ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪ್ರಧಾನಿಯಾಗಬೇಕು ಏಕೆ?... ಟ್ವೀಟ್ ನೋಡಿ

By Mahesh
|
Google Oneindia Kannada News

Narendra Modi as PM creating waves in Twitter
ಬೆಂಗಳೂರು, ಮೇ.23: ABP News-Nielsen ಸಮೀಕ್ಷೆಯ ಪ್ರಕಾರ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ತರದಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದರು. ಈ ಸುದ್ದಿಯನ್ನು ವಿಪಕ್ಷಗಳು ಅರಗಿಸಿಕೊಳ್ಳುವ ಮೊದಲೇ ಸಾಮಾಜಿಕ ಜಾಲ ತಾಣ ಟ್ವೀಟ್ಟರ್ ನಲ್ಲೂ ಮೋದಿ ಜನಪ್ರಿಯತೆ ಉತ್ತುಂಗಕ್ಕೇರಿದೆ.

ModiasPMBecause ಎಂಬ ಕೀ ಪದ ಟ್ವೀಟ್ಟರ್ ಟ್ರೆಂಡ್ ಪಟ್ಟಿಯಲ್ಲಿ ಕಳೆದ 12 ಗಂಟೆಗಳಿಂದ ಇದ್ದು, ಟ್ರೆಂಡ್ ಪಟ್ಟಿಯಲ್ಲಿ ಹೆಚ್ಚು ಕಾಲ ಅಗ್ರಸ್ಥಾನ ಕಾಯ್ದುಕೊಂಡ ಕೀ ಪದ ಎನಿಸಿದೆ.

ನರೇಂದ್ರ ಮೋದಿ ಪ್ರಧಾನಿಯಾಗಬೇಕು ಏಕೆ? ಎಂಬುದಕ್ಕೆ ಎಲ್ಲರೂ ಮೋದಿ ಅವರ ವೈವಿಧ್ಯಮಯ ವ್ಯಕ್ತಿತ್ವ, ಸರ್ವಾಂಗೀಣ ಅಭಿವೃದ್ಧಿ ಮಂತ್ರವೇ ಕಾರಣ ಎಂದಿದ್ದಾರೆ. ಗುಜರಾತಿನಲ್ಲಿ ಇಂಧನ, ಇ ಆಡಳಿತ, ಸೌರ ಶಕ್ತಿ, ಜಲ ಸಂರಕ್ಷಣೆ ಇವೆ ಮುಂತಾದ ಕ್ಷೇತ್ರಗಳಲ್ಲಿ ಮೋದಿ ಸರ್ಕಾರ ಕಂಡ ಪ್ರಗತಿ ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದೆ.

ಮಹಾತ್ಮಾ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸು ಮಾಡುವ ತಾಕತ್ತು ಮೋದಿ ಒಬ್ಬರಿಗೆ ಇರುವುದು. ಸ್ವಾಮಿ ವಿವೇಕಾನಂದ ಅವರ ಜಾಣ್ಮೆ, ಸರ್ದಾರ್ ಪಟೇಲ್ ಅವರ ಧೈರ್ಯ ಮೋದಿಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಈ ಸಮೀಕ್ಷೆಗಳಂತೆ ಈ ಹಿಂದೆ ಕೂಡಾ ಪ್ರಧಾನಿ ರೇಸ್ ನಲ್ಲಿ ಮೋದಿ ಎಲ್ಲರಿಗಿಂತ ಮುಂದಿದ್ದಾರೆ ಎಂಬುದು ಗಮನಾರ್ಹ. ಇಂಡಿಯಾ ಟುಡೇ ನಡೆಸಿದ 'Mood of the Nation' ಸಮೀಕ್ಷೆಯಲ್ಲಿ ರಾಹುಲ್ ಹಾಗೂ ಮನ ಮೋಹನ್ ಸಿಂಗ್ ರನ್ನು ಮೋದಿ ಹಿಂದಿಕ್ಕಿದ್ದರು.

ಯುಎಸ್ ಎ ಕಾಂಗ್ರೆಸ್ಸಿಗರು ಮೋದಿಯನ್ನು 'King of Governance' ಹೊಗಳಿದ್ದರು. ವಿಕಿಲೀಕ್ಸ್ ಸಹ ಜನಾಭಿಪ್ರಾಯ ಮೋದಿ ಕಡೆ ಇದೆ ಎಂದು ಮಾಹಿತಿ ಹೊರ ಹಾಕಿತ್ತು.

ಟೈಮ್ಸ್ ಮ್ಯಾಗಜೀನ್ ನ ಮುಖಪುಟದಲ್ಲಿ ರಾರಾಜಿಸಿರುವ ಮೋದಿ ಮುಂದೊಮ್ಮೆ ಭಾರತದ ಮುಖಪುಟದಲ್ಲಿ ಪ್ರಕಾಶಮಾನವಾಗಿ ಬೆಳಗಲಿ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

English summary
Like the mainstream media, the ‘ModiasPMBecause’ trend in the Twitter has also picked up, with a variety of answers beginning to pour in from various parts of the country as well as abroad. It occupied the numero uno slot for the longest period!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X