ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯನ್ನು ತೃಪ್ತಿಪಡಿಸಿದ ಜೋಷಿ ರಾಜೀನಾಮೆ

By Srinath
|
Google Oneindia Kannada News

sanjay-joshi-quits-modi-may-attend-bjp-meet
ಮುಂಬೈ, ಮೇ 24: ಭಾವಿ ಪ್ರಧಾನಿ ಎಂದೇ ಪರಿಣಿತರಾಗಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸಾಹೇಬರು ಮುಖ್ಯವಾಗಿ 2 ವಿಷಯಗಳಿಗೆ ಮುನಿಸಿಕೊಂಡು ಬಿಜೆಪಿ ಕಾರ್ಯಕಾರಿಣಿಗೆ ಗೈರು ಹಾಜರಾಗಿದ್ದಾರೆ. ಒಂದು ನಿತಿನ್ ಗಡ್ಕರಿಗೆ ಎರಡನೆಯ ಅವಧಿಗೆ ರಾಷ್ಟ್ರಾಧ್ಯಕ್ಷ ಪಟ್ಟಾಭಿಷೇಕವಾಗುವುದು ಅವರಿಗೆ ಸುತರಾಂ ಇಷ್ಟವಿಲ್ಲ. 2ನೆಯದು ಏನಾದರೂ ಮಾಡಿ ಮೊದಲು ಆ ಜೋಷಿಗೆ ಒಂದು ಗತಿ ಕಾಣಿಸಬೇಕು ಎಂಬ ಹಪಾಹಪಿಯಿತ್ತು.

2ನೆಯದು ನೆರವೇರಿದೆ. ಗಡ್ಕರಿಗೆ ನಿಷ್ಠ, ತಮಗೆ ಕಟ್ಟರ್ ವಿರೋಧಿಯಾಗಿರುವ ಸಂಜಯ್ ಜೋಷಿ ಕಾರ್ಯಕಾರಿಣಿ ಸಭೆ ಆರಂಭಕ್ಕೆ ಕೆಲವೇ ಕ್ಷಣಗಳ ಮುನ್ನ ಗಡ್ಕರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ತಲುಪಿಸಿದ್ದಾರೆ. ಬಿಜೆಪಿ ಸದಸ್ಯತ್ವಕ್ಕೆ ಜೋಷಿ ಗುಡ್ ಬೈ ಹೇಳಿದ್ದಾರೆ.

ಇನ್ನು, ಮೊದಲನೆಯದು ಗಡ್ಕರಿನ್ನ ಪಕ್ಕಕ್ಕಿಟ್ಟು ಮೋದಿಗೆ ಮಣೆ ಹಾಕುವುದು ಅಸಾಧ್ಯ. ಪರಿಸ್ಥಿತಿ ಹೀಗಿರುವಾಗ ಮೋದಿ ಬಿಜೆಪಿ ಕಾರ್ಯಕಾರಿಣಿಗೆ ಹಾಜರಾಗುತ್ತಾರಾ? ಸದ್ಯದ ಮಾಹಿತಿ ಪ್ರಕಾರ ಮೋದಿ ಸಭೆಗೆ ಹಾಜರಾಗುವ ಸಾಧ್ಯತೆ ಹೆಚ್ಚಾಗಿದೆ. ಶುಕ್ರವಾರ ಉದಯಪುರದಲ್ಲಿ ಮಹಾರಾಣಾ ಪ್ರತಾಪ್ ಜನ್ಮ ದಿನಾಚರಣೆ ನಿಗದಿಯಾಗಿದೆ. ಅದಕ್ಕೆ ಮೋದಿ ಸಹ ಹಾಜರಾಗುತ್ತಿದ್ದಾರೆ. ಹಾಗೆಯೇ ನಾಳೆ ಕಾರ್ಯಕಾರಿಣಿಯಲ್ಲೂ ಪಾಲ್ಗೊಳ್ಳುತ್ತಾರೆ ಎನ್ನಲಾಗಿದೆ.

ಹಾಗೆ ನೋಡಿದರೆ, ಮೋದಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಗೈರು ಹಾಜರಾಗಿರುವುದು ಇದೇ ಮೊದಲಲ್ಲ. ಕಳೆದ ಸೆಪ್ಟೆಂಬರಿನಲ್ಲಿ 'ಸದ್ಭಾವನೆ' ಕೊರತೆಯಿಂದಾಗಿ ಆಡ್ವಾಣಿ ಜತೆಯೂ ಮುನಿಸಿಕೊಂಡ ಮೋದಿ ದೆಹಲಿ ಸಭೆಗೂ ಹೀಗೇ ಗೈರು ಹಾಜರಾಗಿದ್ದರು. ಇನ್ನು, ಕಳೆದ ವರ್ಷದ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ಮೋದಿ ಪಾಲ್ಗೊಂಡಿರಲಿಲ್ಲ.

ಉತ್ತರಪ್ರದೇಶದ ಚುನಾವಣಾ ಪ್ರಚಾರ ಕಾರ್ಯಕ್ಕೆ ತಮ್ಮ ಬದ್ಧವೈರಿ ಸಂಜಯ್ ಜೋಶಿ ಅವರನ್ನು ನೇಮಿಸಿದ್ದರಿಂದ ಕಿರಿಕಿರಿಗೊಂಡ ಮೋದಿ ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ RSS ಮೋದಿ ಅನುಪಸ್ಥಿತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಈ ಮಧ್ಯೆ, ನಾಟಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಕೊನೆಯ ಕ್ಷಣದಲ್ಲಿ ಕಾರ್ಯಕಾರಿಣಿಯಿಂದ ದೂರ ಸರಿದಿದ್ದಾರೆ.

English summary
Even as BJP's central leadership sweats over the issue of Narendra Modi's presence at the two-day national executive meeting starting today in Mumbai, there is strong possibility of Gujarat CM attending the event as his bete noire, Gadkari aide Sanjay Joshi quits BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X