ಮುಂಬೈಗೆ ಹೊರಡುವ ಮುನ್ನ ಸಿಎಂ ಬೆಂಡೆತ್ತಿದ ಬಿಎಸ್ವೈ

ಮುಂಬೈ ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಇಂದು (25.05.12) ಮುಂಬೈಗೆ ತೆರಳುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, ಗುರುವಾರದಂದು (ಮೇ 24) ಅಬ್ರಹಾಂ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾವು ಕಷ್ಟ ಪಟ್ಟು ಬೆಳೆಸಿದ ಪಕ್ಷವಿದು. ಪಕ್ಷದ ವಿರುದ್ದ ಜನತೆ ಕೇವಲವಾಗಿ ಮಾತನಾಡುವುದನ್ನು ನಾನು ಸಹಿಸಲಾರೆ. ಮೂವರು ಮಾಜಿ ಸಿಎಂಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಬೇಡಿ ಎಂದು ಸದಾನಂದ ಗೌಡ ಮೇಲೆ ಕೆಂಡ ಕಾರಿದ್ದಾರೆ.
ಮೂವರು ಮಾಜಿ ಸಿಎಂಗಳಾದ ಎಸ್ ಎಂ ಕೃಷ್ಣ, ಎಚ್ ಡಿ ಕುಮಾರಸ್ವಾಮಿ ಮತ್ತು ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಅಕ್ರಮ ಗಣಿಗಾರಿಕೆ ಅವಕಾಶ ನೀಡಿದ ಆರೋಪದ ಬಗ್ಗೆ ವಿವರ ನೀಡುವಂತೆ ಸಿಇಸಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿತ್ತು. ಇದಕ್ಕೆ ಸುಮಾರು ಏಳು ಪುಟಗಳ ಉತ್ತರ ನೀಡಿದ್ದ ರಾಜ್ಯ ಸರಕಾರ ರಕ್ಷಣಾತ್ಮಕ ತಂತ್ರ ಅನುಸರಿಸಿದೆ ಎನ್ನುವುದು ಆರೋಪ. ಪ್ರಕರಣದ ಬಗ್ಗೆ ತನ್ನ ನಿಲುವು ಪ್ರಕಟಿಸದ ರಾಜ್ಯ ಸರಕಾರ ನಿರ್ಣಯವನ್ನು ಸುಪ್ರೀಂಕೋರ್ಟ್ ಹೆಗಲೇರಿಸಿ ಕೈ ತೊಳೆದುಕೊಂಡಿತ್ತು.
ಯಡಿಯೂರಪ್ಪ ಅವರ ತೀವ್ರ ಒತ್ತಡದ ಹಿನ್ನಲೆಯಲ್ಲಿ ಈ ಅಕ್ರಮ ಹಗರಣದಲ್ಲಿ ಸಿಎಂ ಸದಾನಂದ ಗೌಡ ತನ್ನ ಅಭಿಪ್ರಾಯ ನೀಡುವ ಶಾಸ್ತ್ರ ಮುಗಿಸಿ ಸಿಬಿಐ ತನಿಖೆ ನಡೆಸಬೇಕೆ ಬೇಡವೇ ಎಂದು ಸ್ಪಷ್ಟವಾಗಿ ತಿಳಿಸದೇ ಜಾಣತನ ಮೆರೆದಿದ್ದರು.
ಮೂವರು ಮಾಜಿ ಮುಖ್ಯಮಂತ್ರಿಗಳ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿದ್ದು ಅವರ ವಿರುದ್ದವೂ ಕ್ರಮ ತೆಗೆದುಕೊಳ್ಳಬೇಕೆಂದು ಮಾನವ ಹಕ್ಕುಗಳ ಕಾರ್ಯಕರ್ತ ಅಬ್ರಹಾಂ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ನೀವೂ ಒಬ್ಬ ಮುಖ್ಯಮಂತ್ರಿಯಾ? ಅಬ್ರಹಾಂ ಸದಾನಂದ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಹೇಗೆ? (ನಿರೀಕ್ಷಿಸಿ)












Click it and Unblock the Notifications