ಅಜ್ಮೀರ್ ದರ್ಗಾದಲ್ಲಿ ಸಿದ್ದರಾಮಯ್ಯ ಪ್ರಾರ್ಥನೆ

ಸಾಮಾನ್ಯವಾಗಿ ಮಂದಿರ, ಮಸೀದಿ, ಚರ್ಚ್, ಮಠಗಳಿಗೆ ಭೇಟಿ ನೀಡುವುದು ಅಂದರೆ ಸಿದ್ದರಾಮಯ್ಯ ಅವರಿಗೆ ಅಷ್ಟಕ್ಕಷ್ಟೆ. ತೀರಾ ನಾಸ್ತಿಕನಲ್ಲದಿದ್ದರೂ ರಾಜಕೀಯದಲ್ಲಿನ ಇತರೆ ಆಸ್ತಿಕರಂತೆ ಅವರು ಧಾರ್ಮಿಕತೆಯನ್ನು ಹೊದ್ದುಮಲಗಿಲ್ಲ.
ಆದರೆ ದೆಹಲಿಯಲ್ಲಿ ರಾಷ್ಟ್ರೀಯ ಕುರುಬರ ಒಕ್ಕೂಟ ರಚನೆ ಉದ್ದೇಶದಿಂದ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕರೆದ ದುಂಡುಮೇಜಿನ ಸಮ್ಮೇಳನದ ನಂತರ ಸಿದ್ದರಾಮಯ್ಯ ಅವರು ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ನಾಯಕ ಎಂದು ಬಿಂಬಿಸಿಕೊಳ್ಳಲು ಹಾತೊರೆಯುತ್ತಿರುವ ಸಿದ್ದರಾಮಯ್ಯ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರು.












Click it and Unblock the Notifications