ಎರಡನೇ ಪಿಯು ಫಲಿತಾಂಶಕ್ಕೆ ದಿನಗಣನೆ

Karnataka 2nd PUC results 2012 on 23rd May
ಬೆಂಗಳೂರು, ಮೇ 21 : ಎರಡು ಸಾವಿರದ ಹನ್ನೆರಡನೇ ಇಸವಿಯ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮೇ 23ರ ಬುಧವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

Karnataka 2nd PUC results 2012, Now online

ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ದಿನಾಂಕದ ಬಗ್ಗೆ ಒಂದು ಮುನ್ಸೂಚನೆ ನೀಡಿದ್ದಾರೆ. ಆದರೆ, ಅಂತರ್ಜಾಲದಲ್ಲಿ ಫಲಿತಾಂಶ ಯಾವ ಸಮಯಕ್ಕೆ ಸಿಕ್ಕತ್ತೆ ಅಂತ ಇನ್ನೂ ನಿರ್ಧಾರವಾಗಿಲ್ಲ.

ನೆಟ್ಟಿನಲ್ಲಿ ಫಲಿತಾಂಶ ದೊರೆಯುವ ಸಮಯವನ್ನು ಪಿಯು ಮಂಡಳಿಯ ನಿರ್ದೇಶಕಿ ವಿ. ರಶ್ಮಿ ಮತ್ತು ಸಚಿವ ಕಾಗೇರಿಯವರು ನಿರ್ಧರಿಸಿದ ನಂತರ ತಿಳಿಯಪಡಿಸಲಾಗುವುದೆಂದು ಮಂಡಳಿಯ ಉನ್ನತ ಮೂಲಗಳು ತಿಳಿಸಿವೆ. ಅಂತರ್ಜಾಲದಲ್ಲಿ ಫಲಿತಾಂಶ ಪ್ರಕಟವಾದ ಮರುದಿನ ಆಯಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು.

ಉಪನ್ಯಾಸಕರು ಸಂಬಳ ಇತ್ಯಾದಿ ಬೇಡಿಕೆ ಮುಂದಿಟ್ಟು ಮುಷ್ಕರ ಹೂಡಿದ್ದರಿಂದ ಈ ಬಾರಿಯ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನ ಸಕಾಲಕ್ಕೆ ನಡೆಯದೆ ಮುಂದೂಡಬೇಕಾಯಿತು. ಆದರೆ, ಫಲಿತಾಂಶ ಸಿದ್ಧವಾಗಿದ್ದು ಪ್ರಕಟಣೆಯೊಂದೇ ಬಾಕಿ ಎಂದು ಮಂಡಳಿಯ ಅಧಿಕಾರಿಗಳು ನಮ್ಮ ವರದಿಗಾರರಿಗೆ ತಿಳಿಸಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆರು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇಷ್ಟು ಹೊತ್ತಿಗೆ ಫಲಿತಾಂಶ ಬಂದಿರಬೇಕಿತ್ತು ಆದರೆ, ಸಿಇಟಿ ಪರೀಕ್ಷೆಗಳು (ಮೇ 21-22) ಮುಗಿಯುವತನಕ ಪ್ರಕಟಿಸಬಾರದೆಂಬ ನಿರ್ಧಾರಕ್ಕೆ ಮಂಡಳಿ ಬಂದಿತ್ತು.

ನಮ್ಮ ವೆಬ್ ಸೈಟಿನಲ್ಲಿ ಫಲಿತಾಂಶ ಪ್ರಕಟವಾಗುತ್ತದೆ. ಇತ್ತೀಚಿನ ಮಾಹಿತಿಗಳಿಗೆ ಗಮನಿಸುತ್ತಿರಿ. ವಿದ್ಯಾರ್ಥಿಗಳು ತಮ್ಮ ಇಮೇಲ್ ವಿಳಾಸವನ್ನು ಇಲ್ಲಿ ನೀಡಿ ಕಾಲಕಾಲಕ್ಕೆ ಮಾಹಿತಿ ಪಡೆಯಬಹುದು. ಒನ್ಇಂಡಿಯಾ ಕನ್ನಡ ಎಸ್ಸೆಸ್ಸೆಲ್ಸಿ ಫಲಿತಾಂಶ ಕೂಡ ಪ್ರಕಟಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+