ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪೆಟ್ರೋಲ್ ಬಾಂಬ್': ಮೇ 31 ಭಾರತ್ ಬಂದ್

By Srinath
|
Google Oneindia Kannada News

petrol-rate-hike-nda-call-bharat-bandh-may31
ನವದೆಹಲಿ, ಮೇ 24: ಆಡಳಿತಾರೂಢ ಯುಪಿಎ ಸರಕಾರ ಎಸೆದಿರುವ 'ಪೆಟ್ರೋಲ್ ಬಾಂಬ್'ಗೆ ಸಿಕ್ಕಿ ಜನ ಹೈರಾಣಗೊಂಡಿದ್ದಾರೆ. ವ್ಯಾಪಕ ಆಕ್ರೋಶ, ವಿರೋಧಗಳು ಭುಗಿಲೆದ್ದಿವೆ. ದಿಢೀರನೆ ಏಳೆಂಟು ರುಪಾಯಿ ಹೆಚ್ಚಿಸಿರುವುದು ಜನಸಾಮಾನ್ಯನಿಗೆ ಬೆಟ್ಟದಷ್ಟು ಹೊರೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ 81 ರುಪಾಯಿ ಆಗಿದೆ. ಹಣದುಬ್ಬರವೋ, ಮತ್ತೊಂದೋ ಅಂತೂ ಪೆಟ್ರೋಲ್ ದರ ಏರಿಕೆಯಿಂದ ಜನಸಾಮಾನ್ಯನಿಗೆ ಉಬ್ಬಸ ಬಂದಂತಾಗಿದೆ.

ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಪೆಟ್ರೋಲ್ ಗ್ರಾಹಕರ ನೆರವಿಗೆ ಧಾವಿಸಿವೆ. ಕೇಂದ್ರ ಸರಕಾರ ಬೆಲೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಇದೇ ಮೇ 31ರಂದು (ಅಂದರೆ ಮುಂದಿನ ಗುರುವಾರ) ದೇಶವ್ಯಾಪಿ ಬಂದ್ ಗೆ ಕರೆ ನೀಡಿದೆ. ಮುಖ್ಯವಾಗಿ ಎನ್ ಡಿಎ ಮೈತ್ರಿಕೂಟ ಪೆಟ್ರೋಲ್ ದರ ಏರಿಕೆ ವಿರೋಧಿಸಿ, ಬಂದ್ ಗೆ ಕರೆ ನೀಡಿದೆ ಎಂದು NDA ಸಂಚಾಲಕ ಜೆಡಿಯು ಅಧ್ಯಕ್ಷ ಶರದ್ ಯಾದವ್ ತಿಳಿಸಿದ್ದಾರೆ.

ಆದರೆ ಜನರ ಆಕ್ರೋಶ ಇಷ್ಟಕ್ಕೇ ತಣ್ಣಗಾಗದ ಜನರು ಎನ್ ಡಿಎ ಮೈತ್ರಿ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ (ಕರ್ನಾಟಕ ಸೇರಿದಂತೆ) ಮೊದಲು ತೆರಿಗೆ ಕಡಿಮೆ ಮಾಡಬಹುದಲ್ಲಾ? ಎಂದು ಪ್ರಶ್ನಿಸುತ್ತಿದ್ದಾರೆ. ಏಕೆಂದರೆ ಕರ್ನಾಟಕದಲ್ಲಿ ಪೆಟ್ರೋಲ್ ಮೇಲಿನ ತೆರಿಗೆ (VAT) ಇಡೀ ದೇಶದಲ್ಲೇ ಗರಿಷ್ಠವಾಗಿದ್ದು, ತತ್ಫಲವಾಗಿ ಪೆಟ್ರೋಲ್ ದರವೂ ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಅತ್ಯಧಿಕವಾಗಿದೆ.

English summary
Petroleum Ministry has hiked Petrol price by Rs 7.50 per litre owing to the losses suffered by oil companies on May 23. But as the public outrage mounting furiously the NDA has called for Bharat Bandh on May 31 in protest against the rate hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X