಡಿಯನ್ನು ಕೊನೆಗೂ ಬಂಧಿಸುವ ಮೂಲಕ ಲಕ್ಷ್ಮಿನಾರಾಯಣ ಮತ್ತೆ ಕೇಂದ್ರಬಿಂದುವಾಗಿದ್ದಾರೆ. ಇಂತಿಪ್ಪ ಲಕ್ಷ್ಮಿನಾರಾಯಣ ಅವರ ತಲೆಯ ಮೇಲೆ ಪಸ್ತುತ ಬರೋಬ್ಬರಿ 15 high profile caseಗಳಿವೆ. ಇದರಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧದ ಶೊಹ್ರಾಬುದ್ದೀನ್ ಪ್ರಕರಣವೂ ಇದೆ.

ಅಸಲಿಗೆ ಲಕ್ಷ್ಮಿನಾರಾಯಣ ಅವರು ಜಗನ್ ರೆಡ್ಡಿಯನ್ನು ನಿನ್ನೆ 5 ಗಂಟೆಗೇ ಬಂಧಿಸಿದ್ದಾರೆ. ಆದರೆ ರಾಜಕೀಯ ವಿಶ್ಲೇಷಣೆಯ ಹೊರತಾಗಿ ಹೇಳುವುದಾದರೆ ಭದ್ರತೆಯ ದೃಷ್ಟಿಯಿಂದ ಮತ್ತು ಕೋರ್ಟಿಗೆ ಅವರನ್ನು ಹಾಜರುಪಡಿಸಲು ಸಮಯಾವಕಾಶ ಬೇಕಾಗುತ್ತದೆ ಎಂಬ ಮುಂದಾಲೋಚನೆಯಿಂದ 7.20ಕ್ಕೆ ಸಿಬಿಐ ಎಸ್ಪಿ ವೆಂಕಟೇಶ್ ಅವರ ಮೂಲಕ ಜಗನ್ ಅರೆಸ್ಟ್ ಎಂಬ ಸುದ್ದಿಯನ್ನು ಬಿತ್ತರಿಸಿದ್ದಾರೆ.

ಅದಕ್ಕೂ ಮುನ್ನ ಜಗನ್ ಬಂಧನ ಪ್ರಕ್ರಿಯೆ ಮುಗಿಸಿ, ಅಲ್ಲಿನ ಅಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ನೀಡಬೇಕಾದ ಸೂಚನೆಗಳನ್ನೆಲ್ಲ ನೀಡಿ ಸಂಜೆ 6 ಗಂಟೆ ಏಕಾಂಗಿಯಾಗಿ ದಿಲ್ ಕುಷಾ ಅತಿಥಿ ಗೃಹದಿಂದ ಹೊರಟೇ ಬಿಟ್ಟರು. ಆದರೆ ಮತ್ತೆ ಸುಮಾರು 3 ಗಂಟೆಗಳ break ಬಳಿಕ ಕಚೇರಿಗೆ ವಾಪಸಾಗಿ ಮತ್ತೆ ಜಗನ್ ವಿಚಾರಣೆಯಲ್ಲಿ ತೊಡಗಿದರು.

ಇದನ್ನೇಕೆ ಹೇಳಾಗುತ್ತಿದೆಯೆಂದರೆ ಈ ಲಕ್ಷ್ಮಿನಾರಾಯಣ ಅವರು ಭುಜದ ಮೇಲೆ 15 ಕೇಸುಗಳನ್ನು ಹೊತ್ತುಕೊಂಡಿರುವುದು ಹಾಗಿರಲಿ, ಭಾನುವಾರಗಳಂದೂ OT ಮಾಡತೊಡಗಿದ್ದಾರೆ. ಅಂದರೆ ಭ್ರಷ್ಟ ರಾಜಕಾರಣಿಗಳನ್ನು ಬೆಂಡೆತ್ತಲು ಒಂದೇ ಸಮನೆ ಕಾರ್ಯಮಗ್ನರಾಗಿದ್ದಾರೆ.

ಅತ್ಯಂತ high profile ಆದ ಶ್ರೀಲಕ್ಷ್ಮಿಯನ್ನೇ ಎದುರಿಗೆ ಕೂಡಿಸಿಕೊಂಡು ನೀರಿಳಿಸಿದ ಲಕ್ಷ್ಮಿನಾರಾಯಣ, ಜನಾರ್ದನ ರೆಡ್ಡಿಯನ್ನು ಬಂಧಿಸಿದ ಮೂರೇ ತಿಂಗಳಲ್ಲಿ ಅಧಿಕೃತವಾಗಿ ಆತನಿಗೆ 'ಆರ್ಥಿಕ ಭಯೋತ್ಪಾಕ' ಎಂಬ ಹಣೆಪಟ್ಟಿ ಹಚ್ಚಿದರು. ಲಕ್ಷ್ಮಿನಾರಾಯಣ ಕಾಟ ತಾಳಲಾರದೆ ಅವರನ್ನು ರಾಜ್ಯದಿಂದ ಮೊದಲು ವಕ್ಕಲೆಬ್ಬಿಸಿ ಎಂದು ಸಿಎಂ ಕಿರಣ್ ರೆಡ್ಡಿ ಮುಂದೆ ಗೊಳೋ ಎಂದ ಐಎಎಸ್/ ಐಪಿಎಸ್ ಅಧಿಕಾರಿಗಳಿಗೆ ಲೆಕ್ಕವೇ ಇಲ್ಲ.

ಅಂದಹಾಗೆ ಮಹಾರಾಷ್ಟ್ರ ಐಪಿಎಸ್ ಕೇಡರ್ ಅಧಿಕಾರಿ ಲಕ್ಷ್ಮಿನಾರಾಯಣ ಅವರು deputation ಮೇಲೆ 2006ರಲ್ಲಿ ಹೈದರಾಬಾದಿಗೆ ವರ್ಗವಾಗಿ ಬಂದವರು. ಇನ್ನು ನಾಲ್ಕು ತಿಂಗಳಲ್ಲಿ ಅವರ deputation ಮುಗಿಯಲಿದೆ. ಮುಂದ !?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ವಿವಿ ಲಕ್ಷ್ಮಿನಾರಾಯಣ ಸುದ್ದಿಗಳುView All

English summary
YSR Congress Party leader YS Jaganmohan Reddy has been arrested yesterday May 28. A look at the man behind his arrest. A high profile CBI Joint Director VV Lakshminarayana.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more