ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್‌ಗಿಂತ ಈಗ ಮದ್ಯ ಅಗ್ಗ : ಠಾಕ್ರೆ ಕಿಡಿ

By Mahesh
|
Google Oneindia Kannada News

Bal Thackeray
ಮುಂಬೈ, ಮೇ.26 : ವ್ಹಾ ರೇ ಕಾಂಗ್ರೆಸ್‌ ತೇರಾ ಖೇಲ್‌. ಸಸ್ತಿ ದಾರೂ ಮೆಹಂಗಾ ತೇಲ್‌! (ವ್ಹಾ, ಕಾಂಗ್ರೆಸ್‌ನ ಎಂಥ ಆಟ ; ಮದ್ಯ ಪೆಟ್ರೋಲ್‌ಗಿಂತ ಅಗ್ಗವಾಯಿತು) ಎಂದು ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರು ಸಾಮ್ನಾದ ಸಂಪಾದಕೀಯದಲ್ಲಿ ಕಿಡಿಕಾರಿದ್ದಾರೆ.

ನಿಯಮಿತವಾಗಿರುವ ಪೆಟ್ರೋಲ್‌ ಬೆಲೆ ಹೆಚ್ಚಿಸಿದ ಯುಪಿಎ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಠಾಕ್ರೆ, ಕಾಂಗ್ರೆಸ್‌ಗೆ ಜನರು ಕಡ್ಡಾಯವಾಗಿ ಹೇಗೆ ಮತ ಹಾಕುತ್ತಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು 16 ಬಾರಿ ಹೆಚ್ಚಿಸಲಾಗಿದೆ. ಬೆಂಕಿಪೆಟ್ಟಿಗೆಯಿಂದ ಹಿಡಿದು ಚಿನ್ನದ ತನಕ ಎಲ್ಲ ಸಾಮಗ್ರಿಗಳ ಬೆಲೆ ಏರಿಕೆಯಾಗುತ್ತಿದೆ.

ಅಕ್ಕಿ, ಸಕ್ಕರೆ, ಗೋಧಿ ಮತ್ತು ಖಾದ್ಯ ತೈಲ ಬೆಲೆ 4-5 ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಇದರಿಂದಾಗಿ ಬಡವರಿಗೆ ಮಾತ್ರವಲ್ಲ ಮಧ್ಯಮ ಮತ್ತು ನಡು ಮಧ್ಯಮವರ್ಗದವರಿಗೂ ಜೀವಿಸಲು ಕಷ್ಟವಾಗುತ್ತಿದೆ ಎಂದರು.

ಎಚ್ಚರ ಅಡುಗೆ ಅನಿಲ ಬೆಲೆ ಏರಲಿದೆ: ಡೀಸೆಲ್‌ ಬೆಲೆಯಲ್ಲಿ 5 ರೂ. ಮತ್ತು ಅಡುಗೆ ಅನಿಲದ ಬೆಲೆಯಲ್ಲಿ 400 ರೂಪಾಯಿಯಿಂದ ಹೆಚ್ಚಿಸಲು ಸರಕಾರ ಯೋಜನೆ ಹಾಕುತ್ತಿದೆ. ಅದೆಷ್ಟು ಬಾರಿ ಜನರನ್ನು ಮೋಸ ಮಾಡುತ್ತೀರಿ ಎಂದು ಬಾಳ್‌ ಠಾಕ್ರೆ ಸಂಪಾದಕೀಯದಲ್ಲಿ ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಗರೀಬಿ ಹಟಾವೋ (ಬಡತನ ನಿರ್ಮೂಲನೆ) ಕಾರ್ಯಸೂಚಿಯಲ್ಲಿ ಚುನಾವಣೆಯಲ್ಲಿ ಜಯಗಳಿಸಿದ್ದರು. ಆದರೆ ಬಡತನ ನಿವಾರಣೆಯಾಗಲಿಲ್ಲ. ಬದಲಿಗೆ ಬಡತನ ಹೆಚ್ಚಾಗುತ್ತಿದೆ.

ಸೋನಿಯಾ ಗಾಂಧಿ ಅವರು ಬಡವರು ಎನ್ನುವ ಬದಲಿಗೆ ಆಮ್‌ ಆದ್ಮಿ (ಜನಸಾಮಾನ್ಯರು) ಎನ್ನುತ್ತಾರೆ. ಕಾಂಗ್ರೆಸ್‌ ಕಾ ಹಾಥ್‌, ಆಮ್‌ ಆದ್ಮಿ ಕೇ ಸಾಥ್‌ (ಕಾಂಗ್ರೆಸ್‌ ಕೈ ಜನ ಸಾಮಾನ್ಯರೊಂದಿಗೆ) ಎನ್ನುತ್ತಾರೆ ಸೋನಿಯಾ ಗಾಂಧಿ ಇವರನ್ನು ನಂಬುವುದು ಹೇಗೆ ಎಂದು ಠಾಕ್ರೆ ಪ್ರಶ್ನಿಸಿದರು.(ಪಿಟಿಐ)

English summary
Shiv Sena chief Bal Thackeray slams petrol price hike says Liquor is now cheaper than petrol. Thackeray comes down heavily on congress led UPA government in an editorial in party mouthpiece 'Samaana'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X