• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮ ವಸ್ತು ಇತರರ ಬಳಕೆಗೆ ನೀಡಲು ಸಿದ್ಧರಿದ್ದೀರಾ?

By Prasad
|
Sunil Murthy, InfoToros president
ಬೆಂಗಳೂರು, ಮೇ 23 : ನಮ್ಮ ಕೈಯಲ್ಲಿರುವ ಮೊಬೈಲನ್ನು ಕರೆ ಮಾಡಲು ಕೇಳಿದವರಿಗೆ ಹಿಂದೆಮುಂದೆ ನೋಡುವ ಜನ ನಾವು. ಅಲ್ಲದೆ, ನಮಗೆ ಅಗತ್ಯವಲ್ಲದ ವಸ್ತುಗಳನ್ನು ಅಟ್ಟದ ಮೇಲೆ ಧೂಳು ತಿನ್ನುವಂತೆ ಇಡುವಲ್ಲಿಯೂ ನಿಸ್ಸೀಮರು. ಹಳೆ ಅಥವಾ ಬಳಸಲಾರದ ವಸ್ತುಗಳನ್ನು ಆಂಟಿಕ್ ಆಗಿ ಇಟ್ಟುಕೊಳ್ಳುತ್ತೇವೆಯೇ ಹೊರತು, ಅಗತ್ಯ ಇರುವವರಿಗೆ ಸುತರಾಂ ನೀಡಲು ಇಷ್ಟಪಡುವುದಿಲ್ಲ.

ಆದರೆ, ಇಂಥ ವಸ್ತುಗಳನ್ನು, ಅಂದರೆ ನಮಗೆ ಅಗತ್ಯವಿಲ್ಲದ ಮತ್ತು ಇತರರಿಗೆ (ಪರಿಚಯಸ್ಥರಿಗೆ) ಅಗತ್ಯವಿರುವ ವಸ್ತುಗಳನ್ನು ಹಂಚಿಕೊಳ್ಳುವಂತಾದರೆ ಹೇಗೆ? ಅಗತ್ಯವಿರುವವರಿಗೆ ಉಪಯೋಗವೂ ಆಗುತ್ತದೆ ನಮಗೆ ನಾಲ್ಕು ಕಾಸು ಬಂದ ಹಾಗೆಯೂ ಆಗುತ್ತದೆ. ನಂಬಿಗಸ್ಥ ಕಂಪನಿ ಮುಖಾಂತರ ನಡೆಯುವುದರಿಂದ ಇಂಥ ವ್ಯವಹಾರಗಳಲ್ಲಿ ಜನರಿಗೆ ನಂಬಿಕೆಯೂ ಹುಟ್ಟುತ್ತದೆ.

ಇಂಥದೊಂಡು ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ರೂಂಗಾ ಇಂಕ್ ಮತ್ತು ಇನ್ಫೋಟೋರೋಸ್ ಕಾರ್ಪ್ ಕಂಪನಿಗಳೆರಡು ಒಪ್ಪಂದ ಮಾಡಿಕೊಂಡಿವೆ. ಅಮೆರಿಕದಲ್ಲಿ ಬಳಕೆಯಲ್ಲಿರುವ ಈ ಕಲ್ಪನೆಯನ್ನು ಭಾರತಕ್ಕೂ ವಿಸ್ತಾರ ಮಾಡುವ ಉದ್ದೇಶವನ್ನು ಇವೆರಡೂ ಕಂಪನಿಗಳು ಹೊಂದಿವೆ. ಆರಂಭದಲ್ಲಿ ಬೆಂಗಳೂರಿನಲ್ಲಿ ಈ ಪರಿಕಲ್ಪನೆ ಮೂರ್ತರೂಪ ಪಡೆಯಲಿದೆ.

"ಭಾರತದಲ್ಲಿ ಆಗಲೇ ನಡೆಯುತ್ತಿರುವ ವಸ್ತು-ಹಂಚಿಕೆ-ವ್ಯವಹಾರಗಳಲ್ಲಿ ರೂಂಗಾದ ಯೋಜನೆಗಳು ಸಕಾರಾತ್ಮಕವಾಗಿ ಕಾರ್ಯರೂಪಕ್ಕೆ ಬಂದರೆ ಯಶಸ್ವಿಯಾಗುವುದರಲ್ಲಿ ಸಂದೇಹವೇ ಇಲ್ಲ. ಪ್ರಾಡಕ್ಟ್-ಬೆಳವಣಿಗೆ ಮಾತ್ರವಲ್ಲದೆ ಭಾರತದಲ್ಲಿ ರೂಂಗಾಕ್ಕಿರುವ ಅವಕಾಶಗಳೂ ಬಹಳ ಉತ್ಸಾಹದಾಯಕವಾಗಿದೆ" ಎಂದು ಇನ್ಫೋಟೋರೋಸಿನ ಅಧ್ಯಕ್ಷರಾದ ಸುನಿಲ್ ಮೂರ್ತಿಯವರು ಒನ್ಇಂಡಿಯಾ-ಕನ್ನಡಕ್ಕೆ ತಿಳಿಸಿದರು.

ರೂಂಗಾ : ನಂಬಿಕಸ್ಥರೊಡನೆ ವಸ್ತು ಹಂಚಿಕೆಗೆಂದು ನಿರ್ಮಿಸಿದ ನಿಯಂತ್ರಿತ ಸೋಷಿಯಲ್ ತಂಗುದಾಣ ರೂಂಗಾ. ಕ್ರೈಗ್ಸ ಲಿಸ್ಟ್ ಹಾಗೂ ಫ್ರೀ ಸೈಕಲ್-ಗಳಿಗೆ ಪರ್ಯಾಯವಾದ ರೂಂಗಾದಲ್ಲಿ ಬಳಕೆದಾರರು ತಮ್ಮ ಪೋಸ್ಟುಗಳನ್ನು ಯಾರು ನೋಡುತ್ತಾರೆಂದು ನಿರ್ಧರಿಸಬಹುದು. ಈ ಹಂಚಿಕೆ ನಂಬಿಕಸ್ಥರಲ್ಲಿ ಮಾತ್ರವಾದದ್ದರಿಂದ ಬಳಕೆದಾರನು ತನಗೆ ಬೇಡವಾದ ವಸ್ತುವನ್ನು ಬಾಡಿಗೆ/ಬಳಕೆ/ಮಾರಾಟಕ್ಕಾಗಿ ಕೊಡಬಲ್ಲ. ಅನ್ಯರಿಂದ ತನಗೆ ಬೇಕಾಗಿರುವ ವಸ್ತುಗಳನ್ನೂ ಪಡೆಯಬಲ್ಲ.

ಇನ್ಫೋಟೋರೋಸ್ : ಉದ್ಯಮ, ಗ್ರಾಹಕ ಮಟ್ಟದಲ್ಲಿ ಕ್ಲೌಡ್ ತಂತ್ರಜ್ಞಾನ ಹಾಗೂ ಕನ್ಸಲ್ಟಿಂಗ್ ಸೇವೆಗಳನ್ನೊಳಗೊಂಡಿರುವ ಕಂಪನಿ ಇನ್ಫೋಟೋರೋಸ್. ಅಮೆರಿಕದಲ್ಲಿ ಅಟ್ಲಾಂಟಾ ಹಾಗೂ ಭಾರತದಲ್ಲಿ ಬೆಂಗಳೂರಿನಲ್ಲಿ ಸಂಸ್ಥಾಪಿತವಾಗಿರುವ ಇನ್ಫೋಟೋರೋಸ್ ಪ್ರಾಡಕ್ಟ್-ಇಂಜಿನಿಯರಿಂಗ್, ಜಾಹಿರಾತು, ಡಿಜಿಟಲ್ ಮಾಧ್ಯಮ, ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆ - ಇವೇ ಮೊದಲಾದ ಕ್ಷೇತ್ರಗಳಲ್ಲಿ ಪರಿಣತಿಯ ಇತಿಹಾಸವನ್ನು ಹೊಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ವಾಣಿಜ್ಯ ಸುದ್ದಿಗಳುView All

English summary
Roonga Inc. and InfoToros Corporation announce strategic partnership to include co-development of Roonga and market expansion into India and especially in Bangalore. Are you ready to share your things with others?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more