ಖಾಸಗಿತನಕ್ಕೆ ಧಕ್ಕೆ: Facebook ವಿರುದ್ಧ ಮೊಕದ್ದಮೆ

ಆದರೆ Facebook ಮಾನವೂ ಈಗ ಹರಾಜಾಗಿದೆ. ಬೇರೆಯವರ ಮಾನ ಬಟಾಬಯಲು ಮಾಡಿದ್ದಕ್ಕಾಗಿ Facebook ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ಹೂಡಲಾಗಿದೆ. ಒಟ್ಟು
21 ಖಾಸಗಿ ದೂರುಗಳು ದಾಖಲಾಗಿದ್ದವು. ಇದನ್ನು ಕಂಡು ಬೆಚ್ಚಿಬಿದ್ದ ಕೋರ್ಟ್ ಅದನ್ನೆಲ್ಲ ಒಟ್ಟು ಮಾಡಿ ಒಂದೇ ಒಂದು ಪ್ರಧಾನ ದೂರನ್ನು ದಾಖಲಿಸಿಕೊಂಡಿದೆ.
ವಿಶ್ವದ ಅತಿ ದೊಡ್ಡ ಸಾಮಾಜಿಕ ವೆಬ್‌ಸೈಟ್ ವಿರುದ್ಧ ಅಮೆರಿಕದ Stewart Law US ಕಾನೂನು ಸಂಸ್ಥೆಯು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. U.S. Wiretap Act ಪ್ರಕಾರ ಪರಿಹಾರಾರ್ಥವಾಗಿ 15 ಶತಕೋಟಿ ಡಾಲರ್ ನೀಡುವಂತೆಯೂ ಸಂಸ್ಥೆ ಕೋರಿದೆ.
2009ರಲ್ಲಿ ಅಂದರೆ Facebook ಸ್ಥಾಪನೆಯಾದ ಮೂರನೇ ವರ್ಷದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಇಂತಹುದೇ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಮೊನ್ನೆ ಮಾರ್ಚಿನಲ್ಲಿ ತಮ್ಮ ವಿಳಾಸಗಳನ್ನು ಅನುಮತಿ ಪಡೆಯದೆ upload ಮಾಡಲಾಗಿದೆ ಎಂದು Facebook ವಿರುದ್ಧ 13 ಜನ ತಿರುಗಿ ಬಿದ್ದಿದ್ದರು.
ನಿಮಗೂ ಇಂತಹ ಅನುಭವವಾಗಿದೆಯಾ? ಸ್ವಲ್ಪ ತಡೆಯಿರಿ. ಈ ಆರಂಭಿಕ ಷೇರು ಬಿಡುಗಡೆ ಖಾತೆ ಮುಕ್ತಾಯವಾದ ಬಳಿಕ Stewart Law US ಕಾನೂನು ಸಂಸ್ಥೆ ಮತ್ತೊಂದು ದೂರನ್ನು ದಾಖಲಿಸಲಿದ್ದು, ಅಮೆರಿಕದಾಚೆ ಹೀಗೆ ಖಾಸಗಿತನಕ್ಕೆ ಧಕ್ಕೆಯುಂಟು ಮಾಡಿದ ಪ್ರಕರಣಗಳನ್ನು ಒಟ್ಟು ಮಾಡಿ Facebook ವಿರುದ್ಧ ಮತ್ತೊಂದು ದೂರನ್ನು ದಾಖಲಿಸಲು ಸಜ್ಜಾಗುತ್ತಿದೆ.












Click it and Unblock the Notifications