• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಕೀಯ ವಿಪ್ಲವಕ್ಕೆ ಆಂಧ್ರ 'ಸಾಕ್ಷಿ'ಯಾಗಲಿದೆಯಾ?

By Srinath
|
jagan-fears-state-violence-ap-cbi-threat
ಹೈದರಾಬಾದ್, ಮೇ 24: ಅತ್ತ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಲು ಸಿಬಿಐ ಕ್ಷಣಗಣೆ ಮಾಡುತ್ತಿರುವಾಗ ಇಡೀ ಆಂಧ್ರ ಯಾವುದೇ ಕ್ಷಣ ಹೊತ್ತಿ ಉರಿಯಲು ಸಜ್ಜಾಗಿದೆ ಎಂಬ ಆತಂಕದ ವರದಿಗಳು ದಟ್ಟವಾಗಿ ಹಬ್ಬಿವೆ.

ಈ ಹಿಂಸಾಚಾರವನ್ನು ನೆಪವಾಗಿಸಿಕೊಂಡು ಜೂನ್ 12ರ ಉಪಚುನಾವಣೆಯನ್ನು (ಒಂದು ಲೋಕಸಭೆ ಸ್ಥಾನ ಮತ್ತು 18 ವಿಧಾನಸಭಾ ಸ್ಥಾನಗಳು) ಮುಂದೂಡುವ ಎಣಿಕೆ ಇದರಲ್ಲಡಗಿದೆ. ಇದನ್ನೇ ವಿವರಿಸಿ ಜಗನ್, ಪ್ರಧಾನಿ ಸಿಂಗ್ ಮತ್ತು ಮುಖ್ಯ ಚುನಾವಣೆ ಆಯುಕ್ತ ಖುರೇಶಿಗೆ ಪತ್ರ ಬರೆದಿದ್ದಾರೆ.

ಈ ಮಧ್ಯೆ, ಗುಪ್ತಚರ ಮಾಹಿತಿಯನ್ನು ಆಧರಿಸಿ, ರಾಜಧಾನಿ ಹೈದರಾಬಾದ್ ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸ್ ಆಡಳಿತವು ಕಟ್ಟೆಚ್ಚರ ವಹಿಸಿದ್ದು, ಹೈದರಾಬಾದಿನಲ್ಲಿ ಈಗಾಗಲೇ ನಿಷೇದಾಜ್ಞೆ ಜಾರಿಗೊಳಿಸಿದೆ.

ಸಂಭಾವ್ಯ ಹಿಂಸಾಚಾರವನ್ನು ತಡೆಗಟ್ಟಲು ಪೊಲೀಸರು ಒಂದು ವಾರದಿಂದ ಸಿದ್ಧತೆ ನಡೆಸಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಪೊಲೀಸರನ್ನು ಸನ್ನದ್ಧಗೊಳಿಸಲಾಗಿದೆ. ಸಶಸ್ತ್ರ ಮೀಸಲು ಪಡೆಯೂ ಟೊಂಕಕಟ್ಟಿ ನಿಂತಿದೆ. ರಾಯಸೀಮಾ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಜಗನ್ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿದ್ದು, ಅವರ ಬಂಧನವಾದರೆ ಹಿಂಸಾಚಾರಕ್ಕಿಳಿಯುವ ಸೂಚನೆಗಳಿವೆ ಎನ್ನಲಾಗಿದೆ.

ಮೇ 28ರಂದು ಜಗನ್ ಸಿಬಿಐ ಕೋರ್ಟಿನಲ್ಲಿ ಹಾಜರಾಗಬೇಕಿದ್ದು, ಅದಕ್ಕೂ ಮುನ್ನ ಅಥವಾ ಅಂದೇ ಜಗನ್ ನನ್ನು ಸಿಬಿಐ ಬಂಧಿಸುವ ಸಾಧ್ಯತೆಯಿದೆ. ಇದರಿಂದ ರಾಜ್ಯದಲ್ಲಿ ಹಿಂಸಾಚಾರ ಭುಗಿಲೇಳಲಿದೆ ಎಂಬುದು ಪೊಲೀಸರ ವಾದ. ಆದರೆ ನನ್ನ ಬಂಧನವನ್ನು ನೆಪವಾಗಿಸಿಕೊಂಡು ಆಡಳಿತಾರೂಢ ಕಾಂಗ್ರೆಸ್ ಮತ್ತು ಟಿಡಿಪಿ ನಾಡಿನಲ್ಲಿ ಹಿಂಸಾಚಾರ ಎಬ್ಬಿಸಲಿದೆ ಎಂಬುದು ಜಗನ್ ಬಿರು ನುಡಿ.

ಈ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ವಯಲಾರ್ ರವಿ ಕಳೆದ ವಾರ ಹೈದರಾಬಾದಿಗೆ ಭೇಟಿ ನೀಡಿದ್ದರು. ಆಗ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಸಿಬಿಐ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಮತ್ತು ಡಿಜಿಪಿ ವಿ. ದಿನೇಶ್ ರೆಡ್ಡಿ ಜತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಹಿಂಸಾಚಾರ ತಾಂಡವವಾಡಿದರೆ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಈ ವಿಶೇಷ ಸಭೆ ಕರೆಯಲಾಗಿತ್ತು ಎಂದು ತಿಳಿದುಬಂದಿದೆ.

ಆದರೆ ಜಗನ್ ಹೇಳುವುದೇ ಬೇರೆ... ಈ ಸಭೆಯಲ್ಲಿ ತನ್ನ ಬಂಧನವಾಗುತ್ತಿದ್ದಂತೆ ಜಗನ್ ಅಭಿಮಾನಿಗಳೇ ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಗುಲ್ಲೆಬ್ಬಿಸಿ, 'ಸರಕಾರಿ ಪ್ರಾಯೋಜಿತ' ಹಿಂಸಾಚಾರಕ್ಕೆ ಕಿಡಿ ಹಚ್ಚುವ ಬಗ್ಗೆ ಈ ನಾಯಕರು ಚರ್ಚಿಸಿದ್ದಾರೆ ಎಂಬುದು ಜಗನ್ ಬಲವಾದ ವಾದ. ಒಟ್ಟಿನಲ್ಲಿ ಆಂಧ್ರ ಯಾವುದೇ ಕ್ಷಣ ಹಿಂಸಾಚಾರಕ್ಕೆ ಸಾಕ್ಷಿಯಾಗಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಜಗನ್ ಮೋಹನ್ ರೆಡ್ಡಿ ಸುದ್ದಿಗಳುView All

English summary
YSR Congress Party leader YS Jaganmohan Reddy fears state sponsored violence in AP at any moment. Hyderabad Police announced imposition of prohibitory orders in the city from May 24 to May 29.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more