ಬೆಂಗಳೂರಿನಲ್ಲಿ ಯುಕೆ ವೀಸಾ ಕೇಂದ್ರ ಆರಂಭ

UK visa application centre in Bangalore
ಬೆಂಗಳೂರು, ಮೇ.21: ಇಂಗ್ಲೆಂಡ್ ಪ್ರವಾಸ ಮಾಡಬಯಸುವ ಬೆಂಗಳೂರಿಗರಿಗೆ ಶುಭ ಸುದ್ದಿ ಇಲ್ಲಿದೆ. ಸೆಂಟ್ರಲ್ ಸ್ಟ್ರೀಟ್ ನಲ್ಲಿ ಯುಕೆ ವೀಸಾ ಕೇಂದ್ರ ಆರಂಭವಾಗಿದೆ. ಮೇ.28 ರಿಂದ ಈ ಕೇಂದ್ರ ಕಾರ್ಯಾರಂಭವಾಗಲಿದೆ.

2012ರಲ್ಲಿ ರಾಣಿ ಎಲಿಜಬೇತ್ ವಜ್ರ ಮಹೋತ್ಸವ ಹಾಗೂ ಲಂಡನ್ ಒಲಿಂಪಿಕ್ಸ್ ನಡೆಯುವುದು ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸಾಧ್ಯತೆಯಿದೆ ಎಂದು ಕರ್ನಾಟಕದಲ್ಲಿರುವ ಬ್ರಿಟಿಷ್ ಉಪ ರಾಯಭಾರಿ ಇಯಾನ್ ಫೆಲ್ಟನ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಕೇಂದ್ರ ಆರಂಭದಲ್ಲಿ ಹೆಚ್ಚುವರಿ 2 ಗಂಟೆಗಳ ಕಾಲ ತನ್ನ ಗ್ರಾಹಕರಿಗಾಗಿ ಕಾರ್ಯ ನಿರ್ವಹಿಸಲಿದೆ. ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ತನಕ ವೀಸಾ ಅರ್ಜಿ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರದ ವಕ್ತಾರರು ಹೇಳಿದ್ದಾರೆ.

ಭಾರತದಿಂದ ಶೇ 30 ರಷ್ಟು ವಿದ್ಯಾರ್ಥಿಗಳು ಯುಕೆ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಬಯಸಿ ವೀಸಾ ಅರ್ಜಿ ತುಂಬುತ್ತಿದ್ದಾರೆ. ಆದರೆ, ಕಳೆದ ಶೈಕ್ಷಣಿಕ ವರ್ಷದಲ್ಲಿ ಭಾರತ ಮೂಲದ ವಿದ್ಯಾರ್ಥಿಗಳ ಅರ್ಜಿಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ ಎಂದು ಇತ್ತೀಚೆಗೆ ಸಮೀಕ್ಷೆಯಿಂದ ತಿಳಿದು ಬಂದಿತ್ತು.

ಭಾರತೀಯ ವಿದ್ಯಾರ್ಥಿಗಳ ವೀಸಾ ಅರ್ಜಿ ಸಲ್ಲಿಕೆ ಕುಸಿತ ಕಂಡರೆ ವಾರ್ಷಿಕವಾಗಿ 5 ರಿಂದ 8 ಬಿಲಿಯನ್ ಪೌಂಡ್ ನಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಯುಕೆ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉಳಿದಂತೆ, ಒಲಿಂಪಿಕ್ಸ್ ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+