ಎಚ್ ಪಿ ಟೆಕ್ಕಿಗೆ ಮುಳುವಾದ ಚಾಟಿಂಗ್ ಪ್ರೇಮ

Bangalore HP Techie Murder Bangalore
ಬೆಂಗಳೂರು, ಮೇ.24: ವೈಟ್ ಫೀಲ್ಡ್ ನಲ್ಲಿರುವ ಎಚ್ ಪಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಕೇರಳ ಮೂಲದ ಟೆಕ್ಕಿ ಶ್ರೀರಾಜು ಸಾವಿನ ಕಾರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಎಇಸಿಎಸ್ ಲೇಔಟ್ ನಲ್ಲಿ ಮಂಗಳವಾರ ವಿಚಿತ್ರ ರೀತಿಯಲ್ಲಿ ಸಾವನ್ನಪ್ಪಿದ ರಾಜು ಸಾವಿಗೆ ಪ್ರೇಮ ವೈಫಲ್ಯ ಕಾರಣ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಫೇಸ್ ಬುಕ್ ಚಾಟಿಂಗ್ ಮೂಲಕ ಶುರುವಾದ ಪ್ರೇಮ ಸಾವಿನಲ್ಲಿ ಅಂತ್ಯಗೊಂಡಿದೆ. ಆದರೂ, ಪ್ರಕರಣದ ನಿಗೂಢತೆ ಇನ್ನೂ ಕಮ್ಮಿಯಾಗಿಲ್ಲ.

ರಾಜು ಶವದ ಬಳಿ ಇದ್ದ ಚಿನ್ನದ ಚೈನು, ವಾಚು, ಫೋನು, ಪರ್ಸ್ ಎಲ್ಲವೂ ಹಾಗೆ ಇತ್ತು. ಹೊರಗಡೆಯಿಂದ ಕಾರನ್ನು ನೋಡಿದರೆ ಯಾರೋ ಒಳಗೆ ಸುಮ್ಮನೆ ಕುಳಿತಿರುವಂತೆ ಕಾಣುತ್ತಿತ್ತು. ಹೀಗಾಗಿ ಇದು ದುಷ್ಕರ್ಮಿಗಳ ಕೃತ್ಯವಲ್ಲ. ಆತ್ಮಹತ್ಯೆ ಎಂದು ಪೊಲೀಸರಿಗೆ ಅನುಮಾನ ಬಂದಿದೆ.

ಪ್ರೇಮ ವೈಫಲ್ಯ: ನಂತರ ರಾಜು ಮೊಬೈಲ್ ಫೋನ್ ಕರೆ ಪಟ್ಟಿ, ಎಸ್ ಎಂಎಸ್ ನೋಡಿದ ಮೇಲೆ ವಿಷಯ ದೃಢಪಟ್ಟಿದೆ. ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಗೆಳತಿ ಜೆನ್ನಿಫರ್ ಮೋಹಕ್ಕೆ ರಾಜು ಬಿದ್ದಿದ್ದ. ಜೆನ್ನಿ ಕೂಡಾ ಐಬಿಎಂ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾಳೆ. ಎಚ್ ಪಿ ಸೇರುವ ಮೊದಲು ರಾಜು ಕೂಡಾ ಐಬಿಎಂನಲ್ಲಿ ಕೆಲ ತಿಂಗಳು ಉದ್ಯೋಗದಲ್ಲಿದ್ದ ಎಂಬುದು ಗಮನಾರ್ಹ.

ಫೇಸ್ ಬುಕ್ ಮೂಲಕ ದಿನವೂ ಚಾಟಿಂಗ್ ಮಾಡುತ್ತಿದ್ದ ಶ್ರೀರಾಜುಗೆ ಜೆನ್ನಿಫರ್ ಕೈ ಕೊಟ್ಟಿದ್ದಳು. ತನ್ನ ಫೋಟೋ ಬದಲಿಗೆ ಬೇರೆ ಹುಡುಗಿಯ ಫೋಟೊ ಕಳಿಸಿದ್ದಳು ಎಂದು ತಿಳಿದು ಬಂದಿದೆ. ಆದರೆ, ಇಲ್ಲಿವರೆಗೂ ಇಬ್ಬರು ಪರಸ್ಪರ ಮುಖತಃ ಭೇಟಿಯಾಗಿರಲಿಲ್ಲ. ಭೇಟಿ ಮಾಡುವ ಅವಕಾಶವನ್ನು ಜೆನ್ನಿಫರ್ ತಳ್ಳಿ ಹಾಕುತ್ತಿದಳು.

ಆದರೆ, ಜೆನ್ನಿ ಪ್ರೇಮಪಾಶದಲ್ಲಿ ರಾಜು ಸಿಕ್ಕಿಬಿದ್ದಿದ್ದ. ಈ ನಡುವೆ ಜೆನ್ನಿ ಪ್ರೇಮ ಪ್ರಕರಣ ಅವರ ತಂದೆ ತಾಯಿಗೆ ತಿಳಿದಿದೆ. ಜೆನ್ನಿಗೆ ಸೂಕ್ತ ಹುಡುಗನನ್ನು ಹುಡುಕಿ ನಿಶ್ಚಿತಾರ್ಥ ಮುಗಿಸಿದ್ದಾರೆ. ಈ ವಿಷಯ ತಿಳಿದು ಆಘಾತಗೊಂಡ ರಾಜು, ಆಕೆಯನ್ನು ಪರಿಪರಿಯಾಗಿ ಬೇಡಿಕೊಂಡಿದ್ದಾನೆ.

ಆದರೆ, ಶ್ರೀರಾಜ್ ಮೇಸೆಜ್, ಮೇಲ್, ಚಾಟ್ ಗೆ ಉತ್ತರಿಸಿದೆ ಜೆನ್ನಿ ನಿರ್ಲಕ್ಷಿಸಿದ್ದು ಕೊನೆ ರಾಜು ಸಾವಿನಲ್ಲಿ ಅಂತ್ಯಗೊಂಡಿದೆ. ಇವಿಷ್ಟು ಪೊಲೀಸರಿಗೆ ಸಿಕ್ಕ ಮಾಹಿತಿ. ಆದರೆ, ಜೆನ್ನಿಫರ್ ಯಾರು? ಆಕೆ ರಾಜು ಸಾವಿನ ಬಗ್ಗೆ ಏನು ಹೇಳಿಕೆ ನೀಡಿದ್ದಾಳೆ ಎಂಬ ವಿಷಯ ಬಹಿರಂಗಗೊಂಡಿಲ್ಲ. ಜೆನ್ನಿ ಕತೆ ಬಹಿರಂಗಗೊಂಡರೆ ಇನ್ನಷ್ಟು ಸತ್ಯಗಳು ಹೊರಬೀಳಲಿದೆ.

ಟೆಕ್ಕಿ ರಾಜು ವಿಕೃತ ಸಾವಿಗೆ ಮನಸ್ಸು ಮಾಡಿದ್ದು ಏಕೆ? ಸಾವು ಸಂಭವಿಸಿದ್ದಾದರೂ ಹೇಗೆ? ಮುಂದೆ ಓದಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+