ಮೇಲ್ಮನೆ: ಬಿಜೆಪಿ ಸೋಲು ಗ್ಯಾರಂಟಿ- ಯಡಿಯೂರಪ್ಪ

council-elections-bjp-defeat-certain-yeddyurappa
ಬೆಂಗಳೂರು, ಮೇ 22: ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಕಷ್ಟ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರುವ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ಹೀಗೆ ಬಿಜೆಪಿಗೆ ಭವಿಷ್ಯ ನುಡಿದಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ರಚನೆ ಮಾಡಿರುವ 4 ಸಮಿತಿಗಳು ವಿವೇಚನಾರಹಿತವಾಗಿವೆ.

ಪಕ್ಷದ ಮೂಲದವರೇ ಸಮಿತಿಯಲ್ಲಿ ಇರಬೇಕು ಎಂದು ರಚನೆ ಮಾಡಲಾಗಿದೆ. ಆದರೆ ಆ ರೀತಿ ಮಾಡುವುದು ಸರಿಯಲ್ಲ. ನನ್ನ ಬೆಂಲಿಗರನ್ನು ದೂರವಿಡಲಾಗಿದೆ. ಚಿಕ್ಕಮಗಳೂರು-ಉಡುಪಿ ಉಪಚುನಾವಣೆಯಲ್ಲಿ ಪಕ್ಷ ಸೋತಿದೆ. ಆದರೂ ಬಿಜೆಪಿ ಮುಖಂಡರು ಬುದ್ಧಿ ಕಲಿತಿಲ್ಲ ಎಂದು ಬಿಎಸ್‌ವೈ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಸ್ವತಃ ತಾವೇ ಚುನಾವಣೆ ಪ್ರಚಾರದಿಂದ ದೂರವಿರುವುದಾಗಿ ಘೋಷಿಸಿದ ಬಳಿಕ ಪಕ್ಷವು, ಯಡಿಯೂರಪ್ಪ ಬೆಂಲಿಗರನ್ನು ಸಹ ಪ್ರಚಾರದಿಂದ ದೂರವಿಟ್ಟಿದೆ. ಇದರಿಂದ ತಮ್ಮ ಬೆಂಬಲಿಗರನ್ನು ದೂರವಿಡಲಾಗಿದೆ ಎಂದು ವ್ಯಘ್ರಗೊಂಡ ಯಡಿಯೂರಪ್ಪ ಈ ರೀತಿ ಹತಾಶ ಹೇಳಿಕೆ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.

ಯಡಿಯೂರಪ್ಪ ಜನತಾ ದರಬಾರು: ಮುಖ್ಯಮಂತ್ರಿಯಾಗಿದ್ದ ವೇಳೆ ಜನತಾ ದರ್ಶನ ನಡೆಸುತ್ತಿದ್ದ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿದ 9 ತಿಂಗಳ ನಂತರ ಮತ್ತೆ ನಿನ್ನೆಯಿಂದ (ಮೇ21) ಜನತಾ ದರ್ಶನ ಆರಂಭಿಸಿದ್ದಾರೆ. ಭಾನುವಾರ ಹೊರತುಪಡಿಸಿ, ಪ್ರತಿದಿನ 4 ಗಂಟೆ ಕಾಲ ಜನತಾ ದರ್ಶನಕ್ಕಾಗಿ ಸಮಯ ಮೀಸಲಿಟ್ಟಿದ್ದಾರೆ. ಬೆಳಗ್ಗೆ 9 ರಿಂದ 11 ಹಾಗೂ ಸಂಜೆ 5 ರಿಂದ 7 ರವರೆಗೆ ಜನರ ಸಮಸ್ಯೆ ಆಲಿಸಲು ಅವರು ನಿರ್ಧರಿಸಿದ್ದಾರೆ. ಮೊದಲ ದಿನವಾದ ಸೋಮವಾರ ಸುಮಾರು 50ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+