ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಜಗನ್ ರೆಡ್ಡಿಗಲ್ಲ, ಜನತೆಗೆ ಭಾರಿ ಹೊಡೆತ

By Mahesh
|
Google Oneindia Kannada News

YS Jagan Reddy
ಹೈದರಾಬಾದ್, ಮೇ.16 : ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದದಂತೆ ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಲು ಮುಹೂರ್ತ ಹುಡುಕುತ್ತಿರುವ ಸಿಬಿಐ ತಂಡ ಬುಧವಾರ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಬಂಧಿಸಿ ಸಂಚಲನ ಮೂಡಿಸಿದೆ.

ಆಂಧ್ರಪ್ರದೇಶ ಸರ್ಕಾರ ಮಾಜಿ ವಿಶೇಷ ಕಾರ್ಯದರ್ಶಿ ಕೆವಿ ಬ್ರಹ್ಮಾನಂದ ರೆಡ್ಡಿ ಹಾಗೂ ಮ್ಯಾಟ್ರಿಕ್ಸ್ ಲ್ಯಾಬ್ಸ್ ಸ್ಥಾಪಕ ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಅವರನ್ನು ಸಿಬಿಐ ತಮ್ಮ ವಶಕ್ಕೆ ತೆಗೆದುಕೊಂಡಿದೆ. ಪ್ರಸಾದ್ ಬಂಧನದಿಂದ ಜನತೆ, ಕೈಗಾರಿಕಾ ವಲಯ ಕಂಗಾಲಾಗಿದೆ.

ಭಾರತೀಯ ರೈಲ್ವೇ ಇಲಾಖೆಯಲ್ಲಿ ಅಕೌಂಟ್ ವಿಭಾಗದ ಅಧಿಕಾರಿಯಾಗಿರುವ ಬ್ರಹ್ಮಾನಂದ ರೆಡ್ಡಿಯನ್ನು ಕೋಲ್ಕತ್ತಾದಿಂ ಏಜೆನ್ಸಿ ಮೂಲಕ ಕರೆಸಿಕೊಂಡು ಬಂಧಿಸಲಾಗಿದೆ. ಅಕ್ರಮ ಆಸ್ತಿ ಗಳಿಸಲು ಜಗನ್ ಗೆ ಸಹಾಯ ನೀಡಿದ ಆರೋಪ ಬ್ರಹ್ಮಾನಂದ ಅವರ ಮೇಲಿದೆ.

ಜಗನ್ ಒಡೆತನದ ಭಾರತಿ ಸಿಮೆಂಟ್ಸ್ ನಲ್ಲಿ 244 ಕೋಟಿ ರು, ಕಾರ್ಮೆಲ್ ಏಷ್ಯಾದಲ್ಲಿ 200 ಕೋಟಿ ರು ಹಾಗೂ ಜಗತಿ ಪಬ್ಲಿಕೇಷನ್ ಮೇಲೆ 100 ಕೋಟಿ ರು ಹೂಡಿರುವ ನಿಮ್ಮಗಡ್ಡ ಪ್ರಸಾದ್ ಅವರು ಮಾ ಟಿವಿ ಚೇರ್ ಮೇನ್ ಕೂಡಾ ಹೌದು.

ದಿವಂಗತ ವೈಎಸ್ ರಾಜಶೇಖರ್ ರೆಡ್ಡಿ ಅವರು ಸಿಎಂ ಆಗಿದ್ದ ಕಾಲದಲ್ಲಿ ಗುಂಟೂರು ಹಾಗು ಪ್ರಕಾಶಂ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್(VANPIC) ಸ್ಥಾಪನೆಗಾಗಿ ಪ್ರಸಾದ್ ಅವರ ಕಂಪನಿಗೆ ಸುಮಾರು 15,000 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು.

ಈ ವ್ಯವಹಾರದಲ್ಲಿ ಸುಮಾರು 800 ಕೋಟಿ ರು ಅದಲು ಬದಾಗಿತ್ತು ಎಂದು ಸಿಬಿಐ ಹೇಳಿದೆ. ಬಂಧಿತ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 120B, 409, 420 ಮತ್ತು 477A ಅನ್ವಯ ಕೇಸು ದಾಖಲಿಸಲಾಗಿದೆ.

ಸಿಬಿಐ ಮಾಡಿದ್ದು ಸರಿಯೇ?:
ಆದರೆ, ನಿಮ್ಮಗಡ್ಡ ಪ್ರಸಾದ್ ಬಂಧನದಿಂದ ಫಾರ್ಮಾಸ್ಯೂಟಿಕಲ್ಸ್ ಕೈಗಾರಿಕೆಗೆ ಭಾರಿ ಹೊಡೆತ ಬೀಳಲಿದೆ. ಬಿಲ್ ಕ್ಲಿಂಟನ್ ಫೌಂಡೇಶನ್ ಜೊತೆ ಸೇರಿ ಆರಂಭಿಸಿದ್ದ Clinton HIV/AIDS Initiative (CHAI)ಗೆ ಹಿನ್ನೆಡೆಯಾಗಲಿದೆ.

ಪ್ರಸಾದ್ ಅವರ Matrix Laboratories ಮೂಲಕ ಅಭಿವೃದ್ಧಿಶೀಲ ದೇಶಗಳಲ್ಲಿನ ಎಚ್ ಐವಿ/ಏಡ್ಸ್ ರೋಗಿಗಳಿಗೆ ಸೂಕ್ತ ಔಷಧಿಗಳನ್ನು ಅಲ್ಪ ಮೊತ್ತಕ್ಕೆ ನೀಡಲಾಗುತ್ತಿದೆ.

ಇದಲ್ಲದೆ ಎಲ್ ವಿ ಪ್ರಸಾದ್ ಕಣ್ಣಿನ ಆಸ್ಪತ್ರೆ ಮೂಲಕ 2020ರೊಳಗೆ ಆಂಧ್ರಪ್ರದೇಶದಲ್ಲಿ ಅಂಧತ್ವ ನಿವಾರಣೆಗಾಗಿ ಆರಂಭಿಸಿದ ಅಭಿಯಾನಕ್ಕೆ ಹೊಡೆತ ಬೀಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾರಣ, ಸಾಕ್ಷಿ ಟಿವಿ, ಪತ್ರಿಕೆ ಬ್ಯಾಂಕ್ ಖಾತೆಗಳು ಇನ್ನೂ ಜಪ್ತಿಯಾಗೇ ಇದೆ. ಬ್ಯಾಂಕ್ ಖಾತೆಗಳ ಮುಟ್ಟುಗೋಲು ತಪ್ಪಿಸಿ ಎಂದು ಹೈಕೋರ್ಟ್ ಮೊರೆ ಹೋಗಿದ್ದ ಜಗನ್ ಗೆ ನಿರಾಶೆಯಾಗಿದೆ. ಇದೇ ರೀತಿ ಪ್ರಸಾದ್ ಬ್ಯಾಂಕ್ ಖಾತೆಗೂ ಕೊಕ್ಕೆಯಾದರೆ ಆಂಧ್ರದಲ್ಲಿ ಒಂದಷ್ಟು ಉದ್ಯಮಗಳು ಸ್ಥಗಿತಗೊಳ್ಳಲಿದೆ.

English summary
The CBI has arrested KV Brahmananda Reddy, Former special secretary, Andhra Pradesh government and Matrix Lab founder Nimmagadda Prasad, industrialist on Wednesday(May.16) in the illegal disproportionate assets case allegedly involving YSR Congress leader and Kadapa MP YS Jaganmohan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X