ಪಾಕಿಸ್ತಾನದಲ್ಲಿ ದುಷ್ಕರ್ಮಿಗಳಿಂದ ಶಿವಾಲಯ ಧ್ವಂಸ

ಆದರೆ ದೇವಸ್ಥಾನದ ಅರ್ಚಕರ ಪುತ್ರಿ ಫೋಲ್ ವತಿ ಕೋರ್ಟ್ ಮೆಟ್ಟಿಲು ಹತ್ತಿದ್ದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹೈಕೋರ್ಟ್ ಕಳೆದ ವರ್ಷ ಆದೇಶ ನೀಡಿತ್ತು. ಅದರಂತೆ ಈ ದೇವಸ್ಥಾನದಲ್ಲಿ ಇತ್ತೀಚೆಗೆ ಪೂಜೆ ನಡೆಯುತ್ತಿತ್ತು.
ಮೊನ್ನೆ (ಮೇ 20) ಸಂಜೆ ಸುಮಾರು 6.30ರ ವೇಳೆಯಲ್ಲಿ ಈ ಗೋರಖನಾಥ ದೇವಾಲಯಕ್ಕೆ ನುಗ್ಗಿದ ಎಂಟು ಜನರ ತಂಡ ಅಲ್ಲಿನ ಶಿವಲಿಂಗವನ್ನು ಧ್ವಂಸಗೊಳಿಸಿದರು. ಬಳಿಕ, ಪವಿತ್ರ ಧಾರ್ಮಿಕ ಪುಸ್ತಕಗಳಿಗೆ ಬೆಂಕಿ ಹಚ್ಚಿದರು. ನಂತರ, ವಿಗ್ರಹಗಳನ್ನು ಕದ್ದೊಯ್ದರು. ದೇವಾಲಯದ ಅರ್ಚಕ ಈ ಘಟನೆಯನ್ನು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಪೊಲೀಸರು ದೇವಾಲಯಕ್ಕೆ ಸೂಕ್ತ ಭದ್ರತೆಯನ್ನು ನೀಡಬೇಕೆಂದು ಘಟನೆಯ ನಂತರ ಸ್ಥಳೀಯರು ಒತ್ತಾಯಿಸಿದ್ದು ಘಟನೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ಅಲ್ಲಿನ ಕೆಲ ಕೋಮುವಾದಿ ಸಂಘಟನೆಗಳು ನಿರಂತರ ದಾಳಿ ನಡೆಸುತ್ತಿದ್ದು ಇದು ಈ ತಿಂಗಳಿನಲ್ಲಿ ಇಲ್ಲಿನ ದೇವಾಲಯದ ಮೇಲೆ ನಡೆದ ಮೂರನೇ ದಾಳಿ ಪ್ರಕರಣವಾಗಿದೆ.












Click it and Unblock the Notifications