ಜಗನ್ ಗೆ ಜಾಮೀನು ನಿರಾಕರಣೆ: ಸಿಬಿಐ ವಶಕ್ಕೆ?

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಭಾನುವಾರ ಸಾಯಂಕಾಲ ಬಂಧನಕ್ಕೊಳಗಾಗಿದ್ದ ಜಗನ್‌ಮೋಹನ್ ರೆಡ್ಡಿಯನ್ನು ಸಿಬಿಐ ಅಧಿಕಾರಿಗಳು ನಾಂಪಲ್ಲಿಯಲ್ಲಿರುವ ಸಿಬಿಐ ನ್ಯಾಯಾಲಯಕ್ಕೆ ಸೋಮವಾರ ಬೆಳಗ್ಗೆ ಹಾಜರುಪಡಿಸಿದ್ದರು. ಜಗನ್ ರೆಡ್ಡಿ ನ್ಯಾಯಾಲಯಕ್ಕೆ ಹಾಜರಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ನ್ಯಾಯಾಲಯದಲ್ಲಿ ಮೊದಲು ವಾದ ಮಂಡಿಸಿದ ಸಿಬಿಐ ವಕೀಲ ಅಶೋಕ್ ಭಾನ್ ಅವರು 'ಜಗನ್ ಸಿಬಿಐ ವಿಚಾರಣೆಗೆ ಏನೇನೂ ಸಹಕರಿಸುತ್ತಿಲ್ಲ. ಅಕ್ರಮ ಆಸ್ತಿಯ ಪ್ರಮಾಣ ಅಗಾಧವಾಗಿದೆ. ಅದರ ಆಳ ಅಗಲ ವಿಶಾಲವಾಗಿದೆ. ನಿನ್ನೆಯಷ್ಟೇ ಅವರನ್ನು ಬಂಧಿಸಲಾಗಿದೆ. ಹೆಚ್ಚಿವ ವಿಚಾರಣೆಗಾಗಿ ಅವರನ್ನು ಸಿಬಿಐ ವಶಕ್ಕೆ ನೀಡಬೇಕು' ಎಂದು ಕೋರಿದರು.
ಜಗನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ಇದುವರೆಗೆ ಮೂರು ಆರೋಪಪಟ್ಟಿಗಳನ್ನು ದಾಖಲಿಸಿದೆ. ಮೊದಲ ಆರೋಪಪಟ್ಟಿಯಲ್ಲಿ ಜಗನ್ ಮತ್ತಿತರೆ 11 ಆರೋಪಿಗಳಿಗೆ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಉಳಿದೆರಡು ಆರೋಪಪಟ್ಟಿಗಳಲ್ಲಿ ಅವರಿಗೆ ಜಾಮೀನು ದೊರೆತಿಲ್ಲ.












Click it and Unblock the Notifications